ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂತ ಕಾರನ್ನು ಆರಂಭಿಸಬಲ್ಲ ಪುಟಾಣಿ ಬ್ಯಾಟರಿ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಗಾತ್ರದಲ್ಲಿ ಅತಿ ಚಿಕ್ಕದಾದ ಆದರೆ ಅತಿ ಶಕ್ತಿಶಾಲಿಯಾದ ಬ್ಯಾಟರಿಗಳನ್ನು ಇಲಿನಾಯ್ಸ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.

ಈ ಬ್ಯಾಟರಿಗಳು ಎಷ್ಟು ಶಕ್ತಿಶಾಲಿ ಅಂದರೆ ನಿಂತು ಹೋಗಿರುವ ಕಾರಿಗೆ ಕ್ಷಣಾರ್ಧದಲ್ಲಿ ಜೀವ ನೀಡುತ್ತವೆ. ಕಣ್ಣುಮಿಟುಕಿಸುವಷ್ಟರಲ್ಲಿ ನಿಮ್ಮ ದೂರವಾಣಿ ಛಾರ್ಜ್ ಮಾಡುತ್ತವೆ. ಈ ಹೊಸ ಬ್ಯಾಟರಿಗಳು ಕೆಲವೇ ಮಿಲಿಮಿಟರ್ ಉದ್ದವಿರುತ್ತವೆ. ಸೆಲ್ ಫೋನ್‌ನಲ್ಲಿ ಈ ಬ್ಯಾಟರಿಗಳನ್ನು ಅಳವಡಿಸಿಕೊಂಡಿದ್ದಲ್ಲಿ ಅದೇ ಬ್ಯಾಟರಿಯಿಂದ ನಿಂತುಹೋದ ಕಾರಿನ ಬ್ಯಾಟರಿಯನ್ನೂ ಛಾರ್ಜ್ ಮಾಡಬಹುದಾಗಿದೆ.

ಯಾರೂ ಊಹಿಸಲು ಸಾಧ್ಯವಿಲ್ಲದಷ್ಟು ಈ ಬ್ಯಾಟರಿಗಳು ಶಕ್ತಿಶಾಲಿಯಾಗಿರುತ್ತವೆ ಎಂದು ಮೆಕ್ಯಾನಿಕಲ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರೊ.ವಿಲಿಯಮ್ ಪಿ. ಕಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT