ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವಿಕ ಚಿಂತನೆಯೇ ಸತ್ಸಂಗದ ಮೂಲ: ರಾಜೇಶ್

Last Updated 9 ನವೆಂಬರ್ 2011, 19:30 IST
ಅಕ್ಷರ ಗಾತ್ರ

ವಿಜಯಪುರ: `ಆತ್ಮ ಹಾಗೂ ದೈವದ ಕುರಿತ ಚಿಂತನೆಯೇ ಸತ್ಸಂಗದ ಮೂಲ ಉದ್ದೇಶವಾಗಬೇಕು~ ಎಂದು ಹಿರಿಯ ಚಿತ್ರನಟ, ಕಲಾತಪಸ್ವಿ ರಾಜೇಶ್ ಅಭಿಪ್ರಾಯಪಟ್ಟರು.

ಅಕ್ಕಯ್ಯಮ್ಮ ವೆಂಕಟನಾರಾಯಣಪ್ಪ ಸ್ಮರಣಾರ್ಥ ಇಲ್ಲಿನ ಕೃಷ್ಣ ಸತ್ಸಂಗ ಸೇವಾಸಮಿತಿಯ ಧ್ಯಾನಮಂದಿರದಲ್ಲಿ ಪಟ್ಟಣದ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ಯೋಗಿನಾರಾಯಣ ಯತೀಂದ್ರರ ಜೀವನ ಸಾಧನೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಪ್ರತಿಯೊಬ್ಬ ಮನುಷ್ಯನ ಮನದಲ್ಲಿಯೂ ಮಾನವೀಯತೆ ಮನೆ ಮಾಡಬೇಕಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಆಧುನೀಕರಣದ ಪ್ರಭಾವದಿಂದಾಗಿ ಧಾರ್ಮಿಕತೆ, ಅಧ್ಯಾತ್ಮಿಕತೆಯ ಮೌಲ್ಯಗಳು ಕ್ಷೀಣಿಸುತ್ತಿವೆ. ಅದರಿಂದಲೇ ಶಾಂತಿ, ನೆಮ್ಮದಿ ಕಾಣುತ್ತಿಲ್ಲ~ ಎಂದರು.

`ಯೋಗಿನಾರಾಯಣಯತಿಂದ್ರರು ಕಾಲಜ್ಞಾನವು ಸರ್ವಕಾಲಿಕ ಸತ್ಯ ಎಂದು ಪ್ರತಿಪಾದಿಸಿದ ವ್ಯಕ್ತಿ. ಯತೀಂದ್ರರ ಆದರ್ಶಗಳನ್ನು ಪಾಲಿಸಬೇಕಿದೆ~ ಎಂದರು.

ಭಗವದ್ಗೀತಾಪ್ರವಚಕ ವಿದ್ವಾನ್ ಎಸ್.ಕೇಶವಭಟ್ಟಾಚಾರ್ಯ ಸಾನಿದ್ಯ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರಕೈವಾರದ ವಾನರಾಸಿ ಬಾಲಕೃಷ್ಣ ಭಾಗವತ ಉದ್ಘಾಟಿಸಿದರು.

ತಾಲ್ಲೂಕು ಆಹಾರ ಶಿರಸ್ತೆದಾರ ಕೃಷ್ಣಮೂರ್ತಿ, ಬಲಿಜಸಂಘದ ಗೌರವಾಧ್ಯಕ್ಷ ವಿ.ನಾರಾಯಣಪ್ಪ, ಪಿ.ನಾರಾಯಣಪ್ಪ, ಅಧ್ಯಕ್ಷ ಆರ್.ವೇಣುಗೋಪಾಲ್, ಎಣ್ಣೆಗಾಣಿಗರ ಸಂಘದ ಅಧ್ಯಕ್ಷ ಎಲ್.ಗೋವಿಂದರಾಜು, ಬ್ರಾಹ್ಮಣರ ಸೇವಾಮಂಡಳಿಯ ಕಾರ್ಯದರ್ಶಿ ಎಚ್.ಆರ್.ಶೇಷಗಿರಿರಾವ್, ವಿ.ನಾಗಯ್ಯ, ಲಕ್ಷ್ಮಮ್ಮ ವಿ.ಕೃಷ್ಣಪ್ಪ, ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ದೇವನಹಳ್ಳಿಯ ನರಸಿಂಹಮೂರ್ತಿ, ವಿಜಯಪುರದ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನ್ಯಾಯಬೆಲೆ ಅಂಗಡಿಗಳ ನೌಕರರನ್ನು ಅಭಿನಂದಿಸಲಾಯಿತು. ಶಾಲಾಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ನೋಟ್‌ಪುಸ್ತಕ, ವೃದ್ಧರಿಗೆ ಹೊದಿಕೆಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT