ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ ಕ್ಯಾಮೆರಾ ಕೌಶಲ ಅಪೂರ್ವ

Last Updated 21 ಜನವರಿ 2012, 6:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತೇಜಸ್ವಿಯವರಿಗೆ ಪರಿಸರ, ಛಾಯಾಗ್ರಹಣ ಹಾಗೂ ಸಮಾಜದ ಬಗ್ಗೆ ಇದ್ದ ಆಸಕ್ತಿ ಅಪೂರ್ವವಾದುದು ಎಂದು ಉಪನ್ಯಾಸಕ ಬೆಳವಾಡಿ ಮಂಜುನಾಥ ಅಭಿಪ್ರಾಯಪಟ್ಟರು.

ಅವರು ನಗರದ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಮೂಡಿಗೆರೆ ವಿಸ್ಮಯ ಪ್ರತಿಷ್ಠಾನ, ಕೊಟ್ಟಿಗೆಹಾರ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಜೀವ ವೈವಿದ್ಯ ಸಂಶೋದನಾ ಕೇಂದ್ರ ಸಹಯೋಗದಲ್ಲಿ ಏರ್ಪಡಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಬದುಕು-ಬರಹ ವಿಚಾರ ಸಂಕಿರಣ, ಸಂವಾದ ಹಾಗೂ ತೇಜಸ್ವಿಯವರ ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಉಪನ್ಯಾಸ ನೀಡಿದರು.

ತೇಜಸ್ವಿಯವರು ಬಹುಮುಖ ಪ್ರತಿಭೆಯ ಸೀಮಾಪುರುಷರಾಗಿದ್ದರು. ಬರವಣಿಗೆಯಲ್ಲಿ ತಂದೆ ಕುವೆಂಪು ಅನುಸರಿಸದೇ ತನ್ನದೇ ಆದ ಸಹಜ, ನವ್ಯ ಹಾಗೂ ಟಿ.ಎಸ್.ಏಲಿಯಟ್‌ನ ಇಮ್ಯೋಜಿನೇಷನ್ ಶೈಲಿ ರೂಢಿಸಿಕೊಂಡ ವಿಶಿಷ್ಟ ಗದ್ಯ ಲೇಖಕರಾಗಿದ್ದರು. ಅವರನ್ನು ಸಾಹಿತ್ಯಕ್ಕಷ್ಟೆ ಸೀಮಿತಗೊಳಿಸದೆ ಕಲೆ, ವಿಜ್ಞಾನ ಮತ್ತು ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಒಲವಿನ ಹಿನ್ನೆಲೆಯಲ್ಲಿ ಅವರ ವ್ಯಕ್ತಿತ್ವ ಗಮನಿಸಬೇಕು. ಅವರ ಸಮಗ್ರ ಸಾಹಿತ್ಯವನ್ನು ಅಂತರರಾಷ್ಟ್ರೀಯ ಅಧ್ಯಯ ನಕ್ಕೆ ಒಳಪಡಿಸುವ ಅವಶ್ಯಕತೆ ಇದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್.ಚಂದ್ರಪ್ಪ ಮಾತನಾಡಿ, ತೇಜಸ್ವಿಯವರ ದಾರ್ಶನಿಕ ತೆಯು ಗಾಂಧೀಜಿ ಮತ್ತು ವಿವೇಕಾನಂದರ ದಾರ್ಶನಿಕತೆಗೆ ಸಮಾನವಾದದ್ದು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯ ಜಿ.ಬಿ.ವಿರೂಪಾಕ್ಷ ತೇಜಸ್ವಿ ಯವರ ವ್ಯಕ್ತಿ ವಿಶಿಷ್ಟತೆಯ ಬಗ್ಗೆ ತಿಳಿಸಿದರು.

ಯುರೇಕಾ ಅಕಾಡೆಮಿ ದೀಪಕ್ ದೊಡ್ಡಯ್ಯ, ಮಗ್ಗಲಮಕ್ಕಿ ಗಣೇಶ್, ಬಾಪೂ ದಿನೇಶ್ ಇನ್ನಿತರರು ಇದ್ದರು.


`ವಿಜ್ಞಾನ ಜತೆ ತೇಜಸ್ವಿ ಸಾಹಿತ್ಯ~

ಮೂಡಿಗೆರೆ: ತೇಜಸ್ವಿ ಸಾಹಿತ್ಯದಲ್ಲಿ ವಿಜ್ಞಾ ನದ ಜತೆಗೆ ಹಾಸ್ಯ ಬರಹವೂ ಹೆಚ್ಚಾಗಿತ್ತು. ಹಾಸ್ಯದೊಂದಿಗೇ ವಿಚಾರ ವನ್ನು ತಿಳಿಸುವ ಸಾಹಿತ್ಯ ಅವರದಾಗಿತ್ತು ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ. ಬಸವರಾಜು ಹೇಳಿದರು.
 
ತಾಲ್ಲೂಕಿನ ಸಂಸೆಯಲ್ಲಿ ಇತ್ತೀಚೆಗೆ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ನಡೆದ ಸಾಹಿತಿ   ಪ್ರಾಂಶುಪಾಲರಾದ ಸತೀಶ್ ಮತ್ತು ವಿಸ್ಮಯ ಪ್ರತಿಷ್ಠಾನದ ಕಾರ್ಯದರ್ಶಿ ಮಗ್ಗಲಮಕ್ಕಿ ಗಣೇಶ್, ಸಂಶೋಧನಾ ಕೇಂದ್ರದ ಮೇಲ್ವಿ ಚಾರಕರಾದ ಬಾಪು ದಿನೇಶ್ ಹಾಗೂ ಉಪನ್ಯಾಸಕರು ಹಾಗೂ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT