ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರಕ್ಕೆ ಭಾವಚಿತ್ರ: ಜನರ ಪರದಾಟ

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಅರಸೀಕೆರೆ: ಪಡಿತರ ಚೀಟಿಗೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಸಲು ತಾಲ್ಲೂಕಿನ ಮಾಡಾಳು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಹಲವು ದಿನಗಳಿಂದ ನಾಗರಿಕರು ಕುಟುಂಬ ಸಮೇತ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ವಿದ್ಯುತ್ ಕಡಿತದಿಂದ ಭಾವಚಿತ್ರ ತೆಗೆಸುವ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಬಾಣಂತಿಯರು, ವೃದ್ಧರು, ಗರ್ಭಿಣಿಯರು ಮುಂಜಾನೆಯಿಂದ ಸಂಜೆವರೆಗೆ ಸಾಲಿನಲ್ಲಿ ನಿಂತು ಸುಸ್ತಾಗುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಆಗಾಗ ಮಳೆ ಬೀಳುತ್ತಿದ್ದು, ಮಳೆಯಲ್ಲೇ ಸರದಿಗಾಗಿ ಜನರು ಕಾಯಬೇಕಿದೆ.

ಇನ್ನೊಂದೆಡೆ ವಿದ್ಯುತ್ ಅವ್ಯವಸ್ಥೆಯಿಂದ ಕಂಪ್ಯೂಟರ್ ಕೇಂದ್ರದ ಬಾಗಿಲು ಕಾಯುವುದೇ ಜನರ ಕಾಯಕವಾಗಿದೆ. ಈ ಭಾಗದಲ್ಲಿ ಬೆಳಿಗ್ಗೆ 8ರಿಂದ11ರ ವರೆಗೆ ಮಾತ್ರ ಕರೆಂಟ್ ಇರುತ್ತದೆ. 11ರಿಂದ ಸಂಜೆ 6ರ ವರೆಗೆ ವಿದ್ಯುತ್ ಕಡಿತಗೊಂಡಿರುತ್ತದೆ. ಮಧ್ಯಾಹ್ನ ಕರೆಂಟ್ ಬರುವ ನಿರೀಕ್ಷೆಯಲ್ಲಿ ಕಾಯುತ್ತಾ ಕುಳಿತರೂ ಭಾವಚಿತ್ರ ತೆಗೆಸಲು ಆಗುತ್ತಿಲ್ಲ.

`ಎರಡು ಮೂರು ದಿನಗಳಿಂದ ಕೂಲಿ ಕೆಲಸ ಬಿಟ್ಟು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಕಾಯುತ್ತಿದ್ದೇನೆ. ನನಗೆ ಕೆಲಸ ಇಲ್ಲದೆ ಇರುವುದರಿಂದ ಕುಟುಂಬ ಉಪವಾಸದಲ್ಲಿದೆ~ ಎಂದು ದಲಿತ ಕಾಲೊನಿಯ ತಿಮ್ಮಯ್ಯ, ಪಲ್ಲಕೆಪ್ಪ, ಚಿಕ್ಕಣ್ಣ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು.

ಪಡಿತರ ಚೀಟಿಗೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಯಲು ಕುಟುಂಬದ ನಾಲ್ಕು ಸದಸ್ಯರಿಗೆ 20 ರೂಪಾಯಿ ನಂತರದ ಪ್ರತಿ ಸದಸ್ಯರಿಗೆ 5 ರೂಪಾಯಿ ವಿಧಿಸಬಹುದು ಎಂದು ತಹಶೀಲ್ದಾರರು ಹೊರಡಿಸಿದ ಆದೇಶದಲ್ಲಿದೆ. ಆದರೆ ಭಾವಚಿತ್ರ ತೆಗೆಯುವವರು ಪ್ರತಿ ಕಾರ್ಡಿಗೆ 40ರಿಂದ 50 ರೂಪಾಯಿ ಸಂಗ್ರಹಿಸುತ್ತಿದ್ದಾರೆ.

ಒಟ್ಟಾರೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಸಲು ಒಂದು ಕುಟುಂಬಕ್ಕೆ ಕನಿಷ್ಠ 400 ರೂಪಾಯಿ ವೆಚ್ಚವಾಗುತ್ತಿದೆ ಎಂದು ಅರ್ಜಿ ಸಲ್ಲಿಸಲು ನಿಂತವರು ದೂರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT