ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ತಂಡದ ಮೇಲುಗೈ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಚಿತ್ರದುರ್ಗ: ದಕ್ಷಿಣ ಕನ್ನಡ ಜಿಲ್ಲಾ ತಂಡದ ವಿದ್ಯಾರ್ಥಿಗಳು ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ  ನಡೆಯುತ್ತಿರುವ 14 ಮತ್ತು 17ವರ್ಷ ವಯೋಮಿತಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನ ಎರಡನೇ ದಿನವಾದ ಶನಿವಾರ ಮೇಲುಗೈ ಸಾಧಿಸಿದ್ದರು. ಎರಡು ಹೊಸ ದಾಖಲೆಗಳು ಮೂಡಿಬಂದವು.

17ರ ವಯೋಮಿತಿಯ ವಿಭಾಗದ 400ಮೀ ಓಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೀಯೂ ಕಾನ್ರಾಯ್ ಪೌಲ್ (ಕಾಲ 51.8 ಸೆ.) ಪ್ರಥಮ ಸ್ಥಾನಗಳಿಸಿ ಹೊಸ ದಾಖಲೆ (ಹಳೇ ದಾಖಲೆ 2011ರಲ್ಲಿ ದಕ್ಷಿಣ ಕನ್ನಡದ ಶರತ್, 52.8 ಸೆ.) ಬರೆದರು. 5 ಕಿ.ಮೀ. ನಡಿಗೆಯ್ಲ್ಲಲಿ ಚಿಕ್ಕಮಗಳೂರು ಜಿಲ್ಲೆಯ ಬಿ.ಎಸ್. ರಕ್ಷಿತ್ (ಕಾಲ 25:24:01ನಿ.) (ಹಳೇ ದಾಖಲೆ ಬೆಳಗಾವಿಯ ಮಹಾಂತೇಶ್ 26:3:03 ನಿ.) ಪ್ರಥಮ ಸ್ಥಾನಗಳಿಸಿ ಹೊಸ ದಾಖಲೆ ಸ್ಥಾಪಿಸಿದರು.

ಎರಡನೇ ದಿನದ ಫಲಿತಾಂಶದ ವಿವರ:
14 ವರ್ಷದ ಬಾಲಕರ ವಿಭಾಗ: 400 ಮೀ. ಓಟ:
ದಕ್ಷಿಣ ಕನ್ನಡ ಜಿಲ್ಲೆಯ ಜಾಫರ್ ಸಾಧಿಕ್ (ಕಾಲ 57.6 ಸೆ.)-1, ದಕ್ಷಿಣ ಕನ್ನಡ ಜಿಲ್ಲೆಯ ಓನಿನ್ ಡಿಸೋಜಾ (ಕಾಲ 58.2 ಸೆ.)-2, ಬೆಂಗಳೂರಿನ ವಿದ್ಯಾನಗರದ ಬಸತಿ ಯುವಾನ (ಕಾಲ 58.5 ಸೆ.)-3.

ಲಾಂಗ್‌ಜಂಪ್:  ಬೆಂಗಳೂರಿನ ವಿದ್ಯಾನಗರದ ಸೈಮನ್ ಎಸ್. ನಾಯಕ್ (ದೂರ 5.88ಮೀ.)-1, ಉಡುಪಿಯ ಸಚಿನ್ ಬಿ. ನಾಯಕ್ (ದೂರ 5.54ಮೀ.)-2, ಕಾರವಾರದ ಅನಿಲ್ ವಿ. ಭಟ್ (ದೂರ 5.44ಮೀ.)-3.

ಶಾಟ್‌ಪಟ್: ಕಾರವಾರದ ಡೊಮಿನಿಕ್ ಫೆರ್ನಾಂಡಿಸ್ (ದೂರ 13.37ಮೀ.)-1, ಬೆಳಗಾವಿಯ ಪ್ರಸಾದ್ ಎನ್. ಸಂತಘಾವಿ (ದೂರ 11.60ಮೀ.)-2, ಜಾವಿದ್ ಅಹಮದ್ ಎಸ್. ಜಾಗೀರ್‌ದಾರ್ (ದೂರ 11.54ಮೀ.)-3.

14 ವರ್ಷದ ಬಾಲಕಿಯರ ವಿಭಾಗ: 400 ಮೀ. ಓಟ: ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಿತಾ (ಕಾಲ 1:04:02 ನಿ.)-1, ಬೆಂಗಳೂರು ವಿದ್ಯಾನಗರದ ಎ. ದೀಪಾ (ಕಾಲ 1:06:6 ನಿ.)-2, ಕೊಡಗಿನ ಎಸ್.ಎಲ್. ಸಹನಾ (ಕಾಲ 1:7:09 ನಿ.)-3.

ಹೈಜಂಪ್: ಉಡುಪಿಯ ಅಭಿನಯ (ದೂರ 1.33ಮೀ.)-1, ಕೊಪ್ಪಳದ ಎ. ದುರ್ಗಾ ಭವಾನಿ (ದೂರ 1.33ಮೀ.)-2, ತುಮಕೂರಿನ ತುಂಗಾಶ್ರೀ (ದೂರ 1.33ಮೀ.)-3.

17 ವರ್ಷದ ಬಾಲಕರ ವಿಭಾಗ:400 ಮೀ. ಓಟ: ದಕ್ಷಿಣ ಕನ್ನಡ ಜಿಲ್ಲೆಯ ಬೀಯೂ ಕಾನ್ರಾಯ್ ಪೌಲ್ (ಕಾಲ 51.8 ಸೆ.)-1, ಬೆಂಗಳೂರು ವಿದ್ಯಾನಗರದ ಆರ್.ಟಿ. ಹನುಮಂತ (ಕಾಲ 52.3 ಸೆ.)-2, ಕೊಡಗಿನ ಬಿ. ಶರತ್ (ಕಾಲ 52.8 ಸೆ.)-3.

5 ಕಿ.ಮೀ ನಡಿಗೆ:  ಚಿಕ್ಕಮಗಳೂರಿನ ಬಿ.ಎಸ್. ರಕ್ಷಿತ್ (ಕಾಲ 25ನಿ.24:01ಸೆ.)-1, ಚಿಕ್ಕೋಡಿಯ ಬಿ. ಶಿವಾನಂದ (ಕಾಲ 25ನಿ.26:01ಸೆ.)-2, ಬೆಂಗಳೂರು ಉತ್ತರದ ಪ್ರಶಾಂತ್ ಗೌಡ (ಕಾಲ 25ನಿ.49:02ಸೆ.)-3.

ಜಾವೆಲಿನ್ ಎಸೆತ: ದಕ್ಷಿಣ ಕನ್ನಡ ಜಿಲ್ಲೆಯ ಧೀರಜ್ (ದೂರ 48.39 ಮೀ.)-1, ಕಾರವಾರದ ನಾಸಿಕ್ ಅಹಮ್ಮದ್ ಸಿದ್ಧಿಕ್ (ದೂರ 45.40ಮೀ.)-2, ದಕ್ಷಿಣ ಕನ್ನಡ ಜಿಲ್ಲೆಯ ಇಶಾನ್ (ದೂರ 45.36ಮೀ.)-3.

17 ವರ್ಷದ ಬಾಲಕಿಯರ ವಿಭಾಗ:400 ಮೀ. ಓಟ:
ದಕ್ಷಿಣ ಕನ್ನಡ ಜಿಲ್ಲೆಯ ವೆನಿಶ್ ಕೆರೋನ್ ಕ್ಯಾದ್ರೀಸ್ (ಕಾಲ 1:00:2 ನಿ.)-1, ಚಿಕ್ಕಮಗಳೂರಿನ ಎಚ್.ಆರ್. ನವಮಿ (ಕಾಲ 1:00:07ನಿ.)-2, ಕೂಡಿಗೆಯ ಪಿ. ಹರ್ಷಿತಾ (ಕಾಲ 1:02:3 ನಿ.)-3.

ಟ್ರಿಪಲ್ ಜಂಪ್: ದಕ್ಷಿಣ ಕನ್ನಡ ಜಿಲ್ಲೆಯ ಅನುಷಾ ಜಿ. ಪೂಜಾರಿ (ದೂರ 11.35ಮೀ.)-1, ದಕ್ಷಿಣ ಕನ್ನಡ ಜಿಲ್ಲೆಯ ದೀಕ್ಷಾ (ದೂರ 11.24ಮೀ.)-2, ಧಾರವಾಡದ ಪುಷ್ಪಾಂಜಲಿ (ದೂರ 10.98ಮೀ.)-3.

ಪೋಲ್‌ವಾಲ್ಟ್: ಉಡುಪಿಯ ಪವಿತ್ರಾ (ದೂರ 2.35ಮೀ.)-1, ಉಡುಪಿಯ ಪ್ರಜ್ಞಾ ಶೆಟ್ಟಿ (ದೂರ 2.20ಮೀ.)-2, ಶಿರಸಿಯ ಸೌಭಾಗ್ಯ ಕುರುಬೇರ್ (ದೂರ 2.10ಮೀ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT