ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಕಾಂಗ್ರೆಸ್‌ ಬೆಂಬಲಕ್ಕೆ ಎಎಪಿ ನಕಾರ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ, ಐಎಎನ್ಎಸ್‌): ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ದೆಹಲಿಯಲ್ಲಿ ಹೊಸ ಸರ್ಕಾರ ರಚಿ­ಸಲು ತೆರೆ­ಮರೆಯ ಕಸರತ್ತು ನಡೆದಿದೆ.  ಆಮ್‌ ಆದ್ಮಿ ಪಾರ್ಟಿಗೆ (ಎಎಪಿ) ಕಾಂಗ್ರೆಸ್‌ ಬೆಂಬಲ ಸೂಚಿಸಿದೆ. ಆದರೆ ಯಾವುದೇ ಪಕ್ಷದ ಬೆಂಬಲಕ್ಕೆ ಎಎಪಿ ನಿರಾಕರಿಸಿದೆ.

31 ಸ್ಥಾನ ಗಳಿಸಿ­ದ ಅತಿದೊಡ್ಡ ಪಕ್ಷ ಬಿಜೆಪಿ ಸರ್ಕಾರ ರಚನೆಗೆ ನಿರಾಕರಿಸಿ­ರು­ವುದರಿಂದ 2ನೇ ದೊಡ್ಡ ಪಕ್ಷ ಎಎಪಿಗೆ ಬೆಂಬಲ ಸೂಚಿಸಿ ಶುಕ್ರವಾರ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರಿಗೆ ಕಾಂಗ್ರೆಸ್‌ ಪತ್ರ ಸಲ್ಲಿ­ಸಿದೆ. ಜನರ ಮೇಲೆ ಮತ್ತೆ ಚುನಾವಣೆ ಹೇರಿಕೆ ತಡೆಯಲು ಪಕ್ಷ ಈ ನಿರ್ಧಾರ ಕೈಗೊಂಡಿದೆ.

ಈ ಬೆಳವಣಿಗೆಯಿಂದಾಗಿ ಈವರೆಗೆ ಯಾವುದೇ ಪಕ್ಷದ ಬೆಂಬಲ ಕೇಳಲು ಹಿಂದೇಟು ಹಾಕಿದ್ದ ಎಎಪಿಯ ಹಿರಿಯ ನಾಯಕರು ಗೊಂದಲ­ಕ್ಕೀಡಾಗಿ, ರಾತ್ರಿ ತುರ್ತು ಸಭೆ ಸೇರಿ ಚರ್ಚಿಸಿದರು. ನಂತರ ಕಾಂಗ್ರೆಸ್‌ ಬೆಂಬಲ ತಿರಸ್ಕರಿಸಲು ನಿರ್ಧ­ರಿಸಿದರು. ಶನಿವಾರ ಜಂಗ್‌ ಅವರನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವ ಎಎಪಿ ನಾಯಕರು ಭೇಟಿಯಾಗಿ ತೀರ್ಮಾನ ತಿಳಿಸ­ಲಿದ್ದಾರೆ ಎಂದು ಪಕ್ಷ ಹೇಳಿದೆ.

ದೆಹಲಿ ವಿಧಾನ­ಸಭಾ ಚುನಾವಣೆಯಲ್ಲಿ 28 ಸ್ಥಾನಗ­ಳನ್ನು ಪಡೆದಿರುವ ಎಎಪಿಯ ಮುಖಂಡ ಯೋಗೇಂದ್ರ ಯಾದವ್, ‘ಸರ್ಕಾರ ರಚನೆಗೆ ಅಗತ್ಯ ಸ್ಥಾನ­ಗಳನ್ನು ನಮ್ಮ ಪಕ್ಷ ಪಡೆದಿಲ್ಲ. ಹಾಗಾಗಿ ನಾವು ಸರ್ಕಾರ ರಚಿಸುವುದಿಲ್ಲ’ ಎಂದಿದ್ದಾರೆ.

ಒಟ್ಟು 70 ಸ್ಥಾನ­ಗಳ ದೆಹಲಿ ವಿಧಾನ­ಸಭೆ­ಯಲ್ಲಿ ಬಹುಮತ ಸರ್ಕಾರ ರಚನೆಗೆ 36 ಶಾಸಕರ ಬೆಂಬಲ ಬೇಕಿದೆ. ಆದರೆ ಯಾವ ಪಕ್ಷವೂ ಇಷ್ಟು ಸ್ಥಾನ ಪಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT