ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಂಟದಾರ್ಯ ಅನುಭವ ಮಂಟಪ ಲೋಕಾರ್ಪಣೆ ಇಂದು

Last Updated 3 ಸೆಪ್ಟೆಂಬರ್ 2013, 6:11 IST
ಅಕ್ಷರ ಗಾತ್ರ

ವಿಜಾಪುರ: ಡಂಬಳ-ಗದಗ ತೋಂಟ ದಾರ್ಯ ಮಠದಿಂದ ಇಲ್ಲಿಯ ಮನ ಗೂಳಿ ಬೈಪಾಸ್ ಹತ್ತಿರದ ಗುರುಪಾದೇ ಶ್ವರ ನಗರದಲ್ಲಿ ನಿರ್ಮಿಸಿರುವ `ತೋಂಟ ದಾರ್ಯ ಅನುಭವ ಮಂಟಪ' ಇದೇ 3ರಂದು ಲೋಕಾರ್ಪಣೆಗೊಳ್ಳಲಿದೆ.

ಈ ಅನುಭವ ಮಂಟಪ ಶರಣರ ವಿಚಾರಧಾರೆಗಳನ್ನು ಚರ್ಚಿಸುವ ಮತ್ತು ಅವರ ಮೌಲ್ಯಗಳನ್ನು ಎತ್ತಿಹಿಡಿಯುವ ಒಂದು ಜಾತ್ಯತೀತ ಕೇಂದ್ರವಾಗಲಿದೆ ಎಂಬುದು ಭಕ್ತರ ನಂಬಿಕೆ.

`ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ಅವರ ಪೂರ್ವಾಶ್ರಮ ವಿಜಾ ಪುರ ಜಿಲ್ಲೆ. ಸ್ವಾಮೀಜಿ ಅವರ ಮೇಲಿನ ಭಕ್ತಿ, ಅಭಿಮಾನದ ಕಾರಣವಾಗಿ ಈ ಭಾಗದ ದ್ರಾಕ್ಷಿ ಬೆಳೆಗಾರರು ಅನುಭವ ಮಂಟಪಕ್ಕೆ ನಿವೇಶನ ಕೊಡಿಸಲು ಕಾರಣರಾದರು. ಇದನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತು ಇಲ್ಲಿಯ ಭಕ್ತ ವರ್ಗಕ್ಕೆ ಸಲ್ಲುತ್ತದೆ' ಎಂದು ಗದಗ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ.ಎಸ್.ಎಸ್. ಪಟ್ಟಣಶೆಟ್ಟಿ   ಸ್ಮರಿಸುತ್ತಾರೆ.

`ಕೇಂದ್ರ ಸಚಿವರಾದ ರೆಹಮಾನ ಖಾನ್, ಆಸ್ಕರ್ ಫರ್ನಾಂಡಿಸ್, ಸಚಿವ ಎಸ್.ಆರ್. ಪಾಟೀಲ, ಸಂಸದರಾದ ಪ್ರಭಾಕರ ಕೋರೆ, ರಮೇಶ ಜಿಗಜಿಣಗಿ, ಮಾಜಿ ಸಂಸದರಾದ ಬಸನಗೌಡ ಪಾಟೀಲ ಯತ್ನಾಳ, ಕೆ.ಬಿ. ಶ್ಯಾಣಪ್ಪ, ವಿಧಾನ ಪರಿಷತ್ ಸದಸ್ಯರಾದ ಜಿ.ಎಸ್. ನ್ಯಾಮಗೌಡ, ಅರುಣ ಶಹಾಪೂರ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ ಅವರು ತಮ್ಮ ಕ್ಷೇತ್ರಭಿವೃದ್ಧಿ ನಿಧಿಯಲ್ಲಿ ಅನುದಾನ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವು ನೀಡಿದ್ದು, ಭಕ್ತರು ರೂ.1 ಸಾವಿರ ದಿಂದ ರೂ.3 ಲಕ್ಷದವರೆಗೆ ದೇಣಿಗೆ ನೀಡಿದ್ದಾರೆ' ಎಂದು ಅವರು ವಿವರಿಸಿದ್ದಾರೆ.

`ಶಾಲೆ-ಕಾಲೇಜುಗಳು ಆಧುನಿಕ ದಿನಮಾನದ ದೇಗುಲಗಳು ಎಂಬುದು ಸ್ವಾಮೀಜಿ ಅವರ ನಂಬಿಕೆ. ಅದಕ್ಕಾಗಿಯೇ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸ್ಥಾಪಿಸುವದರ ಮೂಲಕ 80ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಈ ಸಂಸ್ಥೆಗಳು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿವೆ. ವಿಜಾಪುರದಲ್ಲಿಯೂ ಇಂತಹ ಸಂಸ್ಥೆ ಸ್ಥಾಪಿಸಲು 25 ವರ್ಷಗಳ ಹಿಂದೆ ಶ್ರಿಶೈಲ ಸಂಗಪ್ಪ ಹೇರಲಗಿ ಅವರು ಕೋಟ್ಯಂತರ ರೂಪಾಯಿ ಬೆಲೆಯ ಊರ ಮಧ್ಯದ ಎರಡೂವರೆ ಎಕರೆ ಜಮೀನು ದಾನ ನೀಡಿದ್ದಾರೆ. ಅಲ್ಲಿ ಕೇಂದ್ರ ಪಠ್ಯಕ್ರಮದ ಶಾಲೆ ಆರಂಭಿಸಲಾಗುತ್ತಿದ್ದು, ಅದರ  ಶಂಕುಸ್ಥಾಪನೆಯೂ ಇದೇ ದಿನ ನಡೆಯಲಿದೆ' ಎಂದು ಪಟ್ಟಣಶೆಟ್ಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT