ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಟ್ಟೂರು ಕ್ಯಾಂಪ್‌: ಅಕ್ರಮ ಭತ್ತದ ಬೀಜ ಮಾರಾಟ ಜಾಲ ಪತ್ತೆ

Last Updated 7 ಡಿಸೆಂಬರ್ 2013, 6:33 IST
ಅಕ್ಷರ ಗಾತ್ರ

ಮಲೇಬೆನ್ನೂರು: ಸಮೀಪದ ನಿಟ್ಟೂರು ಕ್ಯಾಂಪ್‌ನಲ್ಲಿರುವ ಆಂಜನೇಯ ಟ್ರೇಡರ್ಸ್‌ನಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ 51 ಟನ್‌ ಬಿಪಿಟಿ 5204 ಮಾದರಿ ಭತ್ತದ ಬೀಜವನ್ನು ಕೃಷಿ ಆಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ನಿಜಾಮಬಾದ್‌ನ ಸೂಪರ್‌ ಸೀಡ್ಸ್‌ ಕಂಪೆನಿ ಲೇಬಲ್‌ ಇದ್ದು  25 ಕಿಲೋ ತೂಗುವ 2040 ಚೀಲಗಳನ್ನು ಗೋದಾಮಿನಲ್ಲಿ ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದರು.

ಖಚಿತ ಮಾಹಿತಿಯೊಡನೆ ದಾಳಿ ನಡೆಸಿದ ವೇಳೆ ಪರಿಶೀಲನೆ ಮಾಡಿದಾಗ ಮಾರಾಟಗಾರನ ಬಳಿ ಬೀಜ ಮಾರಾಟ ಮಾಡುವ ಪರವಾನಗಿ ಇರಲಿಲ್ಲ.
ಅಂಗಡಿ ಮಾಲೀಕ ಹರಿರಾವ್‌ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.

ಸೂಕ್ತ ದಾಖಲೆ ಒದಗಿಸದ ಕಾರಣ ಅಧಿಕಾರಿಗಳು ಗೋದಾಮಿಗೆ ಬೀಗ ಮುದ್ರೆ ಹಾಕಿದರು. ವಶಪಡಿಸಿಕೊಂಡ ಬೀಜದ ಮೌಲ್ಯ ₨ 16.32 ಲಕ್ಷ  ಎಂದು ಅಧಿಕಾರಿಗಳು ತಿಳಿಸಿದರು.

ಸಹಾಯಕ ಕೃಷಿ ಅಧಿಕಾರಿ ಮಹದೇವ ಸರಶೆಟ್ಟಿ, ಹೇಮಣ್ಣ, ಹಂಪಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT