ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮಕಾರಿ ಬೋಧನೆ ಇಂದಿನ ಅಗತ್ಯ

Last Updated 14 ಫೆಬ್ರುವರಿ 2011, 9:50 IST
ಅಕ್ಷರ ಗಾತ್ರ

ಮಾನ್ವಿ: ಮಕ್ಕಳಿಗೆ ಜ್ಞಾನದ ಅನ್ವಯತೆಯನ್ನು ಜೀವನದಲ್ಲಿ ಅಳವಡಿಕೊಳ್ಳುವಂತಹ ಪರಿಣಾಮಕಾರಿ ಬೋಧನೆಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಗುಲ್ಬರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಶಂಕರ ಎಚ್.ಬಟೂರು ಹೇಳಿದರು.ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಕನ್ನಡ ಭಾಷಾ ವಿಷಯ ಬೋಧಕರ ವೇದಿಕೆಯ 2010-11ನೇ ಸಾಲಿನ ಶೈಕ್ಷಣಿಕ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಕನ್ನಡ ಭಾಷಾ ವಿಷಯ ಬೋಧಕರ ಹಸ್ತಪ್ರತಿಗಳ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಬಿಇಒ ರಾಮಾಂಜನೇಯ, ಎನ್.ಎಚ್.ನಾಗೂರ, ವಿ.ಟಿ.ಚಿಲಕದ, ಪೀರ್‌ಜಾದೆ, ಮಲ್ಲಯ್ಯ ನಾಗೋಲಿ, ಬಿ.ಮಧುಸೂದನ ಗುಪ್ತಾ, ಬಾಬು ಭಂಡಾರಿಗಲ್, ಶ್ರೀಶೈ ಲಗೌಡ, ಬಿ.ವಿ.ರೆಡ್ಡಿ, ಮಹಾದೇವಪ್ಪ, ಬಸವರಾಜ ಬೋರೆಡ್ಡಿ  ಮತ್ತಿತರರು ವೇದಿಕೆಯಲ್ಲಿದ್ದರು.
ಹನುಮಂತಪ್ಪ ಗವಾಯಿ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜೇಶ್ವರಿ ಹಿರೇಮಠ ನಿರೂಪಿಸಿದರು. ಅಂಬಯ್ಯ ನುಲಿ ಪ್ರಾರ್ಥಿಸಿದರು.  ಲಕ್ಷ್ಮೀರೆಡ್ಡಿ ನಾಡಗೀತೆ  ಹಾಗೂ ಚಿದಾನಂದ ಗವಾಯಿ ರೈತ ಗೀತೆ ಹಾಡಿದರು. ರಾಜಶೇಖರ ದಿನ್ನಿ ಸ್ವಾಗತಿಸಿದರು. ಮಹಿಬೂಬ ಪಾಷ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT