ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮಕಾರಿ ನಿಯಮ ಪಾಲನೆ ಇಲ್ಲ?

Last Updated 12 ಸೆಪ್ಟೆಂಬರ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಪರಿ ಣಾಮಕಾರಿ ನಿಯಮಗಳಿವೆ. ಈ ನಿಯಮಗಳನ್ನು ಜನತೆ ಪಾಲಿಸಿದ್ದರೆ, ಅಧಿಕಾರಿಗಳು ಕಟ್ಟುನಿಟ್ಟಾಗಿ ಇವು ಗಳನ್ನು ಜಾರಿಗೊಳಿಸಿದ್ದರೆ, ಐಟಿ ನಗರಿಯ ಚಿತ್ರಣವೇ ಬದಲಾಗುತ್ತಿತ್ತು. ಯೋಜಿತ ನಗರವಾಗಿ ರೂಪುಗೊಳ್ಳುವ ಸಾಧ್ಯತೆ ಇತ್ತು. ಆದರೆ ಆಸ್ತಿದಾರರು ಹಾಗೂ ಅಧಿಕಾರಿಗಳು ಇದಕ್ಕೆ ಹೆಚ್ಚು ಒತ್ತು ನೀಡದ ಕಾರಣ ಈ ನಿಯಮಗಳು ಕಡತಗಳಲ್ಲಷ್ಟೇ ಪರಿಣಾಮಕಾರಿ ಎನಿಸಿವೆ!

ನಗರದ ಯಾವುದೇ ಭಾಗದಲ್ಲಿ, ಎಷ್ಟೇ ಅಳತೆಯ ನಿವೇಶನದಲ್ಲಿ ಕಟ್ಟಡ ನಿರ್ಮಿಸಬೇಕಾದರೂ ಅದಕ್ಕೆಂದೇ ಪ್ರತ್ಯೇಕವಾದ ನಿಯಮಗಳಿವೆ. ರಸ್ತೆಯ ಅಗಲ, ನಿವೇಶನವಿರುವ ಪ್ರದೇಶ ಸೇರಿದ ವಲಯ, ಉದ್ದೇಶಿತ ಕಟ್ಟಡದ ಎತ್ತರ ಇತರೆ ಅಂಶಗಳ ಆಧಾರದ ಮೇಲೆ ಒಟ್ಟು ನಿರ್ಮಾಣ ಪ್ರದೇಶದ ವಿಸ್ತೀರ್ಣ ನಿರ್ಧಾರವಾಗುತ್ತದೆ. ಅಲ್ಲದೇ ಆ ನಿವೇಶನದ ಅಳತೆಗೆ ಪೂರಕವಾಗಿ ಇಷ್ಟೇ ಎತ್ತರದ ಕಟ್ಟಡ ನಿರ್ಮಿಸಬೇಕು ಎಂಬ ನಿಯಮವಿದೆ.

ನಿವೇಶನದ ಅಳತೆಗೆ ಅನುಗುಣವಾಗಿ ಎಡ ಹಾಗೂ ಬಲ ಭಾಗದಲ್ಲಿ ಇಂತಿಷ್ಟು ತೆರೆದ ಪ್ರದೇಶ (ಸೆಟ್‌ಬ್ಯಾಕ್) ಬಿಡಬೇಕು ಎಂಬ ನಿಯಮವಿದೆ. 11.5 ಮೀಟರ್ ಎತ್ತರದವರೆಗಿನ ಕಟ್ಟಡ ಹಾಗೂ 4,000 ಚ.ಮೀ. ವಿಸ್ತೀರ್ಣದ ನಿವೇಶನಗಳಲ್ಲಿ ಬಲ ಭಾಗ ಹಾಗೂ ರಸ್ತೆಗೆ ಅಭಿಮುಖವಾಗಿರುವ ಭಾಗದಲ್ಲಿ ತಲಾ 1 ಮೀಟರ್ ಸೆಟ್‌ಬ್ಯಾಕ್ ಪ್ರದೇಶವಿರಬೇಕು.

ಕಟ್ಟಡದ ಎತ್ತರ 11.5ರಿಂದ 15 ಮೀಟರ್ ಎತ್ತರದವರೆಗೆ ಇದ್ದರೆ ಆ ಕಟ್ಟಡದ ನಾಲ್ಕು ಭಾಗದಲ್ಲಿ 5 ಮೀಟರ್ ಸೆಟ್‌ಬ್ಯಾಕ್ ಬಿಡಬೇಕು. 15ರಿಂದ 18 ಮೀಟರ್ ಎತ್ತರದ ಕಟ್ಟಡಗಳಲ್ಲಿ 6 ಮೀಟರ್ ಸೆಟ್‌ಬ್ಯಾಕ್ ಬಿಡಬೇಕು. ಒಟ್ಟು 50 ಮೀಟರ್ ಹಾಗೂ ಅದಕ್ಕಿಂತಲೂ ಹೆಚ್ಚು ಎತ್ತರದ ಕಟ್ಟಡಗಳಲ್ಲಿ 16 ಮೀಟರ್ ಸೆಟ್‌ಬ್ಯಾಕ್ ಬಿಡಬೇಕು ಎಂಬ ನಿಯಮವಿದೆ. ಆದರೆ ಬಹುಪಾಲು ಕಟ್ಟಡಗಳಲ್ಲಿ ಇದರ ಪಾಲನೆ ಕಾಣುತ್ತಿಲ್ಲ.

ವಾಸದ ಕಟ್ಟಡ ನಿಯಮ: ವಾಸದ ಕಟ್ಟಡಗಳನ್ನು ಸಹ ರಸ್ತೆಯ ಅಗಲಕ್ಕೆ ಅನುಗುಣವಾಗಿ ನಿಗದಿಪಡಿಸಿದ ವಿಸ್ತೀರ್ಣದಲ್ಲಷ್ಟೇ ನಿರ್ಮಾಣ ಮಾಡ ಬೇಕು. 12 ಮೀಟರ್ ಅಗಲದ ರಸ್ತೆಯಲ್ಲಿ 360 ಚ.ಮೀ. ನಿವೇಶ ನವಿದ್ದಲ್ಲಿ ನೆಲ ಮಟ್ಟದಲ್ಲಿ ಶೇ 75ರಷ್ಟು ಪ್ರದೇಶವನ್ನಷ್ಟೇ ಬಳಸಬೇಕು.

18 ಮೀಟರ್ ಅಗಲದ ರಸ್ತೆಯಲ್ಲಿ 1000 ಚ.ಮೀ. ವಿಸ್ತೀರ್ಣದ ನಿವೇಶನ ವಿದ್ದಲ್ಲಿ ನೆಲ ಮಟ್ಟದಲ್ಲಿ ಶೇ 65ರಷ್ಟು ಭಾಗವನ್ನಷ್ಟೇ ಬಳಸಬೇಕು. ಹಾಗೆಯೇ 30 ಮೀಟರ್ ಅಗಲದ ರಸ್ತೆಯಲ್ಲಿ 20,000 ಚ.ಮೀ. ವಿಸ್ತೀ ರ್ಣದ ನಿವೇಶನವಿದ್ದರೂ ನೆಲ ಮಹಡಿಯಲ್ಲಿ ಶೇ 50ರಷ್ಟು ಪ್ರದೇಶ ದಲ್ಲಿ ಮಾತ್ರ ನಿರ್ಮಿಸಬೇಕು ಎಂಬ ನಿಯಮವಿದೆ.

ಕಿರಿದಾಗಿರುವ ರಸ್ತೆಯಲ್ಲಿ ದೊಡ್ಡ ವಿಸ್ತೀರ್ಣದ ನಿವೇಶನವಿದ್ದರೂ ಅದರಲ್ಲಿ ಬೃಹತ್ ಕಟ್ಟಡ ನಿರ್ಮಿಸಲು ಅವಕಾಶ ವಿಲ್ಲ. ದೊಡ್ಡ ರಸ್ತೆಗಳಿರುವ ಪ್ರದೇಶ ಗಳಲ್ಲಷ್ಟೇ ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ. ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗಿದ್ದರೆ, ಕಿರಿದಾದ ರಸ್ತೆಗಳಲ್ಲಿ ಅಪಾರ್ಟ್‌ಮೆಂಟ್‌ಗಳು, ಬೃಹತ್ ವಾಣಿಜ್ಯ ಸಮುಚ್ಚ ಯಗಳು ನಿರ್ಮಾಣ ವಾಗುತ್ತಿರಲಿಲ್ಲ. ಕಿಷ್ಕಿಂಧೆಯಂತಹ ರಸ್ತೆಗಳಲ್ಲಿ ವಾಹನ ದಟ್ಟಣೆ ಕೂಡ ಉಂಟಾಗುತ್ತಿರಲಿಲ್ಲ. ಹಲವೆಡೆ ರಸ್ತೆ ವಿಸ್ತರಣೆಯ ವಿವಾದ ಸೃಷ್ಟಿಯಾಗುತ್ತಿರಲಿಲ್ಲ.

ವಾಣಿಜ್ಯ ಕಟ್ಟಡ ನಿಯಮ: ವಾಣಿಜ್ಯ ಕಟ್ಟಡವನ್ನು ಸಹ ರಸ್ತೆಯ ಅಗಲಕ್ಕೆ ಅನುಗುಣವಾಗಿ ನಿರ್ಮಿಸಬೇಕಾಗುತ್ತದೆ. ರಸ್ತೆಯ ಅಗಲ ಹೆಚ್ಚಾದಂತೆ ಕಟ್ಟಡದ ಎತ್ತರವನ್ನು ನಿಯಮಿತವಾಗಿ ಏರಿಕೆ ಮಾಡಲು ನಿಯಮದಲ್ಲಿ ಅವಕಾಶವಿದೆ. ಆದರೆ ನೆಲಮಟ್ಟದಲ್ಲಿ ಒಟ್ಟು ನಿರ್ಮಾಣ ವಿಸ್ತೀರ್ಣಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸುಮಾರು 12,000 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಕೆಳಕಂಡ ನಿಯಮ ವಿಧಿಸಲಾಗಿದೆ. ಸುಮಾರು 9 ಮೀಟರ್‌ಗಿಂತ ಕಡಿಮೆ ಅಗಲದ ರಸ್ತೆಯಲ್ಲಿ 12,000 ಚ.ಮೀ. ಅಳತೆಯ ನಿವೇಶ ನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ 1.50ರಷ್ಟು ಎಫ್‌ಎಆರ್ ಬಳಸಬ ಹುದು. ಆದರೆ ನೆಲ ಮಟ್ಟದಲ್ಲಿ ಶೇ 55ರಷ್ಟು ಪ್ರದೇಶವನ್ನಷ್ಟೇ ಬಳಸಬೇಕು.

12 ಮೀಟರ್‌ವರೆಗಿನ ರಸ್ತೆಯಲ್ಲಿ ಇದೇ ಅಳತೆಯ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ನೆಲ ಮಟ್ಟದಲ್ಲಿ ಶೇ 50ರಷ್ಟು ಭಾಗವನ್ನಷ್ಟೇ ಉಪಯೋಗಿ ಸಬೇಕು. ಹೀಗೆ ರಸ್ತೆಯ ವಿಸ್ತೀರ್ಣ ಹೆಚ್ಚಾದಂತೆ ನೆಲ ಮಟ್ಟದಲ್ಲಿ ಬಳಸಬ ಹುದಾದ ವಿಸ್ತಿರ್ಣದ ಪ್ರಮಾಣ ಇಳಿಕೆಯಾಗುತ್ತದೆ. ಆದರೆ ಎಫ್‌ಎಆರ್ ಪ್ರಮಾಣ ಅಂದರೆ ಕಟ್ಟಡದ ಎತ್ತರ ಹಾಗೂ ನಿರ್ಮಾಣ ಪ್ರದೇಶದ ವಿಸ್ತೀರ್ಣ ಹೆಚ್ಚುತ್ತದೆ (ಪಟ್ಟಿ-2).

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾ ರವು (ಬಿಡಿಎ) ಸಿದ್ಧಪಡಿಸಿರುವ ಪರಿಷ್ಕೃತ ಮಹಾ ನಕ್ಷೆ- 2015ರ ಅನ್ವಯ ವಲಯವಾರು ಕಟ್ಟಡ ನಿರ್ಮಾಣ ನಿಯಮಾವಳಿಗಳನ್ನು ರೂಪಿಸಲಾಗಿದೆ. ಅದರಂತೆ ಮೇಲ್ಕಂಡ ನಿಯಮಗಳನ್ನು ವಿಧಿಸಿದೆ. ಆದರೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದಾರೆ.

ನಗರದ ಯಾವುದೇ ಭಾಗದಲ್ಲಿ ರಾತ್ರೋರಾತ್ರಿ ಕಟ್ಟಡ ನಿರ್ಮಿಸಲು ಸಾಧ್ಯವೇ ಇಲ್ಲ. ಸಂಬಂಧಪಟ್ಟ ಎಂಜಿನಿ ಯರ್ ತಮ್ಮ ಕಾರ್ಯ ವ್ಯಾಪ್ತಿಯ ಪ್ರದೇಶದಲ್ಲಿ ನಿತ್ಯ ತಪಾಸಣೆ ನಡೆಸಬೇಕು ಎಂಬುದು ನಿಯಮದಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಾಗಿ ನಿರ್ಮಾಣ ಸಂದರ್ಭದಲ್ಲಿ ಎಂಜಿನಿಯರ್‌ಗಳು ಎಚ್ಚೆತ್ತುಕೊಂಡು ನಿಯಮಗಳನ್ನು ಪಾಲಿಸುವಂತೆ ಕಟ್ಟಡ ಮಾಲೀಕರಿಗೆ ತಾಕೀತು ಮಾಡಿದ್ದರೆ ನಿಯಮ ಉಲ್ಲಂಘಿಸಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿರಲಿಲ್ಲ.

ನೀವೂ ಮಾಹಿತಿ ನೀಡಿ
ನಿಯಮಗಳ ಉಲ್ಲಂಘನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ನಡೆಯುವ ಅಕ್ರಮಗಳ ಕುರಿತು `ಪ್ರಜಾವಾಣಿ~ ಸರಣಿ ಲೇಖನಗಳನ್ನು ಪ್ರಕಟಿಸಲಿದೆ. ಓದುಗರು ಸಹ ಈ ರೀತಿಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬಹುದು. ಅಲ್ಲದೇ ಕಟ್ಟಡ ನಿರ್ಮಾಣ ವೇಳೆ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದರೆ ಈ ಕುರಿತು ಮಾಹಿತಿ ನೀಡಬಹುದು. ಅದನ್ನು ಓದುಗರ ಹೆಸರಿನಲ್ಲಿಯೇ ಪ್ರಕಟಿಸಲಾಗುವುದು. ಹಾಗೆಯೇ ನಿಯಮ ಉಲ್ಲಂಘಿಸಿ ನಿರ್ಮಾಣ ಗೊಂಡ ಹಾಗೂ ನಿರ್ಮಾಣವಾ ಗುತ್ತಿರುವ ಬಹುಮಹಡಿ ಕಟ್ಟಡಗಳ ಬಗ್ಗೆ ದಾಖಲೆ ಸಹಿತ ಮಾಹಿತಿಯನ್ನು ಕೆಳಕಂಡ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಇ-ಮೇಲ್ ವಿಳಾಸ: civicpv@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT