ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯ ಅಂತರ ವಿವಿ ಟಿಟಿ 17ರಂದು ಆರಂಭ

Last Updated 14 ಫೆಬ್ರುವರಿ 2011, 18:40 IST
ಅಕ್ಷರ ಗಾತ್ರ

ಬೆಳಗಾವಿ: ವಿಶ್ವೇಶ್ವರ ತಾಂತ್ರಿಕ ವಿವಿಯಲ್ಲಿ ಫೆ. 17ರಿಂದ ದಕ್ಷಿಣ ವಲಯ ಹಾಗೂ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ ಆಯೋಜಿಸಲಾಗಿದೆ.

ಫೆ. 17ರಿಂದ 19ರ ವರೆಗೆ ದಕ್ಷಿಣವಲಯ ಅಂತರ ವಿವಿ ಟೂರ್ನಿ ನಡೆಯಲಿದ್ದು, ಅದರಲ್ಲಿ 57 ವಿ.ವಿ.ಗಳ 55 ಪುರುಷ ಹಾಗೂ 51 ಮಹಿಳಾ ತಂಡಗಳು ಭಾಗವಹಿಸಲಿವೆ. ನಂತರ ಫೆ. 21ರಿಂದ 23ರ ಅಖಿಲ ಭಾರತ ಅಂತರ ವಿವಿ ಟೇಬಲ್ ಟೆನಿಸ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ರಾಷ್ಟ್ರಮಟ್ಟಕ್ಕೆ ಆರ್ಹತೆ ಪಡೆದ 22 ವಿವಿಗಳ 16 ಪುರುಷ ಹಾಗೂ 16 ಮಹಿಳಾ ತಂಡಗಳು ಭಾಗವಹಿಸಲಿವೆ. ಎರಡೂ ಟೂರ್ನಿಯಲ್ಲಿ ಒಟ್ಟು 600 ಕ್ರೀಡಾ ಪಟುಗಳು ಹಾಗೂ 200 ದೈಹಿಕ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ ಹಾಗೂ ದ್ವಿತೀಯ ಸ್ಥಾನ ಪಡೆಯುವ ಸ್ಪರ್ಧಾಳುಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಇದೇ ಮೊದಲ ಬಾರಿಗೆ ಶುದ್ಧ ಬೆಳ್ಳಿಯ ಪದಕ ನೀಡಲು ನಿರ್ಧರಿಸಲಾಗಿದೆ.

ಸತ್ಕಾರ: ಫೆ. 17ರಂದು ಬೆಳಿಗ್ಗೆ 10ಕ್ಕೆ ಟೂರ್ನಿಯ ಉದ್ಘಾಟನೆ ಜರುಗಲಿದ್ದು, ದ್ರೋಣಾಚಾರ್ಯ ಹಾಗೂ ಅರ್ಜುನ ಪ್ರಶಸ್ತಿ ವಿಜೇತ,  ಅರವಿಂದ ಸವೂರು, ಏಕಲವ್ಯ ಪ್ರಶಸ್ತಿ ಪುರಸ್ಕೃತೆ, ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ವಿಶ್ವ ನಾಥ ಮುಖ್ಯ ಅತಿಥಿಯಾಗಿ ಭಾಗವಹಿ ಸುವರು.

 ವಿವಿಯ ಕುಲಪತಿ ಡಾ. ಎಚ್. ಮಹೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿವಿಯ ಕುಲಸಚಿವ ಡಾ.ಎಸ್.ಎ.ಕೋರಿ ಟೂರ್ನಿಯ ಮಾಹಿತಿ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT