ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸವಾಳದ ದಶಾವತಾರ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಿಮ್ಮ ಮನೆಯ ಹೂದೋಟದಲ್ಲಿ ದಾಸವಾಳವಿಲ್ಲವೆಂದರೆ ಅದು ಪರಿಪೂರ್ಣ ಎನಿಸದು. ಕೈ ತೋಟದ ರಾಣಿ ಎನ್ನಿಸಿರುವ ದಾಸವಾಳ ಎಲ್ಲಾ ತರಹದ ಹವಾಗುಣಗಳಿಗೂ ಮಣ್ಣಿಗೂ, ಹೊಂದಿಕೊಂಡು ಬೆಳೆಯುವ ಸಸ್ಯ. ವೈವಿಧ್ಯಮಯ ವಿನ್ಯಾಸ, ವರ್ಣಗಳಲ್ಲಿ ಗಮನಸೆಳೆಯುವ ಹೂಗಳಂತೂ ಅತ್ಯಾಕರ್ಷಕ.

ಸಂಸ್ಕೃತದಲ್ಲಿ ಜಪಪುಷ್ಪವೆಂದು ಕರೆಯಲ್ಪಡುವ ಇದರ ಸಸ್ಯಶಾಸ್ತ್ರೀಯ ಹೆಸರು ಹೈಬಿಸ್ಕಸ್ ರೋಸಾ-ಸೈನನ್ಸಿಸ್. ವರ್ಷವಿಡೀ ಹೂಬಿಡುವ ಈ ಸಸ್ಯದಲ್ಲಿ 200ಕ್ಕೂ ಹೆಚ್ಚು ಪ್ರಬೇಧಗಳಿವೆ. ಚಂದಕ್ಕಷ್ಟೇ ಅಲ್ಲದೇ, ಇದನ್ನು ಔಷಧೀಯ ಗುಣಗಳ ಭಂಡಾರವೆಂದೇ ಹೇಳಬಹುದು. ಹಸಿಯಾಗಿಯೂ ಈ ಹೂವನ್ನು ತಿನ್ನಬಹುದು. ಖಾದ್ಯಗಳನ್ನು ಅಲಂಕರಿಸಲೂ ಬಳಸಬಹುದು.

ಕೆಂಪು ದಾಸವಾಳವನ್ನು ಸ್ವಲ್ಪ ನೀರಿನೊಂದಿಗೆ ಕುದಿಸಿ ರಸವನ್ನು ಶೋಧಿಸಿ ಅದಕ್ಕೆ ಕಾಳುಮೆಣಸು, ಸ್ವಲ್ಪ ಉಪ್ಪು ಸೇರಿಸಿ ನಂತರ ಒಂದು ಕಿತ್ತಳೆ ಹಣ್ಣಿನ ರಸ ಸೇರಿಸಿದರೆ ರುಚಿಕರ ಕೇಸರಿ ಬಣ್ಣದ ಸೂಪ್ ತಯಾರಾಗುತ್ತದೆ ಅಥವಾ ಇದೇ ರಸವನ್ನು ತಣಿಸಿ ಸಕ್ಕರೆ ಇಲ್ಲವೆ ಜೇನು ತುಪ್ಪ ಸೇರಿಸಿ ಐಸ್ ಕ್ಯೂಬ್‌ನೊಂದಿಗೆ ತಂಪು ಪಾನೀಯವಾಗಿ ಬಳಸಬಹುದು.

ನೀರು ದೋಸೆ ತಯಾರಿಸುವಾಗ ಬಿಳಿದಾಸವಾಳವನ್ನು ಸೇರಿಸಿ ರುಬ್ಬಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ ಎನ್ನುತ್ತದೆ ಆಯುರ್ವೇದ. ಬಿಳಿ, ಕೆಂಪು ದಾಸವಾಳ ಭಾರತೀಯ ಸಾಂಪ್ರದಾಯಿಕ ಔಷಧ ವಿಧಾನವಾಗಿರುವ ಆಯುರ್ವೇದದಲ್ಲಿ ಬೇರಿನಿಂದ ಹಿಡಿದು ಎಲೆ, ಹೂಗಳು ಎಲ್ಲವನ್ನೂ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಕೆಮ್ಮು, ಮುಟ್ಟಿನ ದೋಷಗಳು, ಅಕಾಲ ನೆರೆಗೂದಲು, ಕೂದಲು ಉದುರುವಿಕೆಗೆ ನೀಡುವ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಸ್ವಲ್ಪ ನೀರಿನೊಂದಿಗೆ ಎಲೆ ಹೂಗಳನ್ನು ಸೇರಿಸಿ ನುಣ್ಣಗೆ ಅರೆದು ನಂತರ ನೊರೆನೊರೆಯಾಗಿ ಹೊರಬರುವ ಲೇಪನವನ್ನು ತಲೆಗೂದಲ ಸ್ವಚ್ಛತೆಗಾಗಿ ಶಾಂಪೂ ಮತ್ತು ಕಂಡೀಶನರ್‌ನಂತೆ ಬಳಸಬಹುದು. ದಾಸವಾಳದಿಂದಲೂ ಇತರ ಹರ್ಬಲ್ ಚಹಾಗಳಂತೆ ಚಹಾ ತಯಾರಿಸಬಹುದು. ಇದರ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇತ್ತೀಚೆಗಂತೂ ತಳಿ ಸಂಕರಣದಿಂದ ಹೊಸಹೊಸ ಬಣ್ಣದಲ್ಲೂ ಲಭ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT