ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರದ ಬಗ್ಗೆ ಕಾಳಜಿ ಅಗತ್ಯ

Last Updated 9 ಜೂನ್ 2011, 5:35 IST
ಅಕ್ಷರ ಗಾತ್ರ

ಬೀದರ್: ಪರಿಸರದ ಬಗ್ಗೆ ಎಲ್ಲರು ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವೆಂಕಟೇಶ ನುಡಿದರು.

ನಗರದ ದತ್ತಗಿರಿ ಶಾಲೆಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರದ ಜಾಗೃತಿ ಮತ್ತು ಕಾನೂನಿನ ತಿಳಿವಳಿಕೆ ಎಲ್ಲರಿಗೂ ಬೇಕು ಎಂದು ಹೇಳಿದರು.
ಮಾಜಿ ಶಾಸಕ ರಮೇಶಕುಮಾರ ಪಾಂಡೆ, ಪ್ರಮುಖರಾದ ಮಲ್ಲಿಕಾರ್ಜುನ ಹತ್ತಿ, ರಮೇಶ ದುಕಾನದಾರ, ಚೇತನಾ ಪಾಟೀಲ್, ಅಂಜನಾ ಕುಲಕರ್ಣಿ, ಪದ್ಮಾ ಮಹಾರಾಜ, ಮಂಗಲಾ ದಾಡಗೆ ಮತ್ತಿತರರು ಉಪಸ್ಥಿತರಿದ್ದರು.

ಆಂಗ್ಲಮಾಧ್ಯಮ ಪ್ರಾಚಾರ್ಯ ಸತ್‌ವಿಂದರ್ ಕೌರ್, ಬಿ.ಎಂ. ಶಶಿಕಲಾ ಉಪಸ್ಥಿತರಿದ್ದರು. ಸಂಪತ್‌ಕುಮಾರ ನಿರೂಪಿಸಿದರು. ಉದಯಕುಮಾರ ಪಾಟೀಲ್ ಸ್ವಾಗತಿಸಿದರು. ಕನ್ನಡ ಮಾಧ್ಯಮ ಪ್ರಾಚಾರ್ಯರಾದ ಜಯದೇವಿ ಆರ್. ಯದಲಾಪುರೆ ವಂದಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘಗಳ ಸಹಯೋಗದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT