ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಮಂಗಳನೌಕೆ ‘ಪಥ ಬದಲಾವಣೆ’

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮಂಗಳ ಗ್ರಹದತ್ತ ಮುನ್ನುಗ್ಗುತ್ತಿರುವ ಭಾರತದ ಪ್ರಪ್ರಥಮ ಮಂಗಳ ನೌಕೆಯನ್ನು ಸರಿಯಾದ ಪಥಕ್ಕೆ ಸೇರಿಸುವ ಕಾರ್ಯ ಡಿ.11ರಂದು ನಡೆಯಲಿದೆ.

ಭೂಮಿಯ ಗುರುತ್ವಾಕರ್ಷಣ ವಲಯವನ್ನು ದಾಟಿ ಈಗಾಗಲೇ ಸಾಕಷ್ಟು ದೂರ ಕ್ರಮಿಸಿರುವ ನೌಕೆಯು ಈಗ ನಿರ್ದಿಷ್ಟ ಜಾಡಿನಲ್ಲೇ ಕ್ರಮಿಸುತ್ತಿದೆ. ಆದರೆ ನೌಕೆಯು ಮಂಗಳ ಗ್ರಹವನ್ನು ಸರಿಯಾದ ಸ್ಥಾನದಲ್ಲಿ ಸಂಧಿಸಬೇ­ಕಾದರೆ ಅದರ ಪಥವನ್ನು ನಾಲ್ಕು ಬಾರಿ ಸರಿಪಡಿಸಬೇ­ಕಾಗುತ್ತದೆ.

ನೌಕೆಯು ಈಗ ಪ್ರತಿ ಸೆಕೆಂಡಿಗೆ 32.8 ಕಿ.ಮೀ. ವೇಗದಲ್ಲಿ ಮಂಗಳನತ್ತ ಧಾವಿಸುತ್ತಿದ್ದು, ಮೊದಲ ಪಥ ಬದಲಾವಣೆ ಕಸರತ್ತನ್ನು ಡಿ.11ರಂದು ನಡೆಸಲಾಗುವುದು ಎಂದು ಇಸ್ರೊ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT