ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರಾ ಹೀನತೆ: ಹೃದಯಾಘಾತದ ಅಪಾಯ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್, (ಪಿಟಿಐ): ನಿದ್ರಾ ಹೀನತೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ನಿಮ್ಮಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಬಹುದು!

ನಿದ್ರಾಹೀನತೆಯಿಂದ ಬಳಲುತ್ತಿರುವ ಶೇ 45 ಜನರು ಗೊರಕೆ ಹೊಡೆಯುವವರಿಗಿಂತ ಹೆಚ್ಚು ಹೃದಯದ ಸಮಸ್ಯೆಗಳ ಅಪಾಯದಿಂದ ಬಳಲುತ್ತಾರೆ ಎಂಬುದನ್ನು ನಾರ್ವೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ.

`ನಿದ್ರಾ ಹೀನತೆ ಹಾಗೂ ಹೃದಯಾಘಾತದ ನಡುವೆ ಇರುವ ಸಂಬಂಧವನ್ನು ಜನರು ಅರಿಯಬೇಕು. ಒಂದು ವೇಳೆ ಅದರ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು~ ಎಂದು ಪ್ರಧಾನ ಸಂಶೋಧಕ ಡಾ. ಲಾರ್ಸ್‌ ಎರಿಕ್ ಲಾವುಗ್‌ಸಾಂಡ್ ಡೈಲಿ ಮೇಲ್ ಪತ್ರಿಕೆಯಲ್ಲಿ ಹೇಳಿದ್ದಾರೆ. 1995-97ರ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ಅಂಗವಾಗಿ ನಿದ್ರಾಹೀನತೆಯ ಕುರಿತು ಕೇಳಲಾದ ಪ್ರಶ್ನೆಗಳಿಗೆ ನಾರ್ವೆಯ 52,610 ವಯಸ್ಕರು ಉತ್ತರಿಸಿದ್ದರು.

`ಸರ್ಕ್ಯುಲೇಷನ್: ಜರ್ನಲ್ ಆಫ್ ದ ಅಮೆರಿಕನ್ ಹಾರ್ಟ್ ಅಸೋಷಿಯೇಷನ್~ ಪತ್ರಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT