ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು: ವಾಸುದೇವ

ಬಾಳ್ಕುದ್ರು ವಿಪ್ರ ವೇದಿಕೆಗೆ ಚಾಲನೆ
Last Updated 13 ಸೆಪ್ಟೆಂಬರ್ 2013, 10:36 IST
ಅಕ್ಷರ ಗಾತ್ರ

ಬ್ರಹ್ಮಾವರ: ಭಗವಂತ ಮೊದಲು ಪ್ರಜೆಗಳನ್ನು ಸೃಷ್ಟಿಸಿ, ನಂತರ ಆಯಾಯ ಜನರ ಗುಣ ಕರ್ಮಗಳಿಗೆ ಅನು­ಗುಣವಾಗಿ ವರ್ಣ ವಿಭಜನೆ ಮಾಡ­ಲಾಯಿತು. ವರ್ಣಗಳ ಆಧಾರ­ದಲ್ಲಿ ಜಾತಿ ರಚನೆಯಾಗಿದೆ. ಆದರೆ ಎಲ್ಲಿ­ಯೂ ಕೂಡ ಯಾವ ಜಾತಿ ಮೇಲೆ ಕೀಳು ಎನ್ನುವುದನ್ನು ತಿಳಿಸಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಪಂಚಾಂಗಕರ್ತ ಹಾಲಾಡಿಯ ವಿದ್ವಾನ್ ವಾಸುದೇವ ಜೋಯಿಸ್ ಹೇಳಿದರು.

ಹಂಗಾರಕಟ್ಟೆ ಶ್ರೀರಾಮ ಮಂದಿರ­ದಲ್ಲಿ ಶನಿವಾರ ಅವರು ಐರೋಡಿ ಬಾಳ್ಕುದ್ರು ಪರಿಸರದ ವಿಪ್ರ ವೇದಿಕೆ­ಯನ್ನು ಉದ್ಘಾಟಿಸಿ ಮಾತನಾಡಿದರು.

ಐರೋಡಿ ಗ್ರಾ.ಪಂ. ಅಧ್ಯಕ್ಷ ಕಸ್ತೂರಿ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹರೀಶ್ ಮಧ್ಯಸ್ಥ ಮುಖ್ಯ ಅತಿಥಿಗಳಾಗಿ ಉಪ­ಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಾಜದ ಬಾಳ್ಕುದ್ರು ಸುಬ್ರಹ್ಮಣ್ಯ ಆಚಾರ್ಯ ಅವರಿಗೆ ಸ್ವಉದ್ಯೋಗಕ್ಕಾಗಿ ಲ್ಯಾಪ್‌­ಟಾಪ್ ಮತ್ತು ಪ್ರಿಂಟರ್, ಐರೋಡಿ ಸುಬ್ರಹ್ಮಣ್ಯ ಹೆಬ್ಬಾರ್ ಇವರ ಮನೆಗೆ ಸೋಲಾರ್ ಲೈಟ್ ಕೊಡುಗೆ ಮತ್ತು ಎಂಜಿನಿಯರಿಂಗ್ ವ್ಯಾಸಂಗ ಮಾಡು­ತ್ತಿರುವ ಕಾರ್ತಿಕ್ ಹೆಬ್ಬಾರ್ ಅವರಿಗೆ ವಿದ್ಯಾನಿಧಿ ವಿತರಿಸಲಾಯಿತು.

ವಿಪ್ರ ವೇದಿಕೆಯ ವತಿಯಿಂದ ಹಿರಿಯ­ರಾದ ಬಿ.ಅನಂತನಾರಾಯಣ ಐತಾಳ್, ಸೀತಾರಾಮ ಕಲ್ಕೂರ ದಂಪತಿಗಳು ಮತ್ತು ಮೀನಾಕ್ಷಿಯಮ್ಮ, ಬಿ.ಪಿ.­ಲಲಿತಮ್ಮ ಇವರನ್ನು ಗೌರವಿಸ­ಲಾಯಿತು.

ರವಿರಾಜ ಅಧಿಕಾರಿ ಪ್ರಾಸ್ತಾವಿಕ­ವಾಗಿ ಮಾತನಾಡಿದರು. ವೇದಿಕೆಯ ಅಧ್ಯಕ್ಷ ರಾಮನಾಥ ಅಲ್ಸೆ ಸ್ವಾಗತಿಸಿ­ದರು. ಕಾರ್ಯ­ದರ್ಶಿ ವಿಘ್ನೇಶ್ವರ ಅಡಿಗ ವಂದಿಸಿ­ದರು. ರಾಮದೇವ ಹಂದೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT