ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ. ಮುರುಗೇಶನ್‌ ಎಸ್‌ಎಚ್‌ಆರ್‌ಸಿ ಅಧ್ಯಕ್ಷ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗದ(ಎಸ್‌ಎಚ್‌ಆರ್‌ಸಿ) ಅಧ್ಯಕ್ಷರ­ನ್ನಾಗಿ ನ್ಯಾಯಮೂರ್ತಿ ದರ್ಮರ್‌ ಮುರುಗೇಶನ್‌ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳ­ವಾರ ಆದೇಶಿಸಿದೆ.

ನ್ಯಾ. ಎಸ್‌.ಆರ್‌. ನಾಯಕ್‌ ಅವರು ನಿವೃತ್ತ­ರಾದ ನಂತರ ಆಯೋಗದ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಈ ಸಂಬಂಧ ರಾಜ್ಯ ಹೈಕೋರ್ಟ್‌­ನಲ್ಲಿ ಇತ್ತೀ­ಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ದಾಖಲಾಗಿತ್ತು. ‘ಅಧ್ಯಕ್ಷರ ಸ್ಥಾನಕ್ಕೆ ಅರ್ಹ­ರನ್ನು ನೇಮಕ ಮಾಡುವ ವಿಚಾರದಲ್ಲಿ ಸರ್ಕಾರ ತ್ವರಿತ ಕ್ರಮಕೈಗೊಳ್ಳಬೇಕು’ಎಂದು  ಹೈಕೋರ್ಟ್‌ ವಿಭಾ­ಗೀಯ ಪೀಠ ಹೇಳಿತ್ತು.

ನ್ಯಾ.ಮುರುಗೇಶನ್‌ ಅವರು ಈ ಹಿಂದೆ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯ­­­ಮೂರ್ತಿ­ಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರು­ ­1994ರಿಂದ 96ರವರೆಗೆ ಚೆನ್ನೈ ಹೈ­ಕೋರ್ಟ್‌­ನಲ್ಲಿ ಸರ್ಕಾರದ ವಿಶೇಷ ವಕೀಲ­ರಾಗಿ ಸೇವೆ ಸಲ್ಲಿಸಿದ್ದಾರೆ.

2000ರಲ್ಲಿ ಅವರನ್ನು ಚೆನ್ನೈ ಹೈಕೋರ್ಟ್‌ ನ್ಯಾಯಮೂರ್ತಿ­ಯಾಗಿ ನೇಮಕ ಮಾಡ­ಲಾಗಿತ್ತು. ಮುರು­ಗೇಶನ್‌ ಅವರು ಕನ್ನಡ ಬಲ್ಲವರು ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT