ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕೊರಿಯಾ: ವಿಕಿರಣ ಸೋರಿಕೆ

Last Updated 20 ಫೆಬ್ರುವರಿ 2011, 18:25 IST
ಅಕ್ಷರ ಗಾತ್ರ

ಸೋಲ್ (ಐಎಎನ್‌ಎಸ್): ದಕ್ಷಿಣ ಕೊರಿಯಾದ ಪರಮಾಣು ವಿದ್ಯುತ್ ಸಂಶೋಧನಾ ಕೇಂದ್ರವು ಭಾನುವಾರ ವಿಕಿರಣ ಸೋರಿಕೆಯ ಎಚ್ಚರಿಕೆಯನ್ನು ನೀಡಿದ್ದು, ಇದರಿಂದಾಗಿ ಅದರಲ್ಲಿದ್ದ ನೌಕರರು ತಕ್ಷಣವೇ ಜಾಗ ತೆರವು ಮಾಡಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.

ಹನಾರೊದ 30 ಮೆಗಾವಾಟ್ ಸಂಶೋಧನಾ ರಿಯಾಕ್ಟನರ್‌ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 1.30ರ ವೇಳೆಗೆ ವಿಕಿರಣ ಸೋರಿಕೆಯನ್ನು ಪತ್ತೆಹಚ್ಚಿದ ನಂತರ ಈ ಎಚ್ಚರಿಕೆ ಸಂದೇಶವನ್ನು ನೀಡಲಾಯಿತು.

ಇದಾದ ಮೇಲೆ ದಾಯೆಜಿಯಾನ್ ನಗರದಲ್ಲಿರುವ ಸರ್ಕಾರಿ ಒಡೆತನದ ಕೊರಿಯಾ ಅಣುಶಕ್ತಿ ಸಂಶೋಧನಾ ಸಂಸ್ಥೆಯಲ್ಲೂ ಮಧ್ಯಾಹ್ನ 2.32ರಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಲಾಯಿತು. ಆನಂತರ ರಿಯಾಕ್ಟರ್ ಅನ್ನು ಮುಚ್ಚಿ, ನೌಕರರನ್ನು ಹೊರಗೆ ಕಳುಹಿಸಲಾಯಿತು ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT