ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಾಜ್ ಹ್ಯಾಟ್ರಿಕ್!

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ಕಾನ್ ಉತ್ಸವದಲ್ಲಿ ಚಿತ್ರನಟಿಯರೆಲ್ಲ ರತ್ನಗಂಬಳಿಯ ಮೇಲೆ ನಿಂತು ನಗುಚೆಲ್ಲುವುದರಲ್ಲಿಯೇ ಸಾರ್ಥಕ್ಯ ಕಾಣುತ್ತಿದ್ದರೆ, ಹಿಂದಿ ಚಿತ್ರನಟ ನವಾಜುದ್ದೀನ್ ಸಿದ್ದಿಕಿಯ ಸಂಭ್ರಮವೇ ಬೇರೆ. ಕಾನ್‌ನಲ್ಲಿ ಪಾಲ್ಗೊಳ್ಳದಿದ್ದರೂ ಅವರ ನಟನೆಯ ಮೂರು ಚಿತ್ರಗಳು ಪ್ರದರ್ಶಿತವಾಗುತ್ತಿವೆ.

ಈ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತ ಪಡಿಸುತ್ತಲೇ ಸಿದ್ದಿಕಿ, `ಇದು ಭಾರತೀಯ ಚಿತ್ರೋದ್ಯಮದಲ್ಲಿಯೂ ಒಂದು ದಾಖಲೆ~ ಎಂದು ಹೇಳಿದ್ದಾರೆ.ಅಶಿಮ್ ಅಹ್ಲುವಾಲಿಯಾ ಅವರ `ಮಿಸ್ ಲವ್ಲಿ~, ಅನುರಾಗ್ ಕಶ್ಯಪ್ ಅವರ ಎರಡು ಭಾಗಗಳ ಸರಣಿ, `ಗ್ಯಾಂಗ್ಸ್ ಆಫ್ ವಾಸ್ಸೇಪುರ~ ಹಾಗೂ ಸಣ್ಣ ಪಾತ್ರವೊಂದರಲ್ಲಿ ಮಿಂಚಿ ಮಾಯವಾಗುವ `ಕಹಾನಿ~ ಚಿತ್ರಗಳು ಪ್ರದರ್ಶಿತವಾಗುತ್ತಿವೆ.

ಮಿಸ್ ಲವ್ಲಿ ಚಿತ್ರದ ಬಗ್ಗೆ ಮಾತನಾಡುತ್ತ ನವಾಜುದ್ದೀನ್ ಅಶೀಮ್ ಅಹ್ಲುವಾಲಿಯಾ ಅವರನ್ನು ಬಾಯ್ತುಂಬಾ ಹೊಗಳುತ್ತಾರೆ.

ಈ ಚಿತ್ರದಲ್ಲಿ ನವಾಜುದ್ದೀನ್ ಚಿತ್ರ ನಿರ್ದೇಶಕನ ಪಾತ್ರ ನಿರ್ವಹಿಸಿದ್ದಾರೆ. ನೆಲೆ ಕಾಣಲು ಹೋರಾಡುವ ನಟಿಯೊಬ್ಬಳನ್ನು ಪ್ರೀತಿಸುವ ನಿರ್ದೇಶಕನ ಪಾತ್ರ ಅದು. ಅಶೀಮ್ ಬಾಲಿವುಡ್ ಚಿತ್ರಗಳನ್ನು ನೋಡುವುದಿಲ್ಲ. ಹಾಗಾಗಿ ಈ ಚಿತ್ರದಲ್ಲಿ ಹಾಲಿವುಡ್‌ನ ಛಾಯೆಯನ್ನು ಕಾಣಬಹುದಾಗಿದೆ. ಚಿತ್ರ ಮೂಡಿಬಂದಿರುವ ರೀತಿಯೇ ವಿಶೇಷವಾಗಿದೆ ಎಂದೆಲ್ಲ ನವಾಜುದ್ದೀನ್ ಹೊಗಳಿದ್ದಾರೆ. ಕಾನ್‌ಗೆ ತೆರಳಲಿರುವ ತಯಾರಿಯಲ್ಲಿರುವ ನವಾಜುದ್ದೀನ್ ಯಾವತ್ತಿಗೂ ಪ್ರಚಾರದಿಂದ ದೂರವೇ ಅಂತೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT