ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ಫೆಬ್ರುವರಿ 23ರಿಂದ 26ರವರೆಗೆ 33ನೇ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಹಾಗೂ ಎರಡನೇ ಅಂತರರಾಷ್ಟ್ರೀಯ ಹಿರಿಯರ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಜರುಗಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಾಲ್ಕು ದಿನ ನಡೆಯಲಿರುವ ಈ ಕೂಟದಲ್ಲಿ 26 ರಾಜ್ಯಗಳ 3200 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಅಂತರರಾಷ್ಟ್ರೀಯ ಹಿರಿಯರ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಲಂಕಾ, ಮಲೇಷ್ಯಾ ಹಾಗೂ ನೇಪಾಳದಿಂದ ನೂರು ಮಂದಿ ಅಥ್ಲೀಟ್‌ಗಳು ಆಗಮಿಸಲಿದ್ದಾರೆ.

`35 ವರ್ಷ ಮೇಲ್ಪಟ್ಟ ಅಥ್ಲೀಟ್‌ಗಳು ಇಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್‌ನಲ್ಲಿ ತೈಪೆಯಲ್ಲಿ ನಡೆಯಲಿರುವ 17ನೇ ಏಷ್ಯನ್ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಗೆ ಈ ಕೂಟ ಮಾನದಂಡವಾಗಲಿದೆ~ ಎಂದು ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಉಪಾಧ್ಯಕ್ಷ ಹಾಗೂ ಸಂಘಟನಾ ಸಮಿತಿ ಮುಖ್ಯಸ್ಥ ಆದಿನಾಥ್ ನಾರ್ಡೆ ತಿಳಿಸಿದರು.

ಈ ಕೂಟವನ್ನು ವೀಕ್ಷಿಸಲು ವಿಶ್ವ ಹಿರಿಯರ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷ ಸ್ಟ್ಯಾನ್ ಪೆರ್ಕಿನ್ಸ್ ಹಾಗೂ ಕಾರ್ಯದರ್ಶಿ ವಿನ್‌ಸ್ಟನ್ ಥಾಮಸ್ ಆಗಮಿಸಲಿದ್ದಾರೆ. 2010ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ 16ನೇ ಏಷ್ಯನ್ ಹಿರಿಯರ ಅಥ್ಲೆಟಿಕ್ ಕೂಟದಲ್ಲಿ 349 ಪದಕಗಳನ್ನು ಗೆದ್ದಿದ್ದ ಭಾರತ ಮೊದಲ ಸ್ಥಾನ ಗಳಿಸಿತ್ತು. 

`2015ರ ವಿಶ್ವ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಆಯೋಜಿಸಲು ಭಾರತ ಬಿಡ್ ಸಲ್ಲಿಸಲಿದೆ. 2013ರ ಕ್ರೀಡಾಕೂಟವನ್ನು ಬ್ರೆಜಿಲ್ ಆಯೋಜಿಸಲಿದೆ~ ಎಂದು ಅವರು ನುಡಿದರು.

`ಅಥ್ಲೀಟ್‌ಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅಥ್ಲೀಟ್‌ಗಳು ಆಗಮಿಸುತ್ತಿದ್ದಾರೆ ಗುರುವಾರ ಮಧ್ಯಾಹ್ನ 2ಕ್ಕೆ ಉದ್ಘಾಟನೆ  ನಡೆಯಲಿದೆ~ ಎಂದು ಸಂಘಟನಾ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT