ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜ್‌ಪಾಲ್‌ ವಿಚಾರಣೆಗೆ ತ್ವರಿತ ಕೋರ್ಟ್‌

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ/ಪಣಜಿ (ಪಿಟಿಐ): ಸಹೋ­ದ್ಯೋಗಿ ಪತ್ರಕರ್ತೆ ಮೇಲೆ ಅತ್ಯಾಚಾರ ನಡೆ­ಸಿದ ಆರೋಪ ಹೊತ್ತ ತೆಹೆಲ್ಕಾ ಪ್ರಧಾನ ಸಂಪಾದಕ ತರುಣ್‌ ತೇಜ್‌­ಪಾಲ್‌ ಪ್ರಕರಣವನ್ನು ತ್ವರಿತ ಕೋರ್ಟ್‌ನಲ್ಲಿ ವಿಚಾ­ರಣೆಗೆ ಒಳ­ಪಡಿ­ಸಲು ಗೋವಾ ಸರ್ಕಾರ ನಿರ್ಧರಿಸಿದೆ.

‘ಪ್ರಕ­ರ­ಣದ ವಿಚಾರಣೆಯನ್ನು ತ್ವರಿತ ಕೋರ್ಟ್‌ನ ಮಹಿಳಾ ನ್ಯಾಯಾ­ಧೀಶ­­ರಿಂದಲೇ ನಡೆಸ­ಲಾ­ಗುತ್ತದೆ. ಇದ­ರಲ್ಲಿ ಸುಪ್ರೀಂಕೋರ್ಟ್‌ ಮಾರ್ಗ­ಸೂಚಿ ಅನುಸರಿ­ಸಲಾ­ಗುತ್ತದೆ ಎಂದು ಗೋವಾ ಮುಖ್ಯಮಂತ್ರಿ ಮನೋ­ಹರ್‌ ಪರಿಕ್ಕರ್‌ ತಿಳಿಸಿದ್ದಾರೆ.

‘ಪತ್ರಕರ್ತೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತನಿಖೆ ನಡೆ­ಯುತ್ತಿದೆ. ಇದ­ರಲ್ಲಿ ಯಾವುದೇ ಹಸ್ತಕ್ಷೇಪ ನಡೆಸು­ತ್ತಿಲ್ಲ. ಹಿಂದಿನ ದ್ವೇಷದಿಂದ ತೇಜ್‌­ಪಾಲ್‌ ಅವ­ರನ್ನು ಕೆಟ್ಟ ರೀತಿ ಅಥವಾ ಭಿನ್ನ ಮಾರ್ಗ­ದಲ್ಲಿ ನಡೆಸಿ­ಕೊಳ್ಳಲಾಗು­ತ್ತಿದೆ ಎಂಬು­ದಾಗಿ ಯಾರೂ ಚಿಂತಿಸುವ ಅವ­ಶ್ಯ­ಕತೆ ಇಲ್ಲ’ ಎಂದು ಅವರು ದೆಹಲಿ­ಯಲ್ಲಿ ಸುದ್ದಿ­ಗಾರರ ಪ್ರಶ್ನೆಗೆ ಉತ್ತರಿಸಿದರು.

ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿ­ದಂತೆ ತೆಹೆಲ್ಕಾವು ಮಾರುವೇಷದ ಕಾರ್ಯಾ­­ಚರಣೆ ನಡೆಸಿ, ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್‌ ಹಣ ಸ್ವೀಕ­ರಿ­ಸುತ್ತಿದ್ದ ಟೇಪ್‌ ಬಹಿರಂಗ­ಪಡಿಸಿ, ಅವರ ರಾಜೀ­ನಾಮೆಗೆ ಕಾರಣ­ವಾದ ಘಟನೆ­ಯನ್ನು ಈಗ ಇಲ್ಲಿ ಸ್ಮರಿಸಬಹುದು.

ಇಂದು ಸಾಕ್ಷಿಗಳ ಹೇಳಿಕೆ: ಈ ಮಧ್ಯೆ, ಪತ್ರಕರ್ತೆ ಘಟನೆ­ಯನ್ನು ಮೂವರ ಬಳಿ ಹೇಳಿಕೊಂಡಿದ್ದು, ಈ  ಸಾಕ್ಷಿ­ಗಳು ಶುಕ್ರ­­ವಾರ ಗೋವಾ
ಮ್ಯಾಜಿ­ಸ್ಟ್ರೇಟ್‌ ಮುಂದೆ ಹಾಜ­ರಾಗಿ ಹೇಳಿಕೆ ನೀಡುವ ನಿರೀಕ್ಷೆಯಿದೆ. ಈ ಮೂವರು ತನಿಖೆಗೆ ಹಾಜರಾಗುವ ವಿಷಯವನ್ನು ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿ­ಯೊಬ್ಬರು ಖಚಿತ­ಪಡಿಸಿದ್ದಾರೆ.

ತೆಹೆಲ್ಕಾ ಮಾಜಿ ವ್ಯವಸ್ಥಾಪಕ ಸಂಪಾ­­­ದಕಿ ಶೋಮಾ ಚೌಧರಿ, ಸಮನ್ಸ್‌ ಜಾರಿ ಮಾಡಿದ ಗೋವಾ ಪೊಲೀ­ಸರ ಮುಂದೆ ಶನಿವಾರ ಹಾಜ­ರಾಗಿ ಹೇಳಿಕೆ ನೀಡಲಿ­ದ್ದಾರೆ. ಕೋರ್ಟ್‌ ಮುಂದೆ ಶನಿ­ವಾರ ಹಾಜರುಪಡಿಸ­ಲಾಗುವ ತೇಜ್‌­ಪಾಲ್‌ ಅವರನ್ನು ಇನ್ನೂ ಹೆಚ್ಚುವರಿ­ಯಾಗಿ ಎಂಟು ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸರು ಕೋರುವ ಸಾಧ್ಯತೆಗಳಿವೆ. ಆರು ದಿನ­ಗಳ ತೇಜ್‌­ಪಾಲ್‌, ಪೊಲೀಸ್‌ ಕಸ್ಟಡಿ ಶುಕ್ರ­ವಾರ ಸಂಜೆಗೆ ಕೊನೆಗೊಳ್ಳಲಿದೆ.

‘ತನಿಖೆ ಸರಿಯಾದ ಮಾರ್ಗದಲ್ಲಿ ನಡೆ­ಯು­ತ್ತಿದ್ದು, ನಾವು ವಿವರವಾಗಿ ಪ್ರಶ್ನಿ­ಸು­ತ್ತಿದ್ದೇವೆ. ತೇಜ್‌ಪಾಲ್‌ ತನಿಖೆಗೆ ಸಹ­ಕ­ರಿ­ಸುತ್ತಿದ್ದಾರೆ’ ಎನ್ನು­ತ್ತಾರೆ ಹಿರಿ­ಯ ಪೊಲೀಸ್‌ ಅಧಿಕಾರಿ­ಯೊಬ್ಬರು.

ಡಿವೈಎಸ್‌ಪಿ ಸಮ್ಮಿ ತಾವರ್ಸ್ ಅವರ ಮೇಲ್ವಿಚಾರಣೆಯಲ್ಲಿ ತನಿಖಾ­ಧಿ­ಕಾರಿ ಸುನಿತಾ ಸಾವಂತ್‌ ಅವರ ನೇತೃತ್ವ­ದಲ್ಲಿ ತೇಜ್‌ಪಾಲ್‌ ಹೇಳಿಕೆ­ಗಳನ್ನು ವಿಸ್ತೃತ­ವಾಗಿ ದಾಖಲಿಸಿಕೊಳ್ಳ­ಲಾಗುತ್ತಿದೆ.

ತೇಜ್‌ಪಾಲ್‌ ಪುನರುಚ್ಚಾರ: ‘ನಮ್ಮಿಬ್ಬರ ನಡುವೆ (ಪತ್ರಕರ್ತೆ­ ಜತೆ) ನಡೆದಿರುವುದು ಪರಸ್ಪರ ಸಹಮತದ ಲೈಂಗಿಕ ಚಟುವಟಿಕೆ’ ಎಂದು ತೇಜ್‌­ಪಾಲ್‌ ಪುನರುಚ್ಚರಿಸುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಹೇಳುತ್ತಾರೆ.

ಕಳೆದ ಶನಿವಾರದಿಂದ ಪೊಲೀಸ್‌ ವಶ­­ದಲ್ಲಿರುವ ತೇಜ್‌ಪಾಲ್‌ ಅವರನ್ನು ಮೂರನೇ ವೈದ್ಯಕೀಯ ಪರೀಕ್ಷೆಗೆ ಒಳ­ಪಡಿಸಲಾಗುತ್ತದೆ. ಭಾನುವಾರದಿಂದ ಅವ­ರನ್ನು ಅಪರಾಧ ವಿಭಾಗದಲ್ಲಿ ಪೊಲೀ­ಸರು ತನಿಖೆ ಮಾಡುತ್ತಿದ್ದಾರೆ.

ತೇಜ್‌ಪಾಲ್‌ ತಪ್ಪೊಪ್ಪಿ­ಕೊಳ್ಳುವ ಸಾಧ್ಯತೆ­ಯನ್ನು ಅವರ ವಕೀಲರು ತಳ್ಳಿ­ಹಾಕಿ­ದ್ದಾರೆ. ಪೊಲೀಸರು ಆರೋಪ ಪಟ್ಟಿ ದಾಖಲಿಸಿದ ನಂತರವಷ್ಟೇ ಮಾತ­ನಾಡು­ವುದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT