ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ದರ್ಶನಕ್ಕೆ ಒತ್ತು, ದಸರಾ ಥಾಲಿಗೆ ಕುತ್ತು!

Last Updated 23 ಸೆಪ್ಟೆಂಬರ್ 2011, 10:10 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಹಾಗೂ ಮೈಸೂರು ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಈ ಬಾರಿಯೂ `ದಸರಾ ದರ್ಶನ~ಕ್ಕೆ ವಿಶೇಷ ಒತ್ತು ನೀಡಲಾಗಿದೆ. ಆದರೆ, ದಸರಾ ಥಾಲಿಗೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ.

ಮೈಸೂರು ವಿಭಾಗದ ಮೈಸೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ಪ್ರವಾಸಿಗರನ್ನು ಕರೆತರಲು 243 ಬಸ್ಸುಗಳನ್ನು ಅಳವಡಿಸಲಾಗಿದೆ.

ಮೈಸೂರು ಗ್ರಾಮಾಂತರ-63, ಹಾಸನ-59, ಮಂಡ್ಯ-56, ಕೊಡಗು-24 ಹಾಗೂ ಚಾಮರಾಜನಗರ ಜಿಲ್ಲೆಗೆ 32 ಬಸ್ಸುಗಳನ್ನು ಕಲ್ಪಿಸಲಾಗಿದೆ.

ಬಡತನ ರೇಖೆ ಕೆಳಮಟ್ಟದಲ್ಲಿರುವ ಫಲಾನುಭವಿಗಳನ್ನು ತಾಲ್ಲೂಕು ಮಟ್ಟದಲ್ಲಿ ಆಯ್ಕೆ ಮಾಡಿ ಮೈಸೂರಿಗೆ ಕರೆತರಲಾಗುತ್ತಿದೆ. ಈ ವರ್ಷ 13,500 ಫಲಾನುಭವಿಗಳು `ದಸರಾ ದರ್ಶನ~ ಪ್ರಯೋಜನ ಪಡೆಯಲಿದ್ದಾರೆ.

ಮೈಸೂರಿಗೆ ಬರುವ ಪ್ರವಾಸಿಗರಿಗೆ ಅರಮನೆ, ಚಾಮುಂಡಿಬೆಟ್ಟ, ಪ್ರಾಣಿಸಂಗ್ರಹಾಲಯ, ಕೆಆರ್‌ಎಸ್ ಜಲಾಶಯಗಳನ್ನು ಉಚಿತ ಹಾಗೂ ನೇರ ಪ್ರವೇಶದ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಪ್ರವಾಸಿಗರಿಗೆ ಊಟ ಹಾಗೂ ತಿಂಡಿಯನ್ನು ಒದಗಿಸಲಾಗಿತ್ತು. ಈ ಬಾರಿ ಊಟ, ತಿಂಡಿಯನ್ನು ಒದಗಿಸುವ ಬಗ್ಗೆ ಇದುವರೆಗೂ ನಿರ್ಧರಿಸಿಲ್ಲ ಎನ್ನಲಾಗಿದೆ.

ಥಾಲಿಗೆ ಕೊಕ್: ಕಳೆದ ಬಾರಿ ದಸರಾ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ನಗರದ ಆಯ್ದ ಹೋಟೆಲ್‌ಗಳಲ್ಲಿ `ದಸರಾ ಥಾಲಿ~ಯನ್ನು 20 ರೂಪಾಯಿಗೆ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಒಂದು ಚಪಾತಿ, ಸಿಹಿ, ಅನ್ನ, ಸಾಂಬಾರು, ಪಲ್ಯ ನೀಡಲಾಗುತ್ತಿತ್ತು. ಆದರೆ, ಕೆಲವು ಹೋಟೆಲ್‌ಗಳಲ್ಲಿ ಜನ ಹೆಚ್ಚಾಗಿ ಬಂದಿದ್ದರಿಂದ ಕೆಲವರಿಗೆ 20 ರೂಪಾಯಿ ತೆಗೆದುಕೊಂಡು ಕೇವಲ ಅನ್ನ, ಸಾಂಬಾರು ಬಡಿಸಿದ್ದರಿಂದ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ `ದಸರಾ ಥಾಲಿ~ಯನ್ನು ಕೈಬಿಡಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

ಬಸ್ ಪಾಸ್ ದರ ಹೆಚ್ಚಳ: ಕೆಎಸ್‌ಆರ್‌ಟಿಸಿ ಬಸ್ಸು ಗಳಲ್ಲಿ ಮೈಸೂರು ನಗರ ದಲ್ಲಿ ಸಂಚರಿಸುವವರಿಗೆ ಅನು ಕೂಲ ಕಲ್ಪಿ ಸಲು ದೈನಂದಿನ ಪಾಸುಗಳ ವ್ಯವಸ್ಥೆ ಕಲ್ಪಿ ಸಲಾಗಿದೆ. ಸಾಮಾನ್ಯ ಬಸ್ಸು ಗಳಲ್ಲಿ ಪ್ರಯಾಣಿ ಸಲು 30 ರೂಪಾಯಿ ಹಾಗೂ ವೋಲ್ವೊ ಬಸ್ಸುಗಳಲ್ಲಿ ಸಂಚರಿಸಲು 50 ರೂಪಾಯಿ ದರ ನಿಗದಿ ಮಾಡಲಾಗಿದೆ. ಆದರೆ, ದಸರಾ ಸಂದರ್ಭದಲ್ಲಿ ದರ ಹೆಚ್ಚಳವಾಗಲಿದ್ದು, ಸಾಮಾನ್ಯ ಹಾಗೂ ವೋಲ್ವೊ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಕ್ರಮವಾಗಿ 50 ಹಾಗೂ 80 ರೂಪಾಯಿ ಪಾವತಿಸಬೇಕಿದೆ.

`ದಸರಾ ಸಂದರ್ಭದಲ್ಲಿ ದೈನಂದಿನ ಪಾಸುಗಳ
ದರ ಹೆಚ್ಚಳದಿಂದ ಪ್ರವಾಸಿಗರಿಗೆ ಹೊರೆಯಾಗುವುದಿಲ್ಲವೆ?~ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, `ಕಳೆದ ಬಾರಿಯೂ ದರ ಹೆಚ್ಚಳ ಮಾಡಲಾಗಿತ್ತು. ಅದರಂತೆ ಈ ಬಾರಿಯೂ ಮಾಡಲಾಗುತ್ತಿದೆ~ ಎಂದು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT