ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆ ಅರಣ್ಯದಲ್ಲಿ ಆನೆ ಸಾವು

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಎಚ್.ಡಿ. ಕೋಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಗಸನಹುಂಡಿ ಅರಣ್ಯ ವಲಯದ ಸುಡುಗುಣಿ ಕಟ್ಟೆ ಸಮೀಪ ಗಂಡಾನೆಯೊಂದು ಶುಕ್ರವಾರ ಮೃತಪಟ್ಟಿದೆ.

ರಾಷ್ಟ್ರೀಯ ಉದ್ಯಾನದ ಸುಡುಗುಣಿ ಕಟ್ಟೆಯ ಬಳಿ ಶುಕ್ರವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ನೀರು  ಕುಡಿದ ಆನೆ ಸ್ವಲ್ಪ ಸಮಯದ ನಂತರ ಕಿರುಚಾಡಿ ಮೃತಪಟ್ಟಿತು. ಇದನ್ನು ಈ ಕಟ್ಟೆಯಲ್ಲಿ ಬಟ್ಟೆ  ತೊಳೆಯಲು ಹೋಗಿದ್ದವರು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು.

ಸ್ಥಳಕ್ಕೆ ಎ.ಸಿ.ಎಫ್. ತಮ್ಮಯ್ಯ, ಆರ್.ಎಫ್.ಓ. ಪ್ರವೀಣ್ ಕುಮಾರ್, ವನಪಾಲಕರಾದ  ಮಲೇಗೌಡ, ಸೋಮರಾಧ್ಯ, ವಿನೋದ್ ಭೇಟಿ ನೀಡಿದ್ದರು. ಡಾ. ವೆಂಕಟರಾಮು ಅವರು ಆನೆಯ ಶವ ಪರೀಕ್ಷೆ ನಡೆಸಿದರು. ಆನೆಗೆ ಸುಮಾರು 60 ರಿಂದ 70 ವರ್ಷ ವಯಸ್ಸಾಗಿರುವುದರಿಂದ ಸಹಜವಾಗಿ ಮೃತ ಪಟ್ಟಿದೆ  ಎಂದು ಅವರು ತಿಳಿಸಿದರು. ಆನೆಯ ಭಾರೀ ಗಾತ್ರದ ದಂತವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಮರಣೋತ್ತರ ಪರೀಕ್ಷೆ ನಂತರ ಶವ ಸಂಸ್ಕಾರ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT