ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾದಿಂದ ಸ್ಮಾರ್ಟ್‌ಫೋನ್ ಉಪಗ್ರಹ

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ' ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಅಳವಡಿಸಿದ ಮೂರು ಪುಟ್ಟ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ.

`ನಾಸಾ' ಇತಿಹಾಸದಲ್ಲಿಯೇ ಈ ಮೂರು ಅತ್ಯಂತ ಕಡಿಮೆ ವೆಚ್ಚದ ಉಪಗ್ರಹಗಳು ಎಂಬ ಹೆಗ್ಗಳಿಕೆ ಪಡೆದಿವೆ. ಪುಟ್ಟ ಘನಾಕೃತಿಯ ಉಪಗ್ರಹಗಳಲ್ಲಿ ಸ್ಮಾರ್ಟ್‌ಫೋನ್ ಅಳವಡಿಸಲಾಗಿದ್ದು ಭೂಮಿಯ ಚಿತ್ರಗಳನ್ನು ಸೆರೆ ಹಿಡಿಯಲಿವೆ. ಸ್ಮಾರ್ಟ್‌ಫೋನ್‌ಗಳು ಉಪಗ್ರಹಗಳ ಕಂಪ್ಯೂಟರ್‌ನಂತೆಯೂ ಕೆಲಸ ನಿರ್ವಹಿಸಲಿವೆ.

ವರ್ಜಿನೀಯಾದ ವಾಲಪ್ಸ್ ದ್ವೀಪದಲ್ಲಿರುವ ನಾಸಾ ಉಡಾವಣಾ ಕೇಂದ್ರದಿಂದ ಈ ಫೋನ್‌ಸ್ಯಾಟ್ ಹೆಸರಿನ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

ಎರಡು ವಾರಗಳ ಕಾಲ ಬಾಹ್ಯಾಕಾಶದಲ್ಲಿರುವ ಈ ಫೋನ್‌ಸ್ಯಾಟ್ ರವಾನಿಸುವ ಸಂದೇಶಗಳನ್ನು ಕ್ಯಾಲಿಫೋರ್ನಿಯಾ ಹಾಗೂ ವಿವಿಧೆಡೆಯಲ್ಲಿರುವ ಕೇಂದ್ರಗಳು ದಾಖಲಿಸಿಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT