ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಧರ್ಮ ಪಾಲನೆಯಿಂದ ಶಾಂತಿ ಸಾಧ್ಯ'

Last Updated 13 ಏಪ್ರಿಲ್ 2013, 10:50 IST
ಅಕ್ಷರ ಗಾತ್ರ

ಯಾದಗಿರಿ: ಜೀವನ ಭಗವಂತ ಕೊಟ್ಟ ಕೊಡುಗೆ. ಆದರ್ಶ ಜೀವನ ನಡೆಸಬೇಕಾದರೆ ಬದುಕಿನಲ್ಲಿ ಧರ್ಮ ಪರಿಪಾಲನೆಯಿಂದ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಉಜ್ಜನಿಯ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಗುರುವಾರ ತಾಲೂಕಿನ ಐತಿಹಾಸಿಕ ಧಾರ್ಮಿಕ ಶ್ರದ್ದಾ ಕೇಂದ್ರವಾಗಿರುವ ಸುಕ್ಷೇತ್ರ ಅಬ್ಬೆತುಮಕೂರ ಸಿದ್ದಸಂಸ್ಥಾನ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಡಾ.ಗಂಗಾಧರ ಮಹಾಸ್ವಾಮಿಗಳ ನೇತತ್ವದಲ್ಲಿ ಹಮ್ಮಿಕೊಂಡಿದ ಮಹಾರುದ್ರಯಾಗಕ್ಕೆ ಚಾಲನೆ ನೀಡಿ ಆರ್ಶೀವಚನ ನೀಡಿದ ಜಗದ್ಗರುಗಳು ಯುಗಾದಿ ಹೊಸ ಸಂವತ್ಸರ ದಿನದಂದು ನಡೆಯುತ್ತಿರುವ ಈ ಮಹಾರುದ್ರಯಾಗದಿಂದ ಬರಗಾಲದಿಂದ ತತ್ತರಿಸಿರುವ ನಾಡಿನಲ್ಲಿ ಹೆಚ್ಚಿನ ಮಳೆಯಾಗಿ ದೇಶದ ಬೆನ್ನಲುಬುವಾಗಿರುವ ರೈತರ ಸಂಕಷ್ಟ ದೂರವಾಗಿ ಸಮದ್ದವಾದ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಅದಕ್ಕೆ ಸೂಕ್ತ ಬೆಲೆ ಸಿಗಲಿ ಎಂದು ಹಾರೈಸಿದರು.

ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮ ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕತಿ, ಬೋಧನೆಗಿಂದ ಸಾಧನೆ, ಕಾರ್ಯಕ್ಕಿಂತ ಕಾಯಕಕ್ಕೆ, ದಾನಕ್ಕಿಂತ ದಾಸೋಹಕ್ಕೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ. ಶ್ರೀ ವಿಶ್ವರಾಧ್ಯರು ಕಠಿಣ ತಪಸ್ವಿಗಳಾಗಿ, ಜ್ಞಾನಿಗಳಾಗಿ ಜನಮನದ ಅಜ್ಞಾನ ಪರಿಹರಿಸಿದ ಹರಿಕಾರರು ಅವರ ಆರ್ಶಿವಾದ ಎಲ್ಲರ ಮೇಲೆ ಧರ್ಮ ಕವಚವಾಗಿ ಕಾಪಾಡಲಿ ಎಂದು ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರೂ ಒಡ್ತಡ ಜೀವನ ಸಾಗಿಸುತ್ತಿದ್ದು, ಬದುಕಿನ ಸ್ವಲ್ಪ ಸಮಯ ಆಧ್ಯಾತ್ಮದತ್ತ ಮೀಸಲಿಟ್ಟರೆ ಮಾತ್ರ ಶಾಂತಿ, ಸಮಾಧಾನ, ಸಾಮರಸ್ಯ ಮೂಡಿ ಸದ್ಭಾವನೆಯಿಂದ ಜೀವನ ಸಾಗಿಸಿ ಇತರರಿಗೆ ಮಾದರಿಯಾಗಬಹುದು ಎಂದರು.

ಇಲ್ಲಿನ ಶ್ರೀಗಳು ಧಾರ್ಮಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಸಮಾಜದಲ್ಲಿ ಜಾಗತಿ ಮೂಡಿಸುವದರ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು  ಬದಲಾವಣೆಯ ಸಂಕೇತವಾಗಿದೆ ಎಂದರು.

ವೇದಿಕೆ ಮೇಲೆ ಶ್ರೀಮಠದ ಪಿಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ ಉಪಸ್ಥಿತರಿದ್ದರು.
ದುದನಿಯ ಉದ್ಯಮಿ ಶಂಕರ ಮೇತ್ರೆ ಜಗದ್ಗುರುಗಳ ವಿಶೇಷ ಪಾದ ಪೂಜೆ ನೆರವೇರಿಸಿದರು.

ಜಗದ್ಗುರುಗಳು ಅಬ್ಬೆತುಮಕೂರ ಗ್ರಾಮ ಪ್ರವೇಶಿಸುತ್ತಿದಂತೆ ಅವರನ್ನು ಅಪಾರ ಭಕ್ತರು ಪೂರ್ಣ ಕುಂಭ ಮೇಳದೊಂದಿಗೆ ಮೆರವಣಿಗೆ ಮೂಲಕ ಶ್ರೀ ಮಠಕ್ಕೆ ಬರಮಾಡಿಕೊಂಡರು.

ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಲಿಂಗನಗೌಡ ಮಲ್ಹಾರ್, ನ್ಯಾಯವಾದಿ ಎಸ್.ಬಿ. ಪಾಟೀಲ್, ಪರಮಣ್ಣಗೌಡ, ಚನ್ನಪ್ಪ ಸಾಹುಕಾರ, ಮಲ್ಲಣಗೌಡ ಮಲ್ಕಾಪೂರ, ವಿಶ್ವನಾಥರಡ್ಡಿ ಪಾಟೀಲ್ ಅಬ್ಬೆತುಮಕೂರ, ಎಸ್.ಎನ್ ಮಿಂಚನಾಳ, ಅಮೀನರಡ್ಡಿ ಹತ್ತಿಕುಣಿ, ಸುರೇಶ ಬಾಡದ, ರಾಚೋಟಿ ಸ್ವಾಮಿ ಎಣ್ಣಿ, ಸಿದ್ರಾಮರಡ್ಡಿ ಖಂಡ್ರೆ, ರವಿ ಬಾಪುರೆ, ರಮೇಶ ದೊಡ್ಮನಿ, ಬಸವರಾಜ ರಾಜಾಪೂರ,  ಚನ್ನಪ್ಪಗೌಡ ಮೋಸಂಬಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಬೆಳಿಗ್ಗೆ ವಿಶ್ವರಾಧ್ಯರ ಕೃತ ಗದ್ದುಗೆಗೆ ಭಕ್ತರಿಂದ ಮಹಾರುದ್ರಾಭಿಷೇಕ  ನಡೆಯುತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT