ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ರಾಜ್ಯ ವೆಟರನ್ಸ್ ಟೇಬಲ್ ಟೆನಿಸ್ ಟೂರ್ನಿ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಪೆರೇಂಟ್ಸ್ ಟೇಬಲ್ ಟೆನಿಸ್ ಅಕಾಡೆಮಿಯು ಕರ್ನಾಟಕ ವೆಟರನ್ಸ್ ಟಿಟಿ ಸಂಸ್ಥೆ ಸಹಯೋಗದಲ್ಲಿ ಸೆಪ್ಟೆಂಬರ್ 10 ಮತ್ತು 11ರಂದು ಎರಡನೇ ವೆಟರನ್ಸ್ ರಾಜ್ಯ ರ‌್ಯಾಂಕಿಂಗ್ ಟಿಟಿ ಟೂರ್ನಿ ಆಯೋಜಿಸಿದೆ.

40 ವರ್ಷ, 50 ವರ್ಷ , 60 ವರ್ಷ, ಮತ್ತು 70ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ , ಕಾಂಬಿನೆಷನ್ ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಜಯಲಕ್ಷ್ಮೀಪುರಂನಲ್ಲಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಟಿಟಿ ಹಾಲ್‌ನಲ್ಲಿ ಟೂರ್ನಿ ನಡೆಯಲಿದೆ.

ವಿವರಗಳು ಮತ್ತು ಹೆಸರು ನೋಂದಾಯಿಸಲು ಮುಖ್ಯ ರೆಫರಿ ಕೆ. ರಾಮಸ್ವಾಮಿ, ಎಸ್-1, ಸರೋವರ ಅಪಾರ್ಟ್‌ಮೆಂಟ್, 32, ರಾಜರಾಜೇಶ್ವರಿನ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು (ಮೊ: 9483960782) ಅಥವಾ ಇಮೇಲ್ kramaswamy30@gmail.com ಅನ್ನು ಸಂಪರ್ಕಿಸಬೇಕು ಎಂದು ಸಂಘಟನಾ ಕಾರ್ಯದರ್ಶಿ ಎನ್. ರಾಜಶೇಖರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT