ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾ ಸುಂದರಿಗೆ ಕಿರೀಟ

ಮುಸ್ಲಿಂ ಯುವತಿಯರ ಸೌಂದರ್ಯ ಸ್ಪರ್ಧೆ
Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಪಿಟಿಐ): ಇಂಡೋ­ನೇಷ್ಯಾದಲ್ಲಿ ಮುಸ್ಲಿಂ ಯುವತಿ­ಯರಿ­ಗಾಗಿ ಏರ್ಪಡಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ 21 ವರ್ಷದ ನೈಜೀರಿಯಾ ಯುವತಿ ವಿಜೇತಳಾಗಿದ್ದಾಳೆ.

ಜಕಾರ್ತದಲ್ಲಿ ಬುಧವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ನೈಜೀರಿ­ಯಾದ ಒಬಾಬಿಯಿ ಐಷಾ ಅಜಿಬೊಲಾ ಎಂಬಾಕೆ ‘ವಿಶ್ವ ಮುಸ್ಲಿಂ ಸುಂದರಿ 2013’ ಪಟ್ಟ ಗಳಿಸಿದಳು. ತಮ್ಮ ಹೆಸರು ಪ್ರಕಟಿಸಿದ ಕೂಡಲೇ ಒಬಾಬಿಯ ಅಳುತ್ತಲೇ ಕುರಾನಿನ ಸಾಲುಗಳನ್ನು ಪಠಿಸಿದರು.

ಈ ಸುಂದರಿ 2,200  ಡಾಲರ್‌ ( ರೂ.1.22ಲಕ್ಷ )  ಬಹುಮಾನ ಗೆದ್ದಿದ್ದು,  ಮೆಕ್ಕಾ ಮತ್ತು ಭಾರತಕ್ಕೆ ಪ್ರವಾಸ ಆಯೋಜಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದ  500 ಜನರಲ್ಲಿ 20 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ 20 ಸುಂದರಿಯರು ಮುಸ್ಲಿಂ ಫ್ಯಾಷನ್‌ ಹಾಗೂ ಧಾರ್ಮಿಕ ಮೌಲ್ಯಗಳನ್ನು ಪ್ರತಿಪಾದಿಸಿದರು.

ಈ ಸುಂದರಿಯರಿಗೆ ಆಧ್ಯಾತ್ಮಿಕ ತರ­ಬೇತಿ­ಯನ್ನು ಸಹ ನೀಡಲಾಗಿದ್ದು,  ಸುರ್ಯೋದ­ಯಕ್ಕಿಂತ ಮೊದಲು ಸಾಮೂ­ಹಿಕ ನಮಾಜು ಮಾಡುವ, ಕುರಾನ್‌ ಅಧ್ಯಯನ ಮಾಡುವ ಕಾರ್ಯಕ್ರಮವೂ ಇತ್ತು.

ಇಂಡೋನೇಷ್ಯಾದಲ್ಲಿ ನಡೆಯಲಿರುವ ‘ವಿಶ್ವ ಸುಂದರಿ’ ಸ್ಪರ್ಧೆಗೆ ಮುಸ್ಲಿಂ ಸಂಘ­ಟನೆಗಳು ಪ್ರತಿರೋಧ ವ್ಯಕ್ತಪಡಿಸುತ್ತಿ­ರುವ ಸಂದರ್ಭದಲ್ಲೇ ಈ ಸ್ಪರ್ಧೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT