ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ಹೋರಾಟಕ್ಕೆ ಸಿಗದ ಮನ್ನಣೆ

ಕುಡಿಯುವ ನೀರಿಗಾಗಿ ತಪ್ಪದ ನಿತ್ಯ ಪರದಾಟ
Last Updated 18 ಸೆಪ್ಟೆಂಬರ್ 2013, 10:06 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಹೊರ್ತಿ ಗ್ರಾಮ ಗಡಿ­ಯಂಚಿನಲ್ಲಿ ರಾಷ್ಟ್ರೀಯ ಹೆದ್ದಾರಿ 13ರ ಸಮೀಪದಲ್ಲಿದೆ. ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ಕಳೆದ 20 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಇಲ್ಲಿಯ ಜನಸಾಮಾನ್ಯರು ವರ್ಷದ 12 ತಿಂಗಳು ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯ ಶಾಶ್ವತವಾಗಿ ಬಿಟ್ಟಿದೆ.

ಹೊರ್ತಿ ಗಾ್ರಮದ ಕೆರೆಗೆ ಮತು್ತ ಇಂಡಿ ತಾಲ್ಲೂಕಿನ ಸುಮಾರು 16 ಪ್ರಮುಖ ಕೆರೆಗಳಿಗೆ ಭೀಮಾ ನದಿಯಿಂದ ನೀರು ತುಂಬಿಸಬೇಕೆಂಬ ಬೇಡಿಕೆಯಿದೆ. ಗುತಿ್ತ ಬಸವಣ್ಣ, ಚಿಮ್ಮಲಗಿ, ಇಂಡಿ ಏತ ನೀರಾವರಿ ಯೋಜನೆಗಳನು್ನ ತ್ವರಿಗತಿಯಲಿ್ಲ ಪೂರ್ಣಗೊಳಿಸುವಂತೆ ಆಗ್ರಹಿಸಿ, ತಾಲ್ಲೂಕಿನ ಹೊರ್ತಿ ಮತು್ತ ತಾಂಬಾ ಗಾ್ರಮಗಳಲಿ್ಲ 6 ವರ್ಷಗಳ ಹಿಂದೆಯೇ ರೈತರು ತಿಂಗಳುಗಟ್ಟಲೆ ಸರದಿ ಉಪವಾಸ ಸತಾ್ಯಗ್ರಹ ಮಾಡಿದಾ್ದರೆ.

ರೈತರು ಕೈಕೊಂಡಿದ್ದ ಸರದಿ ಉಪವಾಸ ಸತಾ್ಯಗ್ರಹದ ಸಂದರ್ಭದಲಿ್ಲ ನಾಡಿನ ಎಲಾ್ಲ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಭೇಟಿ ನೀಡಿ ಅತೀ ಶೀಘ್ರ ಕೆರೆಗೆ ನೀರು ತುಂಬಿಸ­ಲಾಗುವುದು. ಕೃಷಾ್ಣ  ಮೇಲ್ದಂಡೆ ಯೋಜನೆಯ 2ನೇ ಹಂತದ ಎಲಾ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿ ಹೋದವರು ಇಲಿ್ಲಯವರೆಗೆ ಇತ್ತ ಸುಳಿದಿಲ್ಲ.

ಬತ್ತಿದ ಕೆರೆ ಕಟ್ಟೆಗಳು
ಕಳೆದ 3 ವರ್ಷಗಳಿಂದ ತಾಲೂ್ಲಕಿನ ಕೆರೆ, ಕಟೆ್ಟ, ಹಳ್ಳ ಹರಿಗಳಲಿ್ಲ ಹನಿ ನೀರಿಲ್ಲ. ಪ್ರಸಕ್ತ ವರ್ಷವಂತೂ ಮಳೆಗಾಲದಲೂ್ಲ ಕೂಡಾ ಎಲೂ್ಲ ಹನಿ ನೀರಿಲ್ಲ. ಗುಂದವಾನ, ಅರ್ಜನಾಳ, ಗೋಟಾ್ಯಳ, ಹಡಲಸಂಗ್‌ ಮುಂತಾದ ಗಾ್ರಮಗಳ ಕೆರೆಗಳು ಬತಿ್ತ ಹೋಗಿವೆ.

ಕೆಲವು ರೈತರು ತಮ್ಮ ಸ್ವಂತ ಖರ್ಚಿನಿಂದ ಭೀಮಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರು ತರಲು ಸಿದ್ಧರಿದಾ್ದರೆ. ಸರಕಾರ ಅದಕೆ್ಕ ಅನುಮತಿ ನೀಡುತಿ್ತಲ್ಲ.

ತಾಲೂ್ಲಕಿನ ಹಂಜಗಿ ಗಾ್ರಮಕೆ್ಕ ಭೀಮಾ ನದಿಯಿಂದ ಪೈಪ್‌ಲೈಲ್‌ ಮೂಲಕ ನೀರು ತರಲು ಬಸವೇಶ್ವರ ಶುಗರ್ಸ್‌ ಮಿಲ್‌ ಅಧ್ಯಕ್ಷ ಎಂ.ಎಸ್‌.ಪಾಟೀಲ ರೈತರ ಜೊತೆಗೂಡಿ ಸ್ವಂತ ಖರ್ಚಿನಿಂದ ನೀರು ತರಲು ಮನವಿ ಸಲಿ್ಲಸಿದ್ದರು. ಆದರೆ ಜಿಲಾ್ಲಧಿಕಾರಿಗಳು ಅದಕೆ್ಕ ಮಂಜೂರಾತಿ ನೀಡಿಲ್ಲ ಎಂದು ಜೆಡಿಎಸ್‌ ತಾಲೂ್ಲಕು ಘಟಕದ ಅಧ್ಯಕ್ಷ ಬಿ.ಡಿ.ಪಾಟೀಲ ಆರೋಪಿಸಿದಾ್ದರೆ.

ಪ್ಲಾಸ್ಟಿಕ್‌ನಲ್ಲಿ ಸಂಗ್ರಹ
ಕುಡಿಯುವ ನೀರಿಗಾಗಿ ಮತು್ತ ಕೆರೆ ತುಂಬಿಸುವ ಯೋಜನೆ ಜಾರಿಗಾಗಿ ಈಗಾಗಲೇ ಸಾಕಷು್ಟ ಸಲ ಸರಕಾರಕ್ಕೆ ಮನವಿ ಸಲಿ್ಲಸಲಾಗಿದೆ. ಉಪವಾಸ ಸತಾ್ಯಗ್ರಹ ಮಾಡಲಾಗಿದೆ. ಹೆದಾ್ದರಿ ಬಂದ್‌ ಮಾಡಿ ಪ್ರತಿಭಟಿಸಲಾಗಿದೆ. ಆದರೆ ಪರಿಹಾರ ಮಾತ್ರ ದೊಡ್ಡ ಸೊನೆ್ನ ಎಂದು ಹೊರ್ತಿ ಗಾ್ರಮದ ರೇವಣಸಿದೇ್ದಶ್ವರ ಪತಿ್ತನ ಸಹಕಾರಿ ಸಂಘದ ಅಧ್ಯಕ್ಷ ಜೆಡಿಎಸ್‌ ಮುಖಂಡ ಅಣ್ಣಪ್ಪ ಖೈನೂರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜಾನುವಾರಿಗಳಿಗೆ ಪ್ಲಾಸ್ಟಿಕ್‌ನಲ್ಲಿ ನೀರು ಸಂಗ್ರಹಿಸಿ ತಿಂಗಳುಗಟ್ಟಲೇ ಅದೇ ನೀರನು್ನ ಕುಡಿಸುವ ಪ್ರಸಂಗ ಬಂದಿದೆ. ಬಹು ವರ್ಷ ಬಾಳುವ ತೋಟಗಾರಿಕಾ ಬೆಳೆಗಳಾದ ದಾ್ರಕ್ಷಿ, ದಾಳಿಂಬೆ, ಬಾರಿ, ಪೇರು, ನಿಂಬೆ, ಬೆಳೆಗಳು ತೇವಾಂಶದ ಕೊರತೆಯಿಂದ ಒಣಗಿ ಹೋಗಿವೆ. ರೈತರಿಗೆ ದೊಡ್ಡ ಪ್ರಮಾಣದಲಿ್ಲ ಹಾನಿಯಾಗಿದ್ದು, ಪರಿಹಾರದ ಅಗತ್ಯವಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

‘ಊರು ಬಿಡುವುದೊಂದೇ ಬಾಕಿ’
’ಕುಡಿಯಕ್ ನೀರ ತರದು ಒಂದು ದೊಡ್ಡ ಸಮಸ್ಯಯಾಗಾ್ಯದಿ್ರ, ನೀರಿನ ಟಾ್ಯಂಕರ್‌ ಬಂದ್ರ ಸಾಕ್‌ ಜಗಳ ಸುರು. ಜಗಳ ಕೇಳಿ ಊರ ಬಿಡದೊಂದೇ ಬಾಕಿ ಉಳದಾದಿ್ರ. ಮನಿಗಿ ಬೀಗರ ಬಂದ್ರ ಯಾ್ಯವಾಗ ಹೋಗಾ್ತರ್‌ ಅಂತ ಕಾಯಿ್ತವಿ್ರ’ ಎಂದು ಗಾ್ರಮದ ಜಯಶೀ್ರ, ಭಾಗೀರತಿ, ನಾಗವ್ವ, ಬಂಗಾರೆವ್ವ, ಉಮಾಶೀ್ರ, ಶೀ್ರದೇವಿ, ಶಾಂತಾ, ಶೋಭಾ ತಾವು ಪ್ರತಿದಿನ ಅನುಭವಿಸುವ ನೋವು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT