ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಅಣ್ವಸ್ತ್ರ ಬತ್ತಳಿಕೆಯಲ್ಲಿ 110 ಪರಮಾಣು ಸಿಡಿತಲೆ ಸಂಗ್ರಹ: ಅಮೆರಿಕ

Last Updated 15 ಫೆಬ್ರುವರಿ 2013, 10:16 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದ ಅಣ್ವಸ್ತ್ರ ಬತ್ತಳಿಕೆಯಲ್ಲಿ ಪ್ರಸ್ತುತ 90 ರಿಂದ 110 ಪರಮಾಣು ಸಿಡಿತಲೆಗಳು ಇವೆ ಎಂದು ಇತ್ತೀಚಿನ ಕಾಂಗ್ರೆಸ್ ವರದಿಯೊಂದು ಹೇಳಿದೆ. ಪಾಕಿಸ್ತಾನವು ಅಮೆರಿಕದೊಂದಿಗೆ ಪರಮಾಣು ಸಹಕಾರ ಒಪ್ಪಂದಕ್ಕೆ ಆಸಕ್ತವಾಗಿದೆ ಎಂದೂ ಇದೇ ವರದಿ ಅಮೆರಿಕದ ಶಾಸನಕರ್ತರಿಗೆ ತಿಳಿಸಿದೆ. ಇಂತಹ ಒಪ್ಪಂದಕ್ಕೆ ಕಾಂಗ್ರೆಸ್ ಅನುಮೋದನೆಯ ಅಗತ್ಯ ಇದೆ.

'ಪಾಕಿಸ್ತಾನದ ಅಣ್ವಸ್ತ್ರ ಬತ್ತಳಿಕೆಯಲ್ಲಿ ಅಂದಾಜು 90ರಿಂದ 110 ಪರಮಾಣು ಸಿಡಿತಲೆಗಳು ಇವೆ. ಈ ಸಂಖ್ಯೆ ಇದಕ್ಕಿಂತ ದೊಡ್ಡದು ಇರಲೂ ಬಹುದು' ಎಂದು ಅಮೆರಿಕ ಕಾಂಗ್ರೆಸ್ಸಿನ ಸ್ವತಂತ್ರ ಸಂಶೋಧನಾ ದಳವಾಗಿರುವ ಕಾಂಗ್ರೆಸ್  ಸಂಶೋಧನಾ ಸೇವೆಯ (ಸಿ ಆರ್ ಎಸ್) ವರದಿ ಹೇಳಿದೆ.

ಪಾಕಿಸ್ತಾನವು ವಿದಳನ ಉತ್ಪನ್ನಗಳನ್ನೂ ತಯಾರಿಸುತ್ತಿದೆ. ಜೊತೆಗೆ ವಿತರಣಾ ವಾಹನಗಳ ಸಂಖ್ಯೆಯನ್ನೂ ಹೆಚ್ಚಿಸುತ್ತಿದೆ. ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಪ್ರಮಾಣ ಹಾಗೂ ಗುಣಾತ್ಮಕವಾಗಿ ಅಭಿವೃದ್ಧಿ ಪಡಿಸಿಕೊಳ್ಳಲು  ಈ ಹೆಜ್ಜೆಗಳು ಪಾಕಿಸ್ತಾನಕ್ಕೆ ನೆರವಾಗಲಿವೆ ಎಂದು ವರದಿ ವಿವರಿಸಿದೆ.

ಭಾರತದ ಬಳಿ ಅಂದಾಜು 60ರಿಂದ 80 ಅಣ್ವಸ್ತ್ರಗಳು ಇವೆ ಎಂದು ಸಾರ್ವಜನಿಕ ಅಂದಾಜು ಒಂದನ್ನು ಉಲ್ಲೇಖಿಸುತ್ತಾ ವರದಿ ತಿಳಿಸಿದೆ.

ಪಾಕಿಸ್ತಾನದ ಅಣ್ವಸ್ತ್ರ ಹಾಗೂ ಸಂಬಂಧಿತ ಸವಲತ್ತುಗಳ ವಿಸ್ತರಣೆಯ ಹಾಲಿ ಕಾರ್ಯಕ್ರಮವು 2008ರ ಭಾರತ- ಅಮೆರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಪ್ರತಿಕ್ರಿಯಾತ್ಮಕ ಪ್ರಕ್ರಿಯೆಯೇ ಎಂಬುದು ಖಚಿತವಿಲ್ಲ. ಪಾಕಿಸ್ತಾನವು ಬಹಿರಂಗ ವಿಸ್ತ್ರತ ಪರಮಾಣು ನೀತಿಯನ್ನೇನೂ ಹೊಂದಿಲ್ಲ, ಆದರೆ ಅದರ ಈ ಕ್ರಮ ಪಾಕಿಸ್ತಾನದ ವಿರುದ್ಧ ಭಾರತ ಸೇನಾ ಕಾರ್ಯಾಚರಣೆ ನಡೆಸದಂತೆ ತಡೆಯುವ ಉದ್ದೇಶದ್ದೆಂದು ಪರಿಗಣಿಸಲಾಗಿದೆ' ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT