ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಶಂಕು ಸ್ಥಿತಿಯಲ್ಲಿ ಬೆಂಗಳೂರು ಒನ್ ಕೇಂದ್ರ

Last Updated 4 ಆಗಸ್ಟ್ 2012, 19:10 IST
ಅಕ್ಷರ ಗಾತ್ರ

ಕೃಷ್ಣರಾಜಪುರ: ಆಡಳಿತಾರೂಢ ಬಿಜೆಪಿ ಶಾಸಕರು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರ ನಡುವಿನ ಮುಸುಕಿನ ಗುದ್ದಾಟದಿಂದ ಇಲ್ಲಿನ ಚಿಕ್ಕದೇವಸಂದ್ರ ಮುಖ್ಯ ರಸ್ತೆಯ `ಬೆಂಗಳೂರು ಒನ್~ ಕೇಂದ್ರ ಉದ್ಘಾಟನೆಗೊಂಡು ಒಂದು ವರ್ಷ ಕಳೆದರೂ ಅದರ ಚಟುವಟಿಕೆಗಳು ಸ್ಥಗಿತಗೊಂಡಿರುವುದು ನಾಗರಿಕರಲ್ಲಿ ಅಸಮಾಧಾನ ಮೂಡಿದೆ.

ಬಿಬಿಎಂಪಿಯ ಕಾಂಗ್ರೆಸ್ ಸದಸ್ಯೆ ಕೆ.ಪೂರ್ಣಿಮಾ ಅವರು 2011ರ ಜೂನ್ 6ರಂದು ಸಮುದಾಯ ಭವನ ಕಟ್ಟಡದಲ್ಲಿ `ಬೆಂಗಳೂರು ಒನ್~ ಕೇಂದ್ರವನ್ನು ಉದ್ಘಾಟಿಸಿದ್ದರು.

ಶಾಸಕರ ಅನುಪಸ್ಥಿತಿಯಲ್ಲಿ ಕೇಂದ್ರ ಉದ್ಘಾಟನೆಯಾಗಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಕೇಂದ್ರಕ್ಕೆ ಬೀಗ ಜಡಿದರು. ಆನಂತರ ಜೂನ್ 22ರಂದು `ಬೆಂಗಳೂರು ಒನ್~ ಕೇಂದ್ರಕ್ಕೆ ಶಾಸಕರಿಂದ ವಿಧ್ಯುಕ್ತ ಚಾಲನೆ ದೊರೆಯಿತು. ಈ ಸಂದರ್ಭದಲ್ಲಿ ದಲಿತ ಸಮುದಾಯದ ಮುಖಂಡರು ತಮ್ಮ ಚಟುವಟಿಕೆಗಳಿಗೆ ಅದನ್ನು ಮೀಸಲಿಡಲು ಒತ್ತಾಯಿಸಿದರು. ಸೂಕ್ತ ಕ್ರಮ ಕೈಗೊಳ್ಳುವತನಕ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಶಾಸಕರು ಆದೇಶ ನೀಡಿದರು.

ಶಾಸಕರು ಹಾಗೂ ಪಾಲಿಕೆ ಸದಸ್ಯರ ಜಟಾಪಟಿಯಿಂದ 13 ತಿಂಗಳು ಕಳೆದರೂ ಕೇಂದ್ರದ ಬೀಗ ತೆರವುಗೊಳಿಸಿಲ್ಲ. ಇನ್ನು, ಸಮುದಾಯ ಭವನದಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ `ಬೆಂಗಳೂರು ಒನ್~ ಕೇಂದ್ರ ತೆರೆಯುವ ಮಹದಾಶಯದೊಂದಿಗೆ ಸರ್ಕಾರ ಚಿಕ್ಕದೇವಸಂದ್ರದಲ್ಲಿರುವ ಸಮುದಾಯ ಭವನವನ್ನು ಆಯ್ಕೆ ಮಾಡಿತ್ತು. ಆದರೆ ಇಂದಿನವರೆಗೂ ಉದ್ದೇಶ ಈಡೇರಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.

`ಶಾಸಕರು ನಾಲ್ಕೈದು ತಿಂಗಳ ಹಿಂದೆ `ಇ-ಆಡಳಿತ~ ಕೇಂದ್ರದ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದರು. ಪಾಲಿಕೆ ಸದಸ್ಯೆ ಕೆ. ಪೂರ್ಣಿಮಾ ಕೂಡ ಐದಾರು ತಿಂಗಳ ಹಿಂದೆ ದಲಿತ ಮುಖಂಡರೊಡನೆ ಈ ಸಂಬಂಧ ಚರ್ಚೆ ನಡೆಸಿದ್ದೂ ಆಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.  ಈ ಮಧ್ಯೆ, ಬಿಬಿಎಂಪಿ ಸಮುದಾಯ ಭವನದ ಮೊದಲನೇ ಅಂತಸ್ತನ್ನು ಜನಗಣತಿ-ಜಾತಿಗಣತಿ ಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ~ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವರ್ಗಾಯಿಸಲಾಗುವುದು
ಸದ್ಯದಲ್ಲಿಯೇ `ಬೆಂಗಳೂರು ಒನ್~ ಕೇಂದ್ರವನ್ನು ಬಿಬಿಎಂಪಿಯ ಸಂಪರ್ಕ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗುವುದು.
 -ಎನ್.ಎಸ್. ನಂದೀಶರೆಡ್ಡಿ
  ಶಾಸಕ

ಆಯುಕ್ತರಿಗೆ ಪತ್ರ
ಸಮುದಾಯ ಭವನ ಚಟುವಟಿಕೆಗಳಿಗೆ ಮೀಸಲಿಡಲು ಮುಖಂಡರು ಒತ್ತಾಯಿಸಿದ್ದು,  `ಬೆಂಗಳೂರು ಒನ್~ ಕೇಂದ್ರದ ಫಲಕ ತೆಗೆಯಲು ಈಗಾಗಲೇ  ಬೃಹತ್ ಬಿಬಿಎಂಪಿ ಆಯುಕ್ತರಿಗೆ ಪತ್ರವನ್ನು ಬರೆಯಲಾಗಿದೆ.
 - ಕೆ. ಪೂರ್ಣಿಮಾ
 ಪಾಲಿಕೆ ಸದಸ್ಯೆ

ತಾತ್ಕಾಲಿಕ ಬಳಕೆ
ಸಮುದಾಯ ಭವನವನ್ನು ಜನಗಣತಿ ಕಾರ್ಯಕ್ಕೆ ಬಿಬಿಎಂಪಿ ಬಳಕೆ ಮಾಡಿಕೊಳ್ಳುತ್ತಿರುವುದು ಕೇವಲ ತಾತ್ಕಾಲಿಕ.
- ವೇಣುಗೋಪಾಲ್,  ಬಿಬಿಎಂಪಿ ಕಾರ್ಯನಿರ್ವಾಹಕ  ಎಂಜಿನಿಯರ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT