ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ. ಆಫ್ರಿಕಾಕ್ಕೆ ಗೆಲ್ಲಲು 153 ರನ್ ಗುರಿ ನೀಡಿದ ಭಾರತ

Last Updated 2 ಅಕ್ಟೋಬರ್ 2012, 15:00 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಟ್ವೆಂಟಿ-20 ವಿಶ್ವಕಪ್‌ನ ಸೂಪರ್ ಎಂಟರ ಬಹು ಮಹತ್ವದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 153ರನ್‌ಗಳ ಗುರಿ ನೀಡಿದೆ. ಭಾರತ ಸೆಮಿಫೈನಲ್ ಪ್ರವೇಶಿಸಬೇಕಾದರೂ ದಕ್ಷಿಣ ಆಫ್ರಿಕಾವನ್ನು 121ರನ್‌ಗಳಿಗೆ ನಿಯಂತ್ರಿಸಬೇಕಾಗಿದ್ದು, ಪಂದ್ಯದ ದ್ವಿತಿಯಾರ್ಧ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಮೊದಲು ಟಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡು ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು. ಭಾರತದ ಆರಂಭಿಕ ಆಟಗಾರರಾದ  ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ ಅವರು ಬಹಳ ವೇಗವಾಗಿ ತಮ್ಮತಮ್ಮ ವಿಕೆಟ್ ಒಪ್ಪಿಸಿ ಭಾರತದ ಪಾಳಯದಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದರು.

ನಂತರದ ಬ್ಯಾಟ್ಸಮನ್‌ಗಳಾದ ಯುವರಾಜ್‌ಸಿಂಗ್ 21 ರನ್ ಗಳಿಸಿದರೆ, ರೋಹಿತ ಶರ್ಮಾ 25 ರನ್ ಗಳಿಸಿ ಸ್ವಲ್ಪ ಚೇತರಿಕೆ ತಂದಿತ್ತರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸುರೇಶ್‌ರೈನಾ ಅವರು ಗಳಿಸಿದ 45 ಹಾಗೂ ಮಹೇಂದ್ರಸಿಂಗ್ ಧೋನಿ ಅವರ 23 ರನ್‌ಗಳು ಭಾರತವು 150ರ ಗಡಿ ದಾಟಲು ಕಾರಣವಾದವು.

ಅಂತಿಮವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT