ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಗತಿಕರ ಶಿಶುಮಂದಿರ ಕಟ್ಟಡಕ್ಕೆ ಶಂಕುಸ್ಥಾಪನೆ

Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ಕೆ.ಆರ್.ಪುರ: ಪಟ್ಟಣದಲ್ಲಿ ನಿರ್ಗತಿಕರ ಮಕ್ಕಳಿಗಾಗಿ ಇರುವ ಶಿಶುಮಂದಿರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಮಾರಂಭ ಈಚೆಗೆ ನಡೆಯಿತು.ಕಟ್ಟಡ ನಿರ್ಮಾಣಕ್ಕಾಗಿ ಟಿಮ್‌ಕೆನ್ ಪ್ರತಿಷ್ಠಾನವು ಅಮೆರಿಕದಲ್ಲಿ 73 ಲಕ್ಷ ರೂಪಾಯಿ ಮೊತ್ತವನ್ನು ಸಂಗ್ರಹಿಸಿ ನೀಡಿದೆ.

ಕಟ್ಟಡದಲ್ಲಿ 50 ಮಂದಿ ಅನಾಥ, ನಿರ್ಗತಿಕ, ಪರಿತ್ಯಕ್ತ ಮಕ್ಕಳ ವಸತಿಗೆ ಅವಕಾಶ ಇದೆ. ಈ ಕಟ್ಟಡ ದತ್ತು ಪಡೆದ ಶಿಶುಗಳ ಮನೆಯೂ ಆಗಲಿದೆ.ಜರ್ಮನಿಯ ಪ್ರಜೆ ಹೆಲ್ಲಾ ಮುಂದ್ರಾ ಅವರಿಂದ ಸ್ಥಾಪನೆಗೊಂಡ ಶಿಶುಮಂದಿರದಲ್ಲಿ ಮಕ್ಕಳಿಗೆ ಶಿಕ್ಷಣ, ಕಾಳಜಿ, ವೃತ್ತಿ ಮಾರ್ಗದರ್ಶನ, ಸ್ವಾವಲಂಬಿ ಮತ್ತು ಸ್ವತಂತ್ರ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು.

ಶಿಶು ಮಂದಿರದ ನಿರ್ದೇಶಕ ಆನಂದ್ ಸಿ.ಬಡ ಮಾತನಾಡಿ `ಈ ಸಂಸ್ಥೆ ನಿರ್ಲಕ್ಷಿತ ಮತ್ತು ಆಘಾತಗೊಂಡ ಮಕ್ಕಳು ಗೌರವಯುತ ಜೀವನ ಸಾಗಿಸಲು ಅವಕಾಶ ನೀಡಲಿದೆ. ಟಿಮ್‌ಕೆನ್ ಪ್ರತಿಷ್ಠಾನದಂತಹ ಸಂಸ್ಥೆಗಳ ಬೆಂಬಲದೊಂದಿಗೆ ಮಕ್ಕಳ ಬದುಕಿಗೆ ಭದ್ರ ಬುನಾದಿಯನ್ನು ಒದಗಿಸುತ್ತೇವೆ' ಎಂದರು.

ಸಂಸ್ಥಾಪಕಿ ಹೆಲ್ಲಾ ಮುಂದ್ರಾ ಮಾತನಾಡಿ, `ಎಸ್ಸೆಸ್ಸೆಲ್ಸಿವರೆಗೂ ಪ್ರವೇಶ ದೊರೆತ ಎಲ್ಲ ಮಕ್ಕಳಿಗೂ ಊಟ, ವಸತಿ ಸೌಕರ್ಯ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ನಂತರ ಅವರು ವಿದ್ಯಾಭ್ಯಾಸ ಮುಂದುವರಿಸಲು ಅಗತ್ಯ ನೆರವು ನೀಡಲಾಗುವುದು. ಶಿಕ್ಷಣ ಪಡೆದ ನಂತರ ಉದ್ಯೋಗಾವಕಾಶ ಕಲ್ಪಿಸಲಾಗುವುದು' ಎಂದು ತಿಳಿಸಿದರು.ಆವಲಹಳ್ಳಿಯ ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎನ್.ಜಯರಾಮ್ ಉಪಸ್ಥಿತರಿದ್ದರು. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9741183199

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT