ಷೇರುಪೇಟೆ ವಹಿವಾಟಿನಲ್ಲಿ ತೊಡಗದಂತೆ ಯಾವುದೇ ನಿಷೇಧ ಹೇರಲಾಗಿಲ್ಲ ಎಂದು ಅನಿಲ್ ಅಂಬಾನಿ ಭಾನುವಾರವಷ್ಟೇ ಸ್ಪಷ್ಟನೆ ನೀಡಿದ್ದರು. ಈ ಹೇಳಿಕೆಯ ಹೊರತಾಗಿಯೂ ಅವರ ಒಡೆತನದ ವಿವಿಧ ಉದ್ದಿಮೆ ಸಂಸ್ಥೆಗಳ ಷೇರುಗಳ ಬೆಲೆ ಕುಸಿತ ಕಂಡಿವೆ. ಷೇರು ನಿಯಂತ್ರಣ ಮಂಡಳಿ ಜತೆಗಿನ ವಿವಾದ ಇತ್ಯರ್ಥದ ನಿಬಂಧನೆಗೆ ಅನುಗುಣವಾಗಿ, ಷೇರುಪೇಟೆ ವಹಿವಾಟಿನಿಂದ ದೂರ ಉಳಿಯುವುದಾಗಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ನ್ಯಾಚುರಲ್ ರಿಸೋಸರ್ಸ್ ಲಿಮಿಟೆಡ್ ಒಪ್ಪಿಕೊಂಡ ನಂತರದ ಬೆಳವಣಿಗೆ ಇದಾಗಿದೆ.