ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡಿನ ಬೆಲೆ

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಗೋಪಿ ತನ್ನ ತಾಯಿಯ ಜೊತೆ ನಡೆದು ಹೋಗುತ್ತಿದ್ದ. ಐಸ್‌ಕ್ರೀಮ್ ಕೊಡಿಸುವಂತೆ ಕೇಳಿದ. ಐಸ್‌ಕ್ರೀಮ್‌ಗಾಗಿ ಹಣ ತೆಗೆದ ತಾಯಿಯ ಪರ್ಸ್‌ನಿಂದ ಒಂದು ರೂಪಾಯಿ ನಾಣ್ಯ ಕೆಳಗೆ ಬಿತ್ತು. ಅದನ್ನು ಅವರು ಹುಡುಕಿ ಎತ್ತಿಕೊಂಡು ಪರ್ಸ್‌ಗೆ ಹಾಕಿಕೊಂಡರು. ಆಗ ಗೋಪಿ, ‘ಅಮ್ಮಾ ಕೇವಲ ಒಂದು ರೂಪಾಯಿಯನ್ನು ಅಲ್ಲೆಲ್ಲಾ ತಡಕಾಡಿ ಯಾಕೆ ಎತ್ತಿಕೊಂಡೆ’ ಎಂದ. ಅಮ್ಮ ಉತ್ತರಿಸದೇ ಮೌನವಾದರು.

ಒಂದು ದಿನ ಗೋಪಿ, ‘ಪೆನ್ಸಿಲ್‌ಗಳು ಮುಗಿದಿವೆ, ತರಬೇಕು’ ಎಂದ. ಅಪ್ಪ ಹಣ ನೀಡಿದರು. ಅಂಗಡಿಗೆ ಹೋದ ಗೋಪಿ ಬರಿಗೈಲಿ ವಾಪಸ್ ಬಂದ.

ಯಾಕೆಂದು ಕೇಳಿದಾಗ, ‘ಒಂದು ಬಾಕ್ಸ್ ಪೆನ್ಸಿಲ್‌ಗೆ ಒಂದು ರೂಪಾಯಿ ಕಡಿಮೆ ಎಂದು ಹೇಳಿ ಅಂಗಡಿಯವನು ಪೆನ್ಸಿಲ್ ಕೊಡಲಿಲ್ಲ’ ಎಂದ.

ಆಗ ಅವನ ತಾಯಿ, ‘ನೋಡಿದೆಯಾ ಗೋಪಿ, ಅಂದು ನಾನು ಒಂದು ರೂಪಾಯಿ ನಾಣ್ಯವನ್ನು ಎತ್ತಿಕೊಂಡಾಗ ನೀನು ಅದನ್ನು ಕೇವಲ ಎಂದಿದ್ದೆ. ಇಂದು ಅದೇ ಒಂದು ರೂಪಾಯಿ ಇಲ್ಲದ ಕಾರಣ ನಿನಗೆ ಅಗತ್ಯವಾದ ಪೆನ್ಸಿಲ್ ತರಲು ನಿನ್ನಿಂದ ಸಾಧ್ಯವಾಗಲಿಲ್ಲ’ ಎಂದರು.

ಗೋಪಿಗೆ ದುಡ್ಡಿನ ಬೆಲೆ ಅರ್ಥವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT