ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾಜಿ ಕಡತ ಬಹಿರಂಗಕ್ಕೆ ಕುಟುಂಬ ಸದಸ್ಯರ ಒತ್ತಾಯ

Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ರಷ್ಯಾ ರಕ್ಷಣಾ ಇಲಾಖೆ ಬಳಿಯಿರುವ ನೇತಾಜಿ ಅವರಿಗೆ ಸಂಬಂಧಪಟ್ಟ ಕಡತಗಳನ್ನು ಬಹಿರಂಗಪಡಿಸಲು ಪ್ರಧಾನಿ ಒತ್ತಾಯಿಸಬೇಕೆಂದು ಮನವಿ ಮಾಡಲು ನೇತಾಜಿ ಕುಟುಂಬದ ಸದಸ್ಯರು ಬುಧವಾರ ಪ್ರಧಾನಿ ಅವರನ್ನು ಭೇಟಿ ಮಾಡಲಿದ್ದಾರೆ.

ಡಿಸೆಂಬರ್‌ 24–25ರಂದು ಪ್ರಧಾನಿ  ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಆ ವೇಳೆ ರಷ್ಯಾದಲ್ಲಿರುವ ನೇತಾಜಿಗೆ ಸಂಬಂಧ ಪಟ್ಟ ಕಡತಗಳನ್ನು  ಬಹಿರಂಗಪಡಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಲ್ಲಿ ಕೋರಬೇಕು ಎಂದು ನೇತಾಜಿ ಕುಟುಂಬ ಸದಸ್ಯರು  ಮನವಿ ಮಾಡಿದ್ದಾರೆ.

‘ನೇತಾಜಿ ಸಾವಿಗೆ ಸಂಬಂಧಿಸಿದಂತೆ  ನಿರ್ಣಾಯಕ ಸಾಕ್ಷ್ಯ ದೊರೆಯಬೇಕೆಂದರೆ  ರಷ್ಯಾ ಭದ್ರತಾ ಇಲಾಖೆ ಬಳಿಯಿರುವ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯ’ಎಂದು ನೇತಾಜಿ ಅವರ ಮೊಮ್ಮಗ ಚಂದ್ರ ಬೋಸ್‌ ತಿಳಿಸಿದ್ದಾರೆ. ಜನವರಿ 23ಕ್ಕೆ ನೇತಾಜಿ ಅವರಿ ಸಂಬಂಧ ಪಟ್ಟ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಭಾರತ ಈಗಾಗಲೇ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT