ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಸೆಪ್ಟೆಂಬರ್ 17, ಶನಿವಾರ

Last Updated 16 ಸೆಪ್ಟೆಂಬರ್ 2011, 19:05 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲ: ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ, ಪದ್ಮನಾಭನಗರ. ವಿಶ್ವಕರ್ಮ ದಿನಾಚರಣೆ ಹಾಗೂ ಜನಜಾಗೃತಿ ಸಮಾವೇಶ. ಪೂಜಾ ಕಾರ್ಯಕ್ರಮದ ಉದ್ಘಾಟನೆ- ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಸಾನ್ನಿಧ್ಯ- ಅರೆಮಾದನಹಳ್ಳಿ ಮಠದ ಗುರು ಶಿವಸುಜ್ಞಾನಮೂರ್ತಿ ಸ್ವಾಮೀಜಿ. ಅತಿಥಿಗಳು- ಶಾಸಕರಾದ ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್, ಎಂ.ಕೃಷ್ಣಪ್ಪ (ವಿಜಯನಗರ ವಿಧಾನಸಭಾ ಕ್ಷೇತ್ರ), ಸಂಸದ ಎಚ್.ವಿಶ್ವನಾಥ್. ಅಧ್ಯಕ್ಷತೆ- ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ. ಮಧ್ಯಾಹ್ನ 12. ಧಾರ್ಮಿಕ ಸಭೆ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಸಾನ್ನಿಧ್ಯ- ಅರೆಮಾದನಹಳ್ಳಿ ಮಠದ ಗುರು ಶಿವಸುಜ್ಞಾನಮೂರ್ತಿ ಸ್ವಾಮೀಜಿ. ಅತಿಥಿಗಳು- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಅನಂತಕುಮಾರ್, ಸಚಿವರಾದ ಡಾ.ವಿ.ಎಸ್.ಆಚಾರ್ಯ, ಎಸ್.ಸುರೇಶ್‌ಕುಮಾರ್. ಅಧ್ಯಕ್ಷತೆ- ಸಚಿವ ಆರ್.ಅಶೋಕ. ಮಧ್ಯಾಹ್ನ 2.

ಡಿಗ್ನಿಟಿ ಪ್ರತಿಷ್ಠಾನ: ನಿಮ್ಹಾನ್ಸ್ ಸಭಾಂಗಣ, ಹೊಸೂರು ರಸ್ತೆ. `ರಿಟೈರ್‌ಮೆಂಟ್ ಎಕ್ಸ್‌ಪೋ- 2011~ ಹಿರಿಯರ ಮೇಳ. ಉದ್ಘಾಟನೆ- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ. ಅತಿಥಿ- ನಟಿ ತಾರಾ ಅನುರಾಧ. ಬೆಳಿಗ್ಗೆ 11.

ಸಾಧನಾ ಸಂಗಮ ಟ್ರಸ್ಟ್: ಡಾ.ರಾಜ್‌ಕುಮಾರ್ ಸಭಾಂಗಣ, ಆರ್‌ಟಿಓ ಕಚೇರಿ, ರಾಜಾಜಿನಗರ. ರಜತ ಸಾಧನ ಕಾರ್ಯಕ್ರಮ. ಅತಿಥಿಗಳು- ಮೇಯರ್ ಪಿ.ಶಾರದಮ್ಮ, ಜೈನ್ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಾಮಾಜಿಕ ಅಧ್ಯಯನ ವಿಭಾಗದ ಡೀನ್ ಪ್ರೊ. ಚೂಡಾಮಣಿ ನಂದಗೋಪಾಲ್. ಸಂಜೆ 5.

ಮಾನ್ಯವಾರ್ ಕಾನ್ಷಿರಾಂ ಏರ್ ಟ್ರಾವೆಲ್ಸ್ ಲಿಮಿಟೆಡ್: 80 ಅಡಿರಸ್ತೆ, 2ನೇ ಮಹಡಿ, ಆರ್.ಎಂ.ವಿ, 2ನೇ ಹಂತ, ಡಾಲರ್ಸ್ ಕಾಲೋನಿ. ಟ್ರಾವೆಲ್ಸ್ ಉದ್ಘಾಟನೆ- ಉತ್ತರ ಪ್ರದೇಶದ ವಿಧಾನ ಪರಿಷತ್ ಸದಸ್ಯ ಡಾ.ಅಶೋಕ ಸಿದ್ಧಾರ್ಥ. ಅತಿಥಿ- ನಗರ ಪೊಲೀಸ್ ಕಮಿಷನರ್    ಜ್ಯೋತಿಪ್ರಕಾಶ್ ಮಿರ್ಜಿ. ಬೆಳಿಗ್ಗೆ 11.

ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಕಸ್ತೂರಬಾ ರಸ್ತೆ. `ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವ- 2011~ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿ- ಇಸ್ರೊ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್. ಸಂಜೆ 6.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ಸಭಾಂಗಣ, ಕನ್ನಡ ಭವನ. ಮನೆಯಂಗಳದಲ್ಲಿ ಮಾತುಕತೆ. ಸಮಾಜ ಸೇವಾ ಕಾರ್ಯಕರ್ತ ಜಿ.ಎಸ್.ಜಯದೇವ ಅವರೊಂದಿಗೆ ಸಂವಾದ ಕಾರ್ಯಕ್ರಮ. ಸಂಜೆ 4.

ಭಾರತೀಯ ವಿಜ್ಞಾನ ಸಂಸ್ಥೆ ಹಳೇ ವಿದ್ಯಾರ್ಥಿಗಳ ಸಂಘ: ಭಾರತೀಯ ವಿಜ್ಞಾನ ಸಂಸ್ಥೆ. `ಲೈಟಿಂಗ್ ಅಂಡ್ ಇಟ್ಸ್ ಎಫೆಕ್ಟ್ ಆನ್ ಹ್ಯೂಮನ್, ಪವರ್ ಸಿಸ್ಟಮ್ ಅಂಡ್ ಏರೋಸ್ಪೇಸ್ ವೆಹಿಕಲ್~ ಕುರಿತು ಉಪನ್ಯಾಸ- ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಉಪನ್ಯಾಸಕ ಪ್ರೊ.ಜಿ.ಆರ್.ರಂಗನಾಥ್. ಸಂಜೆ 4.

ಕರ್ನಾಟಕ ಜಾನಪದ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ. ರಾಜ್ಯ ಮಟ್ಟದ ಮೂಲ ಹಾಗೂ ಆಧುನಿಕ ಜನಪದ ಗಾಯಕರ ಪ್ರಥಮ ಸಮಾವೇಶದ ಜಾನಪದ ಗಾಯನ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭ. ಅತಿಥಿಗಳು- ಜಾನಪದ ತಜ್ಞ ಡಾ.ಬಸವರಾಜ ಮಲಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯಕ್ತ ಮನು ಬಳಿಗಾರ್, ಮೈಸೂರು ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ. ಅಧ್ಯಕ್ಷತೆ- ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ. ಸಂಜೆ 5.

ಪದವಿ ಪೂರ್ವ ಶಿಕ್ಷಣ ಇಲಾಖೆ: ಶಾಶ್ವತಿ ಸಭಾಂಗಣ, ಎನ್‌ಎಂಕೆಆರ್‌ವಿ ಕಾಲೇಜು, 3ನೇ ಬಡಾವಣೆ, ಜಯನಗರ. ಮಾಸಿಕ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮ. ಅತಿಥಿಗಳು- ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ. ಅಧ್ಯಕ್ಷತೆ- ಬೆಂಗಳೂರು ದಕ್ಷಿಣ ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಉಮಾ ಬಸವಣ್ಣೆಪ್ಪ. ಬೆಳಿಗ್ಗೆ 10.

ಶೇಷಾದ್ರಿಪುರ ಸಂಜೆ ಪದವಿ ಕಾಲೇಜು: ಶೇಷಾದ್ರಿಪುರ. ಸಂಜೆ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭ. ಅತಿಥಿಗಳು- ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ವಿ.ವೈ.ಸೋಮಯಾಜುಲು, ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ. ಅಧ್ಯಕ್ಷತೆ- ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ. ಸಂಜೆ 6.

ಸುಚಿತ್ರ ಕಲಾಕೇಂದ್ರ: ಕಿ.ರಂ.ನುಡಿಮನೆ, 9ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. ಸಾಹಿತ್ಯ ಸಂಜೆ ಕಾರ್ಯಕ್ರಮ. ಕಾವ್ಯ ವಾಚನ ಮತ್ತು ಅನುವಾದ ನಾಟಕ, ವಿಮರ್ಶೆ ಕುರಿತು ಮಾತು ಮತ್ತು ಸಂವಾದ ಕಾರ್ಯಕ್ರಮ ಅತಿಥಿ- ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ.      ಸಂಜೆ 5.30.

ಲೈಫ್ ಅಂಡ್ ಕಲ್ಲರ್ ಹ್ಯಾಂಡ್ಸ್: ಭಾಷ್ಯಂ ಉದ್ಯಾನ, ಶೇಷಾದ್ರಿಪುರ, ಮಂತ್ರಿ ಸ್ಕ್ವೇರ್ ಎದುರು. ಪರಿಸರ ಜಾಗೃತಿ ಕುರಿತು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ. ಅತಿಥಿಗಳು- ತೋಟಗಾರಿಕೆ ಇಲಾಖೆ ಸೂಪರಿಂಟೆಂಡೆಂಟ್ ಶಿವಪ್ರಸಾದ್ ರೆಡ್ಡಿ, ರಸ ಗ್ಯಾಲರಿ ಸಹ ಸಂಸ್ಥಾಪಕಿ ತೇಜಸ್ವಿನಿ ಲಕ್ಷ್ಮೀಕಾಂತ್, ಲೈಫ್ ಸಂಸ್ಥೆಯ ಸಹ ಸಂಸ್ಥಾಪಕಿ ಎಸ್.ಬಿ.ಸ್ವಪ್ನಾ, ಕಲಾವಿದ ಮಧು ಆರ್ಯ. ಬೆಳಿಗ್ಗೆ 9.

ಬುದ್ದಿಮಾಂದ್ಯ ಮಕ್ಕಳ ಪೋಷಕರ ಸಮಿತಿ: ಮಾನಂದಿ ಸಂಸ್ಕೃತಿ ಸದನ, ನಂ312, 9ನೇ ಮುಖ್ಯರಸ್ತೆ, 42ನೇ ಅಡ್ಡರಸ್ತೆ, 5ನೇ ಬಡಾವಣೆ, ಜಯನಗರ. 16ನೇ ವಾರ್ಷಿಕ ಉಪನ್ಯಾಸ ಹಾಗೂ ವಿಶೇಷ ವಿದ್ಯಾವಂತರಿಗೆ ಪದವಿ ಪ್ರದಾನ ಸಮಾರಂಭ. ಅತಿಥಿಗಳು- ರಾಷ್ಟ್ರೀಯ ಮಾನಸಿಕ ಬುದ್ದಿ ಮಾಂದ್ಯ ಸಂಸ್ಥೆಯ ನಿರ್ದೇಶಕ ಟಿ.ಸಿ.ಶಿವಕುಮಾರ್, ಸ್ಪಾಸ್ಟಿಕ್ಸ್ ಸೊಸೈಟಿಯ ನಿರ್ದೇಶಕಿ ರುಕ್ಮಿಣಿ ಕೃಷ್ಣಮೂರ್ತಿ, ರಾಜ್ಯ ಅಂಗವಿಕಲ ಇಲಾಖೆ ಆಯುಕ್ತ ಕೆ.ವಿ.ರಾಜಣ್ಣ.    ಸಂಜೆ 4.

ವಿಲ್ಸನ್ ಗಾರ್ಡನ್ ವಿದ್ಯಾ ಸಂಸ್ಥೆ: ಬಾಲಕರ ಪ್ರೌಢಶಾಲೆ, ಹೊಂಬೇಗೌಡನಗರ. ಶಿಕ್ಷಕರ ದಿನಾಚರಣೆ. ಅತಿಥಿ- ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ. ಅಧ್ಯಕ್ಷತೆ- ವಿದ್ಯಾಸಂಸ್ಥೆಯ ಗೌರವ ಅಧ್ಯಕ್ಷ ಡಾ.ಎಚ್.ಶರಶ್ಚಂದ್ರ. ಬೆಳಿಗ್ಗೆ 11.

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ: ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ಸುಗಮ ಸಂಗೀತ ಸುದಿನ ಕಾರ್ಯಕ್ರಮ. ಅತಿಥಿಗಳು- ಕವಿ ಬಿ.ಆರ್.ಲಕ್ಷ್ಮಣರಾವ್, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ. ಅಧ್ಯಕ್ಷತೆ- ಒಕ್ಕೂಟದ ಅಧ್ಯಕ್ಷ ವಿಜಯ ಹಾವನೂರು. ಸಂಜೆ 5.30.

ಗೋಮತಿ ಗ್ಲೋಬಲ್ ಶಾಲೆ: ಸಂಪಿಗೆಹಳ್ಳಿ, ಜಕ್ಕೂರು, 3ನೇ ಬಡಾವಣೆ, ಅರ್ಕಾವತಿ ಬಡಾವಣೆ. ನಾಟ್ಯ ಪ್ರದರ್ಶನ- ಬೋರ ಬೋರಬಯಾನ. ಸಂಜೆ 6.

ಗುಡ್‌ನೈಟ್ ಸೂರ್ಯ: 14ನೇ ಅಡ್ಡರಸ್ತೆ, ಸೇವಾಸದನ, ಮಲ್ಲೇಶ್ವರ. ಸೂರ್ಯ ಉತ್ಸವ. ಭರತನಾಟ್ಯ- ಸವಿತಾ ಶಾಸ್ತ್ರಿ ಅವರಿಂದ.      ಸಂಜೆ 6.45.

ಮ್ಯಾಕ್ಸ್ ಮುಲ್ಲರ್: ಆಟ್ಟಕ್ಕಲರಿ ಸೇಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್. `ಜರ್ಮನಿ ಮತ್ತು ಭಾರತ 2011-12~ ಅನಂತ ಅವಕಾಶಗಳು ವಾರ್ಷಿಕ ಕಾರ್ಯಕ್ರಮ. ಸ್ಟಾರ್ಮ್‌ ತಂಡದಿಂದ ನೃತ್ಯ ಕಾರ್ಯಾಗಾರ. ಅತಿಥಿ- ಬರ್ಲಿನ್ ನೃತ್ಯ ನಿರ್ದೇಶಕ ನೀಲ್ಸ್ ಸ್ಟ್ರಾಮ್. ಸಂಜೆ 4.30.

ಸಂಭವ: ರೋಟರಿ ಸಭಾಂಗಣ, ರೋಟರಿ ಕ್ಲಬ್, ಲ್ಯಾವೆಲ್ಲೆ ರಸ್ತೆ. ಸಂಸ್ಥೆಯ ವಾರ್ಷಿಕೋತ್ಸವ. ಅತಿಥಿ- ನಟಿ ಅಮಲಾ ಅಕ್ಕಿನೇನಿ. ಬೆಳಿಗ್ಗೆ 10.45.

ಮ್ಯಾಜಿಕ್ರಾಫ್ಟ್: ಸೇಂಟ್‌ಜಾನ್ ಸಭಾಂಗಣ, ಕೋರಮಂಗಲ. `ಮಾಯಾಬಜಾರ್~ ಜಾದೂ ಪ್ರದರ್ಶನ- ಕೆ.ಎಸ್.ರಮೇಶ್. ಸಂಜೆ 4.

ಉಪಾಸನಾ: ಅಟ್ಟಾವಾರ ವಿಜಯಸಾರಥಿ ಅವರ ಮನೆಯಂಗಳ, 24ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. ಗಾಯನ ಕಾರ್ಯಕ್ರಮ- ಅರ್ಚನಾ ಉಡುಪ ಮತ್ತು ವೃಂದ. ಸಂಜೆ 6.
 
ರಂಗದರ್ಶಿ
ಶಾರದಾ ಗಾನಕಲಾ ಮಂದಿರ ಟ್ರಸ್ಟ್:
ಸೃಷ್ಟಿ ವೆಂಚರ್ಸ್, ಬಸವನಗುಡಿ. `ಗೋಧಿ ಹುಗ್ಗಿ ಗಂಗಯ್ಯ~ ನಾಟಕ ಪ್ರದರ್ಶನ. ಸಂಜೆ 7.30.

ರಂಗಶಂಕರ: 2ನೇ ಹಂತ, ಜೆ.ಪಿ.ನಗರ. `ಮಿಡ್‌ನೈಟ್ ಟ್ರಾವಲರ್~ ನಾಟಕ ಪ್ರದರ್ಶನ. ಇಂಡಿಯನ್ ಸ್ಟ್ರಾಮ್ ತಂಡದಿಂದ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ಬಸವೇಶ್ವರನಗರ ಬ್ರಾಹ್ಮಣ ಸಭಾ:
ವಾಣಿ ವಿದ್ಯಾ ಕೇಂದ್ರ, 3ನೇ ಬಡಾವಣೆ, 3ನೇ ಹಂತ, ಬಸವೇಶ್ವರನಗರ. `ಕುಮಾರವ್ಯಾಸ ಭಾರತ~ ಪ್ರವಚನ- ಡಾ.ಎ.ವಿ.ಪ್ರಸನ್ನ. ಸಂಜೆ 6.30.

ವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ: 2ನೇ ಮುಖ್ಯರಸ್ತೆ, ಅರಮನೆ ನಗರ. ಅರಿಶಿನ ಅಲಂಕಾರ. ಸಂಜೆ 6.30.

ಕೋದಂಡರಾಮ ದೇವಸ್ಥಾನ ಸಮಿತಿ: ಸಂಪಂಗಿರಾಮನಗರ. ಚೆರ‌್ರಿ ಹಣ್ಣುಗಳ ಅಲಂಕಾರ.     ಬೆಳಿಗ್ಗೆ 7.

ದೇವಗಿರಿ ಗುರು ಸೇವಾ ಸಮಿತಿ: `ಶ್ರದ್ಧಾ~ ಪ್ರವಚನ- ಪ್ರದ್ಯುಮ್ನಾಚಾರ್ಯ. ಸಂಜೆ 7.

ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂ ಧರ್ಮಪ್ರಚಾರ ಪರಿಷತ್ತು: `ಟಿ~ ಬಡಾವಣೆ, ಜಯನಗರ. ಸಂಗೀತ ಕಾರ್ಯಕ್ರಮ- ಆನಂದ್ ಮತ್ತು ವೃಂದ. ಸಂಜೆ 6.

ವಿಜಯನಗರ ಮಧ್ವಾ ಸೇವಾ ಟ್ರಸ್ಟ್: ಗಂಗಾಧರ ಬಡಾವಣೆ, 8ನೇ ಮುಖ್ಯರಸ್ತೆ, ಎಂ.ಸಿ.ಬಡಾವಣೆ. `ಭೀಷ್ಮ ಪರ್ವ- ದ್ರೋಣ ಪರ್ವ~ ಪ್ರವಚನ- ಜಯತೀರ್ಥಚಾರ್ಯ ಮಾಳಗಿ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT