ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಮನೆ ನಿರ್ಮಾಣ: ಜನರಲ್ಲಿ ಒಲವು ಹೆಚ್ಚಬೇಕು

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ಕೆಲ ಮಟ್ಟಿಗೆ ಹೆಚ್ಚು ವೆಚ್ಚವಾಗುವುದರಿಂದ ಮನೆ ಖರೀದಿದಾರರು   ಸಾಕಷ್ಟು ಒಲವು ತೋರಿಸುತ್ತಿಲ್ಲ ಎಂದು `ಏಕ್ರೆಕ್ಸ್~ ಪ್ರದರ್ಶನದ ಅಧ್ಯಕ್ಷ ನಿರ್ಮಲ್ ರಾಂ ಇಲ್ಲಿ ಹೇಳಿದರು.

ಏರ್‌ಕಂಡೀಷನಿಂಗ್, ರೆಫ್ರಿಜರೇಟಿಂಗ್ ಮತ್ತು ಕಟ್ಟಡ ನಿರ್ಮಾಣ ಸೇವೆಗಳ `ಏಕ್ರೆಕ್ಸ್ ಪ್ರದರ್ಶನ~ದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ತುಮಕೂರು ರಸ್ತೆಯಲ್ಲಿ ಇರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಫೆಬ್ರುವರಿ 23ರಿಂದ 25ರವರೆಗೆ ಈ ಪ್ರದರ್ಶನ ನಡೆಯಲಿದೆ.

ಅನೇಕ ಕಟ್ಟಡ ನಿರ್ಮಾಣಗಾರರು ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದರೂ, ಮನೆ ಖರೀದಿದಾರರು ವೆಚ್ಚ ಹೆಚ್ಚಳ ಎನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಾರೆ.  ಬಹುಸಂಖ್ಯಾತರಿಗೆ ಮನೆ ನಿರ್ಮಾಣವು ಅಗತ್ಯವಾಗಿದೆಯೇ ಹೊರತು ವಿಲಾಸಿ ಸೌಲಭ್ಯವಾಗಿಲ್ಲ. ಹೀಗಾಗಿ ಜನರು ಕಡಿಮೆ ವೆಚ್ಚಕ್ಕೆ ಒಲವು ತೋರಿಸುತ್ತಾರೆ. ಸರ್ಕಾರ ಕೂಡ ಇಂತಹ ಮನೆಗಳ ನಿರ್ಮಾಣಕ್ಕೆ ಹಲವು ಬಗೆಯ ರಿಯಾಯ್ತಿಗಳನ್ನು ನೀಡಲು ಮುಂದಾಗಬೇಕು. ಕಡಿಮೆ ಇಂಧನ ಬಳಸುವ, ಪರಿಸರ ಸ್ನೇಹಿ ಸಂಪನ್ಮೂಲಗಳ ಸಮರ್ಪಕ ಬಳಕೆ,  ಬರಿದಾಗುವ ಇಂಧನಗಳ ಮೇಲಿನ ಅವಲಂಬನೆ ತಗ್ಗಿಸುವ ಪ್ರಯತ್ನಗಳು  ಮನೆ ಮತ್ತು ಕಟ್ಟಡ ನಿರ್ಮಾಣ ರಂಗದಲ್ಲಿ ನಡೆಯುತ್ತಿವೆ. ಈ ಉದ್ದೇಶ ಸಾಧನೆಗೆ `ಏಕ್ರೆಕ್ಸ್~ ಪ್ರದರ್ಶನ ನೆರವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT