ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವಾಸನೆ ಮಧ್ಯೆ ಬದುಕು!

Last Updated 16 ಜನವರಿ 2012, 7:50 IST
ಅಕ್ಷರ ಗಾತ್ರ

ಕಾರವಾರ: ಹೇಳಿಕೇಳಿ ಅದು ಕೊಳ ಗೇರಿ. ಅವ್ಯವಸ್ಥೆಗಳ ಮಧ್ಯೆಯೇ ಅಲ್ಲಿಯ ನಿವಾಸಿಗಳು ಬದುಕು ಕಟ್ಟಿ ಕೊಂಡಿರುತ್ತಾರೆ. ಕೊಳಗೇರಿಯಲ್ಲಿ ನೈರ್ಮಲ್ಯಕ್ಕೆ ಪ್ರಥಮ ಆದ್ಯತೆ ನೀಡ ಬೇಕಾಗಿದ್ದ ನಗರಸಭೆ ತ್ಯಾಜ್ಯ ನಿರ್ವ ಹಣಾ ಘಟಕವನ್ನು ನಿರ್ಮಿಸಿ ಆ ಪ್ರದೇಶವನ್ನು ಮತ್ತಷ್ಟು ಕೊಳಕು ಮಾಡಿದೆ. ದುರ್ವಾಸನೆ, ವಿಪರೀತ ಸೊಳ್ಳೆಗಳ ಕಾಟದ ಮಧ್ಯೆ ಇಲ್ಲಿಯ ನಿವಾಸಿಗಳು ದಿನದೂಡುತ್ತಿದ್ದು, ಅವರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.

ಇಲ್ಲಿಯ ಕೆಇಬಿ ಸಮೀಪವಿರುವ ಕೊಳಗೇರಿ ಕೋಣೆನಾಲಾದ ದಡ ದಲ್ಲಿದೆ. ಅಂದಾಜು 50 ಕುಟುಂಬಗಳು ಇಲ್ಲಿ ವಾಸವಾಗಿವೆ. ಮೂಲ  ಸೌಕರ್ಯದಿಂದ ಈ ಪ್ರದೇಶ  ಪೂರ್ಣ ವಂಚಿತವಾಗಿದೆ. ಇಡೀ ಕಾರವಾರ ನಗರದ ಕೊಳಚೆ ನೀರು ಕೋಣೆನಾಲದ ಮೂಲಕ ಸಮುದ್ರ ಸೇರುತ್ತದೆ. ಈ ನಾಲಾದಲ್ಲಿ ಹೂಳು ತುಂಬಿರುವುದ ರಿಂದ ಕೊಳಚೆ ನೀರೆಲ್ಲ ಈ ಪ್ರದೇಶದ ಸಮೀಪವೇ ಸಂಗ್ರಹ ವಾಗಿ ಹುಳು- ಹುಪ್ಪಡಿಗಳ ಉತ್ಪತ್ತಿಯ ತಾಣವಾಗಿದೆ.

ಪರಿಸ್ಥಿತಿ ಹೀಗಿರುವಾಗ ನಾಲಾದ ಇನ್ನೊಂದು ದಡದ ಮೇಲೆ ನಗರಸಭೆ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸಿದ್ದು ಘಟಕದಿಂದ ಹೊರ ಹೋಗುವ ಹೊಲಸು ನೀರೂ ಸಹ ಕೋಣಾನಾಲಕ್ಕೆ ಬಿಡುವುದರಿಂದ ಸಮಸ್ಯೆಗಳು ದುಪ್ಪಟ್ಟಾಗಿವೆ. ಮಳೆ ಗಾಲದಲ್ಲಿ ತುಸು ನೆಮ್ಮದಿಯಿಂದ ಇರು ತ್ತಿದ್ದವರು ಈಗ ವರ್ಷದ 365 ದಿನವೂ ದುರ್ವಾಸನೆ ಮಧ್ಯೆಯೇ ಕಾಲ ಕಳೆಯಬೇಕಾಗಿದೆ.

ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಕೊಳಗೇರಿ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಜನಪ್ರತಿನಿಧಿಗಳ ರಾಜಕೀಯ ಪ್ರಭಾವದ ಮಧ್ಯೆ ವಿರೋಧ ಕಾವೂ ತಣ್ಣಗಾಯಿತು. ಘಟಕವೇನೋ ಸಿದ್ಧ ಗೊಂಡಿತ್ತು. ಆದರೆ, ಕಾಮಗಾರಿ ಯನ್ನೂ ಅವೈಜ್ಞಾನಿಕ ರೀತಿಯಲ್ಲಿ ಮಾಡಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ನಗರದಲ್ಲಿ ಒಳಚರಂಡಿ ಕಾಮಗಾರಿ ಯನ್ನು ಅವೈಜ್ಞಾನಿಕ ರೀತಿಯಲ್ಲಿ ನಡೆಸಿರುವ ಕುಡ್ಸೆಂಪ್ ತ್ಯಾಜ್ಯ ನಿರ್ವಹಣ ಘಟಕದ ಕಾಮಗಾರಿ ಯನ್ನೂ ಕಳಪೆ ಮಾಡಿದೆ. ಜನವಸತಿ ಪ್ರದೇಶದಲ್ಲಿ ಇಂತಹ ಘಟಕಗಳನ್ನು ನಿರ್ಮಿಸಬಾರದು. ಆದರೆ, ಕುಡ್ಸೆಂಪ್ ಅಧಿಕಾರಿಗಳ ದೂರದೃಷ್ಟಿ ಕೊರತೆ ಯಿಂದಾಗಿ ಘಟಕ ತಲೆಎತ್ತಿ ಮೂರು ವರ್ಷ ಕಳೆದಿದೆ.
 
ಘಟಕದಲ್ಲಿ ತ್ಯಾಜ್ಯ ವನ್ನು ಸಂಸ್ಕರಣೆ ಮಾಡಿ ಕೇವಲ ನೀರು ಮಾತ್ರ ಹೊರಗೆ ಬಿಡಲಾಗುತ್ತದೆ ಎಂದು ಘಟಕದ ಅಧಿಕಾರಿಗಳು ಹೇಳು ತ್ತಾರೆ. ಆದರೆ, ವಾಸ್ತವವೇ ಬೇರೆಯೇ ಇದೆ. ಘಟಕದಿಂದ ಹೊರಗೆ ಬರುವ ನೀರಿನಿಂದ ದುರ್ವಾಸನೆ ಬರುತ್ತಿದ್ದು ಕೊಳಗೇರಿ ನಿವಾಸಿಗಳು ಕಾಯಿಲೆಗಳು ಹರಡಬಹುದು ಎನ್ನುವ ಭಯದ ಮಧ್ಯೆ ದಿನ ಕಳೆಯುತ್ತಿದ್ದಾರೆ.

“ತ್ಯಾಜ್ಯ ನಿರ್ವಹಣಾ ಘಟಕ ಜನವಸತಿ ಪ್ರದೇಶದಲ್ಲಿ ಬೇಡ ಎಂದು ಸಾಕಷ್ಟು ಬಾರಿ ಪ್ರತಿಭಟನೆ ನಡೆ ಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಘಟಕದಿಂದ ಬರುವ ಹೊಲಸು ನೀರು ಸಮುದ್ರಕ್ಕೆ ಬಿಡಲು ಪೈಪ್ ಅಳವಡಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಅದು ಯಾವಾಗ ಪೂರ್ಣ ಗೊಳ್ಳುತ್ತದೆಯೋ ಗೊತ್ತಿಲ್ಲ    ಎನ್ನುತ್ತಾರೆ ಸ್ಥಳೀಯ ನಿವಾಸಿ ಬಾಬು ಶೇಖ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT