ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿಗಾಗಿ ಪಂಜಿನ ಮೆರವಣಿಗೆ

Last Updated 19 ಫೆಬ್ರುವರಿ 2011, 8:55 IST
ಅಕ್ಷರ ಗಾತ್ರ

ಕೋಲಾರ: ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಜಿಲ್ಲಾ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಗಾಂಧಿವನದಿಂದ ಮೆರವಣಿಗೆ ಶುರುವಾದ ಮೆರವಣಿಗೆ ಗಾಂಧಿಚೌಕದವರೆಗೂ ನಡೆಯಿತು. ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಒಕ್ಕೂಟದ ಪ್ರಮುಖರು ತಿಳಿಸಿದರು.

ವಿಷ್ಣು, ಜಯದೇವಪ್ರಸನ್ನ, ಕೋ.ನಾ.ಪ್ರಭಾಕರ್, ಕೂಟೇರಿನಾಗರಾಜ್, ಜನಘಟ್ಟಕೃಷ್ಣಮೂರ್ತಿ, ನಾ.ಮಂಜುನಾಥ, ಶಿವರಾಜ್, ಕಮಲ್, ವೆಂಕಟಪ್ಪ, ವಿ.ವೆಂಕಟರಾಂ, ಜಿ,ಮುನಿಕೃಷ್ಣ, ಮಂಜು, ಸಂಜೀವಪ್ಪ, ವೆಂಕಟೇಶ್, ಶ್ರೀನಾಥ, ಗಣೇಶ್, ಚಂದ್ರು ಪಾಲ್ಗೊಂಡಿದ್ದರು. ಪತ್ರ ಚಳವಳಿ: ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಒಕ್ಕೂಟವು ಗುರುವಾರದಿಂದ ಹಮ್ಮಿಕೊಂಡಿರುವ ಪತ್ರ ಚಳವಳಿ ಶುಕ್ರವಾರವೂ ಮುಂದುವರಿಯಿತು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ವಕೀಲರ ಸಂಘದ ಸದಸ್ಯರು ಚಳವಳಿಯಲ್ಲಿ ಪಾಲ್ಗೊಂಡರು.
ವಕೀಲರ ಸಂಘದ ಅಧ್ಯಕ್ಷ ಎಂ.ಅರುಣ್‌ಕುಮಾರ್, ಉಪಾಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ಸುಬ್ರಮಣಿ, ಹಿರಿಯ ವಕೀಲರಾದ ಬಿಸ್ಸಪ್ಪಗೌಡ, ಕೋದಂಡಪ್ಪ, ಮನ್ಮಥರೆಡ್ಡಿ, ಮರಿರೆಡ್ಡಿ, ಎಂ.ಜೆ.ಶ್ರೀನಿವಾಸ್, ಕೆ.ವಿ.ರಾಜಗೋಪಾಲ್, ಮಹಮದ್ ಹನೀಫ್, ಸಾ.ಮ.ರಂಗಪ್ಪ, ಗೋವಿಂದಗೌಡ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT