ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೋಷಿ – ಅಮೆರಿಕ ಸಿಖ್‌ ಪ್ರಜೆ ವಾದ

ಭಾರತದಲ್ಲಿ ಭಯೋತ್ಪಾದನೆಗೆ ಶಸ್ತ್ರಾಸ್ತ್ರ ಪೂರೈಕೆ ಆರೋಪ
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ಹೂಡಿದ್ದ ಸಿಖ್‌ ಪ್ರತ್ಯೇಕತಾವಾದಿ ಸಂಘ­ಟನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪದ ಮೇಲೆ ಡಿ.17­ರಂದು ಬಂಧಿ­ತ­ನಾದ ಭಾರತ ಮೂಲದ ಅಮೆ­ರಿಕ ಸಿಖ್‌ ಪ್ರಜೆ, ತಾನು ನಿರ್ದೋಷಿ ಎಂದು ನೆವಡಾ ನ್ಯಾಯಾಲಯ­ದಲ್ಲಿ ವಾದಿಸಿದ್ದಾನೆ.

ಆರೋಪಿಯು ತನ್ನ ನಿಜ ಹೆಸರು ಬಲ್ಜಿತ್‌ ಎಂದಿದ್ದು, ಅಮೆರಿಕ ಅಟಾರ್ನಿ ಕಚೇರಿ ತಿಳಿಸಿದಂತೆ ಬಲ್ವಿಂದರ್‌ ಸಿಂಗ್‌ (39) ಅಲ್ಲ ಎಂದಿದ್ದಾನೆ.

ಆರೋಪಿ ಎರಡು ಭಯೋ­ತ್ಪಾದಕ ಸಂಘಟನೆಗಳಾದ ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ (ಬಿಕೆಐ) ಹಾಗೂ ಖಲೀಸ್ತಾನ್‌ ಜಿಂದಾಬಾದ್‌ ಫೋರ್ಸ್‌ (ಕೆಝಡ್‌)ಗ­ಳೊಂದಿಗೆ ಸಂಪರ್ಕ ಹೊಂದಿದ್ದನೆಂದು ಹೇಳಲಾಗಿದೆ.

ಬಲ್ವಿಂದರ್‌ ವಿರುದ್ಧ ದಾಖಲಿಸಿ­ರುವ ದೋಷಾರೋಪ ಪಟ್ಟಿಯಲ್ಲಿ ಕೊಲೆ, ಅಪ­ಹರಣ, ಭಯೋತ್ಪಾದನೆಗೆ ಶಸ್ತ್ರಾಸ್ತ್ರ­ಗಳ ಪೂರೈಕೆ, ಸುಳ್ಳು ಗುರುತಿನ ಚೀಟಿ  ಹಾಗೂ ವಲಸೆ ಬಂದ ದಾಖಲೆಯಲ್ಲಿ ಸುಳ್ಳು ಹೇಳಿಕೆ ನೀಡಿದ ಆಪಾದನೆಗಳಿವೆ. ಫೆ.11ರಂದು ಪ್ರಾಥ­ಮಿಕ ವಿಚಾ­ರಣೆ­ ನಿಗದಿಗೊಳಿ­ಸ­­­ಲಾ­ಗಿದ್ದು, ಸಿಂಗ್‌ ಮೇಲಿನ ಆರೋಪ ಸಾಬೀತಾ­ದರೆ ಜೀವಾ­ವಧಿ ಶಿಕ್ಷೆಯಾ­ಗುವ ಸಾಧ್ಯತೆ­ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT