ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ'

Last Updated 20 ಡಿಸೆಂಬರ್ 2012, 9:16 IST
ಅಕ್ಷರ ಗಾತ್ರ

ಗುರುಮಠಕಲ್: ಸಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಡುವುದು ಮತ್ತು ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾ ಕಡೇಚೂರ ಹೇಳಿದರು.

ಅವರು ಮಂಗಳವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾದ 2012-13ನೇ ಸಾಲಿನ ಕಾಲೇಜು ಮಟ್ಟದ ವಾರ್ಷಿಕ ಎನ್‌ಎಸ್‌ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮಂಜುಳಾ ಎಸ್.ಗುಲಿ ಮಾತನಾಡಿ ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲು ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಇದ್ದು, ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ವ್ಯಾಸಾಂಗ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸುನೀತಾ ವಿಲಿಯಂಸ್  ಚಂದ್ರಲೋಕಕ್ಕೆ ಕಾಲಿಟ್ಟ ಭಾರತಿಯ ಮಹಿಳೆಯಾಗಿದ್ದು ಮಹಿಳೆ ಎಲ್ಲಾ ರಂಗದಲ್ಲಿ ಸಾಧನೆಯ ಪಥದಲ್ಲಿ ಸಾಗುತ್ತಿದ್ದಾಳೆ ಎಂಬುವುದಕ್ಕೆ ನಿದರ್ಶನ ಎಂದರು.

ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ರುದ್ರಗೌಡ ಮಾಲಿಪಾಟೀಲ ಗಾಜರಕೋಟನ ಪ್ರಾಚಾರ್ಯ ಸುದರ್ಶನರಡ್ಡಿ ಚಪೆಟ್ಲಾ, ಮುಖ್ಯಗುರು ಹಣಮಂತರಾವ ಗೋಂಗ್ಲೆ, ಬಸವರಾಜ ಬೂದಿ, ಎಸ್‌ಡಿಎಂಸಿ ಸದಸ್ಯ ಬಾಲಪ್ಪ ಕೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಚನ್ನಬಸ್ಸಪ್ಪ ಕುಳಗೇರಿ ಅಧ್ಯಕ್ಷತೆ ವಹಿಸಿದ್ದರು. ವೆಂಕಟರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.

ವಿಜಯಲಕ್ಷ್ಮಿ ಶಹಬಾದಿ, ಉಪ್ಯನ್ಯಾಸಕ ಶಂಕರಲಿಂಗಪ್ಪ ಗುಳಿ, ಸುರೇಶ ಅರುಣಿ, ಗೋಲಾಪಕೃಷ್ಣಾ ವೇದಿಕೆಯಲ್ಲಿದ್ದರು. ಪೂಜಾ ಸಂಗಡಿದರು ಎನ್‌ಎಸ್‌ಎಸ್ ಗೀತೆ ಹಾಡಿದರು. ಮಲ್ಲಣ್ಣ ಬಿ. ಸ್ವಾಗತಿಸಿದರು. ಪ್ರತಾಪರೆಡ್ಡಿ ಕೋಸ್ಗಿ ವಂದಿಸಿದರು. ಮಲ್ಲಯ್ಯ  ಕೆ. ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT