ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿಗೆ ಹೆಚ್ಚಿನ ಆದ್ಯತೆ: ಉದಾಸಿ

Last Updated 6 ಜನವರಿ 2012, 9:25 IST
ಅಕ್ಷರ ಗಾತ್ರ

ಹಾನಗಲ್: ಕಡಿಮೆ ನೀರು, ಗೊಬ್ಬರ ಬಳಸಿ ಹೆಚ್ಚು ಇಳುವರಿ ಪಡೆಯುವ ಕುರಿತು ಇಲಾಖೆಗಳು ನೀಡುವ ಮಾರ್ಗದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ಮನಗಂಡು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದರು.

ತಾಲ್ಲೂಕಿನ ಆಲದಕಟ್ಟಿ ಗ್ರಾಮದ ನಿಸ್ಸಿಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ `ಜಲಾನಯನ ಮೇಳ ಮತ್ತು ಜಾನುವಾರು ಪ್ರದರ್ಶನ~ ಉದ್ಘಾಟಿಸಿ ಅವರು ಮಾತನಾಡಿದರು.

 ಸಂಸದ ಶಿವಕುಮಾರ ಉದಾಸಿ ಅವರ ವಿಶೇಷ ಆಸಕ್ತಿಯಿಂದ ಹಾವೇರಿ ಮತ್ತು ಗದಗ ಜಿಲ್ಲೆಗಳನ್ನು ರಾಷ್ಟ್ರೀಯ ತೋಟಗಾರಿಕಾ ಮಿಷನ್ ವ್ಯಾಪ್ತಿಯಡಿ ಸೇರ್ಪಡೆ ಮಾಡಲಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ನೀಡುವ ಸೌಲಭ್ಯಗಳ ಸದ್ಬಳಕೆಯಿಂದ ರೈತರು ಆರ್ಥಿಕ ಮುನ್ನಡೆ ಸಾಧಿಸಬೇಕು. ತಾಲ್ಲೂಕಿನಾದ್ಯಂತ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ರಾಜ್ಯದಲ್ಲಿಯೇ ದಾಖಲೆಯ 228 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಳ ಕಂಡು ಬರುತ್ತಿದೆ.  ಧರ್ಮಾ ನದಿಗೆ 14 ಭಾಗದಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ ಎಂದರು.

ಏತನೀರಾವರಿ ಯೋಜನೆಗಳ ಕಾಮಗಾರಿ ವೃದ್ಧಿಯಲ್ಲಿದೆ. ತಾಲ್ಲೂಕಿನಲ್ಲಿ  ಸುಮಾರು 8 ಸಾವಿರ ಕೊಳವೆ ಬಾವಿಗಳಿದ್ದು, ಸಮರ್ಪಕ ವಿದ್ಯುತ್ ಸರಬರಾಜಿನ ದೃಷ್ಟಿಯಿಂದ ಜಿಲ್ಲೆಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಟಿ.ಸಿ ರಿಪೇರಿಗಾಗಿ ಸದ್ಯದಲ್ಲಿ ಹಾನಗಲ್‌ನಲ್ಲಿ ಕೇಂದ್ರ ತೆರೆಯಲಾಗುವುದು. 42 ಹಾಲು ಉತ್ಪಾದಕ ಸಂಘ  ಪ್ರಾರಂಭಿಸಿ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತಿದೆ. ಇವೆಲ್ಲ ಯೋಜನೆಗಳು ಕೃಷಿಯ ಆರ್ಥಿಕ ವಿಕಾಸಕ್ಕಾಗಿ ಪ್ರಾರಂಭಿಸಲಾಗಿದೆ ಎಂದರು.

ಬೆಳಪಾಲಪೇಟೆ ಗ್ರಾ.ಪಂ ಅಧ್ಯಕ್ಷ ನಾಗಪ್ಪ ಜಾನಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಬಿ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಜಿ.ಪಂ ಸದಸ್ಯ ಪದ್ಮನಾಭ ಕುಂದಾಪೂರ, ಮಾಜಿ ಸದಸ್ಯ ಎಂ.ಆರ್. ಪಾಟೀಲ, ತಾ.ಪಂ ಅಧ್ಯಕ್ಷೆ ಲಲಿತವ್ವ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಸದಸ್ಯರಾದ ಹನುಮಂತಪ್ಪ ಗೊಂದಿ, ವಿಜಯಲಕ್ಷ್ಮೀ ಹಿರೇಮಠ, ಲಕ್ಷ್ಮವ್ವ ನಿಂಬಣ್ಣನವರ, ಮಂಜುಳಾ ಕಾಮನಹಳ್ಳಿ, ಸುಮಂಗಲಾ ದೊಡ್ಡಮನಿ, ಕಲ್ಲವೀರಪ್ಪ ಪವಾಡಿ, ಮಾಜಿ ಸದಸ್ಯರಾದ ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ಬಸವರಾಜ ಸಂಶಿ, ಹಾವೇರಿಯ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಶಿವರಾಮ ಭಟ್, ತಾ.ಪಂ ಅಧಿಕಾರಿ ಮಹಾಂತೇಶ ಲಿಂಬೆ, ಸಂಪನ್ಮೂಲ ವ್ಯಕ್ತಿಗಳಾಗಿ ಹಾವೇರಿಯ ಎಚ್.ಎಸ್.ಪ್ರಭು, ಪಶು ಸಂಗೋಪನಾ ಇಲಾಖೆಯ ಡಾ. ಎನ್.ಎಫ್.ಕಮ್ಮಾರ, ತೋಟಗಾರಿಕೆ ಇಲಾಖೆಯ ನಾಗಾರ್ಜುನ ಗೌಡ ಮುಂತಾದ ಅಧಿಕಾರಿ ವರ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಲಾನಯನ ಅಧಿಕಾರಿ ಪ್ರಸನ್ನಕುಮಾರ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ವಿವಿಧ ತಳಿಯ ಜಾನುವಾರು ಪ್ರದರ್ಶನ ನಡೆಯಿತು. ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಿಸಲಾಯಿತು. ರೈತರ ಮಾಹಿತಿಯ ಕರಪತ್ರ ಬಿಡುಗಡೆ ಮಾಡಲಾಯಿತು ಮತ್ತು ಸ್ವ-ಸಹಾಯ ಸಂಘಗಳಿಗೆ ತಲಾ ರೂ. 25 ಸಾವಿರ ಚೆಕ್ ವಿತರಿಸಲಾಯಿತು.

 ಇದಕ್ಕೂ ಮುನ್ನ ಬೆಳಗಾಲಪೇಟೆ ಗ್ರಾಮದಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರಿಂದ ಪುರ್ಣಕುಂಭ ಮೇಳ ನಡೆದು ವಿವಿಧ ವಾದ್ಯ ವೈಭವಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT