ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದ ಕಂಪೆನಿಗಳ ಸಿಇಒ ವೇತನ ಪರಿಶೀಲನೆಗೆ ಸಮಿತಿ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸಾಲದ ಸುಳಿಗೆ ಸಿಲುಕಿ, ಸಿಬ್ಬಂದಿಗೆ ನಾಲ್ಕೈದು ತಿಂಗಳಿಂದ ವೇತನವನ್ನೇ ನೀಡಲಾಗದೆ ಪರಿತಪಿಸುತ್ತಿರುವ `ಕಿಂಗ್‌ಫಿಷರ್ ಏರ್‌ಲೈನ್ಸ್~, ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮಾತ್ರ ವೇತನದಲ್ಲಿ ಭಾರಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ನಷ್ಟದಲ್ಲಿರುವ ಕಂಪೆನಿಗಳ ಹಿರಿಯ ಅಧಿಕಾರಿಗಳ ಸಂಬಳದತ್ತ ಕೇಂದ್ರ ಸರ್ಕಾರದ ಕಣ್ಣು ನೆಟ್ಟಿದೆ. 

ಇಂಥ ಕಂಪೆನಿಗಳಲ್ಲಿ `ಸಿಇಒ~ ಸೇರಿದಂತೆ ಹಿರಿಯ ಅಧಿಕಾರಿಗಳ ವೇತನ ಪರಿಷ್ಕರಣೆಗೆ ಅನುಸರಿಸುತ್ತಿರುವ ಕ್ರಮದ ಪರಿಶೀಲನೆಗೆಂದೇ ಸಮಿತಿಯೊಂದನ್ನು ರಚಿಸಿದೆ.`ಕೇಂದ್ರದ ಕಂಪೆನಿ ವ್ಯವಹಾರಗಳ ಸಚಿವಾಲಯ ಹೊಸದಾಗಿ ರಚಿಸಿದ ಸಮಿತಿ ಮೊದಲಿಗೆ ನಷ್ಟದಲ್ಲಿರುವ ಕಂಪೆನಿಗಳಲ್ಲಿ ಉನ್ನತ ಅಧಿಕಾರಿಗಳ ವೇತನ ಪರಿಶೀಲಿಸಲಿದೆ. ನಂತರ ಇತರೆ ಕಂಪೆನಿಗಳತ್ತಲೂ ನೋಟ ಹರಿಸಲಿದೆ~ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಭಾನುವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT