ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಣೆ: ನಾಲ್ಕಂತಸ್ತಿನ ಕಟ್ಟಡ ಕುಸಿತ: 8 ಸಾವು

Last Updated 26 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಥಾಣೆ (ಪಿಟಿಐ): ಇಲ್ಲಿನ ಭಿಲ್ವಂಡಿ ಪಟ್ಟಣದಲ್ಲಿ ಹಲವಾರು ಕುಟುಂಬಗಳ ವಾಸ್ತವ್ಯ ಇದ್ದ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮವಾಗಿ ಎಂಟು ಮಂದಿ ಮೃತರಾಗಿ ಇತರ ಹಲವರು ಗಾಯಗೊಂಡಿದ್ದಾರೆ.

ಮೃತರಲ್ಲಿ ಬಹುತೇಕ ಮಂದಿ ಮಹಿಳೆಯರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಗೌತಮ್ ಕಾಂಪೌಂಡ್ ನವೀ ಬಸ್ತಿಯಲ್ಲಿನ ಈ ಕಟ್ಟಡ ಮಂಗಳವಾರ ರಾತ್ರಿ ಕುಸಿದು ಬಿದ್ದಿದೆ. ಮೂಲತಃ ಕೇವಲ ಎರಡು ಅಂತಸ್ತುಗಳಿಗೆ ಮಾತ್ರ  ಕಟ್ಟಡದಲ್ಲಿ ಪರವಾನಗಿ ಇತ್ತು ಎನ್ನಲಾಗಿದ್ದು ನಂತರ ಇನ್ನೆರಡು ಅಂತಸ್ತುಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ  6 ಮಹಿಳೆಯರು ಮೃತರಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಐದು ವರ್ಷದ ಬಾಲಕಿ ಸೇರಿದಂತೆ ಇತರ ಇಬ್ಬರು ಬುಧವಾರ ಗಾಯಗಳ ಪರಿಣಾಮವಾಗಿ ಮೃತರಾದರು ಎಂದು ಪೊಲೀಸರು ತಿಳಿಸಿದರು.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಫಿಯಾ ಎಂ. ಅನ್ಸಾರಿ (5) ಮತ್ತು ಸಾಗರ್ ಎಸ್. ಗಡಲ್ (19) ಈದಿನ ಥಾಣೆ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತರಾದರು. ಕಟ್ಟಡದ ಮಾಲೀಕ ನಸೀರ್ ಸಯೀದ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT