ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ -ಇಂದು

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಫೆಬ್ರುವರಿ 2, ಗುರುವಾರ
ವಾರ್ತಾ ಇಲಾಖೆ: ಮಹಾತ್ಮ ಗಾಂಧಿ ಸ್ಮಾರಕ ನಿಧಿ (ಗಾಂಧಿ ಭವನ), ಕುಮಾರ ಪಾರ್ಕ್ ಈಸ್ಟ್, ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಮತ್ತು ಇ-ಅವೇದನ್ ಸಾಫ್ಟ್‌ವೇರ್ ಉದ್ಘಾಟನೆ, ಅಧ್ಯಕ್ಷತೆ- ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ ವಿನೋದ ನಟರಾಜ್, ಅತಿಥಿಗಳು- ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವ ಸಿ.ಸಿ.ಪಾಟೀಲ್, ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಪ್ರೇಮ ಕಾರ್ಯಪ್ಪ, ಬೆಳಿಗ್ಗೆ 10.

ಫೆಡರೇಶನ್ ಆಫ್ ಕರ್ನಾಟಕ ಚೆಂಬರ್ಸ್‌ ಆಫ್ ಕಾಮರ್ಸ್‌ ಅಂಡ್ ಇಂಡಸ್ಟ್ರಿ: ಹೊಟೇಲ್ ಲಿ ಮೆರಿಡಿಯನ್, ಸ್ಯಾಂಕಿ ರಸ್ತೆ, `ಪೈಲಟ್ ಪ್ರಾಜೆಕ್ಟ್ಸ್- ಸ್ಪೆಶಲ್ ಎಂಫಸಿಸ್ ಆನ್ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ವೇ ಇನ್ ಸ್ಟೇಟ್ ಆಫ್ ಕರ್ನಾಟಕ~ ವಿಷಯ ಕುರಿತ ವಿಚಾರ ಸಂಕಿರಣ, ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಅತಿಥಿಗಳು- ಕಾನೂನು ಸಚಿವ ಸುರೇಶ್ ಕುಮಾರ್, ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್, ಬೆಳಿಗ್ಗೆ 10.

ಜ್ಯೋತಿ ನಿವಾಸ್ ಕಾಲೇಜು ಅಟೋನಮಸ್: ಕಾಲೇಜು ಆವರಣ, `ಸೈನ್ಸ್ ಅಂಡ್ ಮ್ಯಾನ್‌ಕೈಂಡ್~ ವಿಷಯ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಅತಿಥಿಗಳು- ಜೈನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಆರ್. ಚೆನ್‌ರಾಜ್ ಜೈನ್,  ನಾರಾಯಣ ಹೃದಯಾಲಯದ ನ್ಯೂರೋಸೈನ್ಸ್ ನಿರ್ದೇಶಕ ಡಾ.ತಿಮ್ಮಪ್ಪ ಹೆಗ್ಡೆ, ಬೆಳಿಗ್ಗೆ 10.

ಸರ್ವೋತ್ತಮ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು: ಹತ್ವಾರ್ ಸಭಾಂಗಣ, ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಸರ್ವೋತ್ತಮ ಕಾಲೇಜು, ಚಾಮರಾಜಪೇಟೆ, ವಾರ್ಷಿಕ ಕ್ರೀಡಾಕೂಟ ಹಾಗೂ ಆವಿಷ್ಕಾರ್-2012 ಬಹುಮಾನ ವಿತರಣಾ ಸಮಾರಂಭ, ಅಧ್ಯಕ್ಷತೆ- ವಿದ್ಯಾಪೀಠದ ಆಡಳಿತಾಧಿಕಾರಿ ಉಷಾ ಆಚಾರ‌್ಯ, ಅತಿಥಿಗಳು- ಸುಗಮ ಸಂಗೀತ ಗಾಯಕ ಯಶವಂತ ಹಳಿಬಂಡಿ, ವಿದ್ಯಾಪೀಠದ ಪ್ರಾಂಶುಪಾಲರಾದ ಕೆ.ಎನ್.ಪುಷ್ಪಲತಾ, ವಿದ್ಯಾಪೀಠ ಸಂಸ್ಥಾಪಕಿ ಕೆ.ಎನ್.ಪುಟ್ಟಮ್ಮ, ಬೆಳಿಗ್ಗೆ 10.30.

ಆಲ್ ಇಂಡಿಯ ಗ್ರಾನೈಟ್ ಅಂಡ್ ಸ್ಟೋನ್ ಅಸೋಸಿಯೇಷನ್:
ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ, ತುಮಕೂರು ರಸ್ತೆ, `ಜಿಯಾಲಜಿ ಅಂಡ್ ಮೈನಿಂಗ್~ ವಿಷಯ ಕುರಿತ ವಿಚಾರ ಸಂಕಿರಣ, ಉದ್ಘಾಟನೆ- ಗಣಿಗಾರಿಕೆ ಹಾಗೂ ಭೂಗರ್ಭಶಾಸ್ತ್ರ ವಿಭಾಗದ ನಿರ್ದೇಶಕ ಎಚ್.ಆರ್.ಶ್ರೀನಿವಾಸ, ಬೆಳಿಗ್ಗೆ 11
.
ನೆಹರು ಯುವ ಕೇಂದ್ರ: ಎನ್.ಜಿ.ಓ ಸಭಾಂಗಣ, ಕಬ್ಬನ್ ಉದ್ಯಾನವನ, ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಜಿಲ್ಲಾ ಯುವ ಪ್ರಶಸ್ತಿ ವಿತರಣೆ, ಉದ್ಘಾಟನೆ- ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಪ್ರಶಸ್ತಿ ವಿತರಣೆ- ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ, ಅತಿಥಿಗಳು- ಲೋಕಸಭಾ ಸದಸ್ಯ ಡಿ.ಬಿ.ಚಂದ್ರೇಗೌಡ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರ ಗೌಡ, ಬೆಳಿಗ್ಗೆ 11.

ಸೇಂಟ್ ಜಾನ್ ಹೈ ಸ್ಕೂಲ್: ಶಾಲಾ ಆವರಣ, ನಂ.132, ಕ್ಲೇವ್ ಲ್ಯಾಂಡ್ ಟೌನ್, ಭಾರತಿ ನಗರ ಪೊಲೀಸ್ ಸ್ಟೇಷನ್ ಎದುರು, ಫ್ರೇಜರ್ ಟೌನ್, `ಪ್ಯಾಲೆಟ್~ ಚಿತ್ರಕಲಾ ಪ್ರದರ್ಶನ, ಅತಿಥಿಗಳು- ಬಿಶಪ್ ಕಾಟನ್ ಗರ್ಲ್ಸ್ ಸ್ಕೂಲ್‌ನ ಕಲಾ ಶಿಕ್ಷಕಿ ರೀನು ಸಾಹಿ, ವಿದ್ಯಾನಿಕೇತನ ಹೈಸ್ಕೂಲ್‌ನ ಕಲಾ ಶಿಕ್ಷಕ ಕೆ.ಮಲ್ಲೇಶ, ಬೆಳಿಗ್ಗೆ 11,

ಸಾಂಸ್ಕೃತಿಕ ಕಾರ್ಯಕ್ರಮಗಳು
ಶ್ರೀದೇವಿ, ಭೂದೇವಿ ಸಮೇತ ಶ್ರೀ ರಂಗನಾಥ ಸ್ವಾಮಿ ವೆಂಕಟರಮಣ ದೇವಾಲಯ: ದೇವಾಲಯ ಪುನರ್ ಜೀರ್ಣೋದ್ಧಾರ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವ.

ಉದ್ಘಾಟನೆ: ಡಾ.ಬಾಲಗಂಗಾಧರನಾಥ ಸ್ವಾಮೀಜಿ. ಸ್ಥಳ: ದಾಸನಪುರ.
ಸರಸ್ವತಿ ಸಂಗೀತ ವಿದ್ಯಾಲಯ: ಉತ್ಸವ ನಾದ ಸೌರಭದಲ್ಲಿ ಶ್ಯಾಮಲ ಜಿ. ಭಾವೆ  ಮತ್ತು ಶಿಷ್ಯರಿಂದ ಗಾಯನ. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 5.30

ರಜಪೂತ್ ಸಮಾಜ ಕರ್ನಾಟಕ:
ಚಾಮುಂಡ ಮಾತಾ ಮಂದಿರದ ಪ್ರತಿಷ್ಠಾಪನಾ ಮಹೋತ್ಸವ. ಸ್ಥಳ: ಫ್ರೀಡಂ ಪಾರ್ಕ್, ಗಾಂಧಿ ನಗರ ಮಧ್ಯಾಹ್ನ 12.
ಶ್ರೀರಾಮ ಲಲಿತ ಕಲಾ ಮಂದಿರ: ವಸಂತ ಸಂಗೀತೋತ್ಸವದಲ್ಲಿ ಅಭಿಷೇಕ್ ರಘುರಾಂ ಅವರಿಂದ ಗಾಯನ. ಅಕ್ಕರಾಯ್ ಸುಬ್ಬುಲಕ್ಷ್ಮಿ (ಪಿಟೀಲು), ಅನಂತ ಆರ್. ಕೃಷ್ಣನ್ (ಮೃದಂಗ), ಜಿ.ಗುರುಪ್ರಸನ್ನ (ಖಂಜರಿ). ಸ್ಥಳ: ಗಾಯನ ಸಮಾಜ ಸಭಾಂಗಣ, ಕೆ.ಆರ್.ರಸ್ತೆ, ಬಸವನಗುಡಿ. ಸಂಜೆ 5.45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT