ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದಲ್ಲಿ 50 ವಿದ್ಯಾರ್ಥಿಗಳ ಹತ್ಯೆ

Last Updated 29 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅಬುಜಾ, ನೈಜೀರಿಯಾ (ಪಿಟಿಐ): ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿನಿಲ­ಯ­ದ ಮೇಲೆ ಗುಂಡಿನ ದಾಳಿ ನಡೆಸಿದ ಶಂಕಿತ ಬೊಕೊ ಹರಾಮ್‌ ಇಸ್ಲಾಮಿಕ್‌ ಉಗ್ರರು, ರಾತ್ರಿ ಮಲಗಿದ್ದ ಕನಿಷ್ಠ 50 ವಿದಾರ್ಥಿ­ಗಳನ್ನು ಹತ್ಯೆ ಮಾಡಿದ್ದಾರೆ.

ಇತರ ವಿದ್ಯಾರ್ಥಿಗಳು ಗಾಯಗೊಂಡಿ­ರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಮೂಲ­ಗಳು ತಿಳಿಸಿವೆ.
ಭಾನುವಾರ ಬೆಳಗಿನ ಜಾವ ಯೋಬೆ ರಾಜ್ಯದ ಗುಜ್ಬಾದಲ್ಲಿರುವ ಕೃಷಿ ಕಾಲೇ­ಜಿಗೆ ನುಗ್ಗಿದ ಕಟ್ಟಾ ಉಗ್ರರು ವಿದ್ಯಾರ್ಥಿ­ನಿಲಯದಲ್ಲಿ ನಿದ್ರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಗುಂಡಿನ ಸುರಿ­ಮಳೆ­­ಗರೆದರು.

ಇದಲ್ಲದೆ, ದಾಳಿಕೋರರು ಇನ್ನೊಂದು ಶಿಕ್ಷಣ ಸಂಸೆ್ಥಗೂ ಬೆಂಕಿ ಹಚ್ಚಿದು್ದ, ಅಲ್ಲಿದ್ದ ಸಾವಿ­ರಕ್ಕೂ ಅಧಿಕ ವಿದ್ಯಾರ್ಥಿಗಳು ಹೊರಗೆ ಓಡಿರು­ವುದಾಗಿ ಪೊಲೀಸರು ತಿಳಿಸಿದ್ದಾರೆ.   ಬೊಕೊ ಹರಾಮ್‌ ಉಗ್ರರು ಶಾಲೆ­ಗಳನ್ನು ‘ಪಾಶ್ಚಿಮಾತ್ಯ ಸಂಸ್ಕೃತಿಯ ಸಂಕೇತ’ ಎಂದು ನಂಬಿದು್ದ, ಇದಕ್ಕಾಗಿ ಪಾಶ್ಚಿಮಾತ್ಯ ಶಿಕ್ಷಣವನ್ನು ನಿರ್ಬಂಧಿಸಿದ ಕರಪತ್ರಗಳನ್ನು ದೇಶದಲ್ಲಿ ಹಂಚಿದ್ದಾರೆ. ದೇಶ­ದಲ್ಲಿ ಇಸ್ಲಾಮಿಕ್‌ ಸರ್ಕಾರ ರಚಿ­ಸು­ವುದು ಉಗ್ರರ ಗುರಿಯಾಗಿದೆ. ಯೋಬೆ ರಾಜ್ಯದ ಶಾಲೆಗಳು ಮತು್ತ ವಿಶ್ವವಿದ್ಯಾಲಯಗಳನ್ನು ಗುರಿಯಾಗಿಸಿ ಉಗ್ರರು ಸತತ ದಾಳಿ ನಡೆಸುತ್ತಿದ್ದಾರೆ. 

ಯೋಬೆ ಸೇರಿ ಮೂರು ರಾಜ್ಯಗಳಲ್ಲಿ ಅಧ್ಯಕ್ಷ ಗುಡ್‌ಲಕ್‌ ಜೊನಾಥನ್‌ ಮೇ ತಿಂಗಳಿಂದ ತುರ್ತು ಪರಿಸಿ್ಥತಿ ಘೋಷಿಸಿ, ಉಗ್ರರ ವಿರುದ್ಧ ಕಾರ್ಯಾಚರಣೆಗೆ ಆದೇಶಿಸಿದ್ದಾರೆ. ದೇಶದ ಈಶಾನ್ಯ ಭಾಗ­ದಲ್ಲಿ ಬಲಿಷ್ಠ­ರಿರುವ ಉಗ್ರರು, ಯೋಧ­­ರಂತೆ ವೇಷ ಧರಿ­ಸಿ, ರಸೆ್ತಯಲ್ಲಿ ಮತು್ತ ತಪಾಸಣಾ ಕೇಂದ್ರಗಳಲ್ಲಿ  ಜನರು ಮತು್ತ ವಾಹನ­ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಸರ್ಕಾರ ಕಾರ್ಯಾಚರಣೆ ಕೈಗೊಂಡಿರು­ವು­ದರಿಂದ ಹಲವು ಉಗ್ರರು ನೆಲೆ ಬಿಟು್ಟ ಪರಾರಿಯಾಗಿದ್ದಾರೆ. ಆದರೆ ದ್ವೇಷದ ದಾಳಿ ಇನ್ನೂ ಮುಂದುವರಿದಿದೆ.
  
ಉಗ್ರರು ಕಳೆದ ನಾಲ್ಕು ವರ್ಷ­ಗಳಲಿ್ಲ ಸಾವಿರಾರು ಜನರನ್ನು ಕೊಂದಿ­ದ್ದಾರೆ. ಈ ತಿಂಗಳಲಿ್ಲಿ ಬೊರ್ನೊ ರಾಜ್ಯ­ದಲ್ಲಿ ಕನಿಷ್ಠ 143 ಜನರನ್ನು ಉಗ್ರರು ಹತೆ್ಯ ಮಾಡಿದ್ದಾರೆ. ಜೂನ್‌ ತಿಂಗಳು ಪ್ರಾಂತ್ಯ­ದಲಿ್ಲ ಶಾಲೆಗಳ ಮೇಲೆ ಉಗ್ರರು ಎರಡು ದಾಳಿ­ಗಳನ್ನು ನಡೆಸಿದ್ದರು. ಇದಾದ ಒಂದು ತಿಂಗಳ ನಂತರ ಯೋಬೆಯ ಮಮುಡೊ ಪಟ್ಟಣ­­ದಲ್ಲಿ ವಿದ್ಯಾರ್ಥಿನಿಲ­ಯಗಳ ಮೇಲೆ ಸ್ಫೋಟಕ­ಗಳ ಮತು್ತ ಗುಂಡಿನ ದಾಳಿ ನಡೆಸಿ, 41 ವಿದ್ಯಾರ್ಥಿ­ಗಳನ್ನು ಹತೆ್ಯ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT