ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಬಾಂಬ್ ಸ್ಫೋಟ, 29 ಸಾವು

Last Updated 10 ಜನವರಿ 2012, 9:00 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್ಎಸ್/ಪಿಟಿಐ): ಪಾಕಿಸ್ತಾನದ ನೈಋತ್ಯ ಭಾಗದ ಖೈಬರ್ ಕಣಿವೆಯ ಪಟ್ಟಣ ಜಮ್ರುದ್ ನ ಮಾರುಕಟ್ಟೆ ಪ್ರದೇಶದ ಟ್ಯಾಕ್ಸಿ ಸ್ಟ್ಯಾಂಡಿನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 29 ಮಂದಿ ಸಾವಿಗೀಡಾಗಿದ್ದಾರೆ. ಜೊತೆಗೆ 40ಕ್ಕೂ ಅಧಿಕ  ಮಂದಿ ಗಾಯಗೊಂಡಿದ್ದಾರೆ.

ಈ ಬಾಂಬ್ ಸ್ಫೋಟಕ್ಕೆ ತಾನೆ ಹೊಣೆ ಎಂದು ಪಾಕಿಸ್ತಾನದಲ್ಲಿನ ಉಗ್ರರ ಸಂಘಟನೆ ತಾಲಿಬಾನ್ ಮಧ್ಯಾಹ್ನ ಹೇಳಿಕೊಂಡಿದೆ. ಬಾಂಬ್ ಸ್ಫೋಟದಲ್ಲಿ  ಗಾಯಗೊಂಡವರನ್ನು ಸಮೀಪದ ಪೇಶಾವರದಲ್ಲಿನ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ಸ್ಫೋಟದಿಂದ  ಸಮೀಪದ ಪೆಟ್ರೋಲ್ ಬಂಕ್ ಮತ್ತು ಸ್ಟ್ಯಾಂಡಿನಲ್ಲಿ ನಿಲ್ಲಿಸಿದ್ದ ಏಳು ವಾಹನಗಳು  ಜಖಂಗೊಂಡಿವೆ. ಜನನಿಬೀಡ ಮಾರುಕಟ್ಟೆ ಪ್ರದೇಶದಲ್ಲಿ ಟ್ಯಾಕ್ಸಿ ಹಾಗೂ ಬಸ್ ಸ್ಟ್ಯಾಂಡಿನಲ್ಲಿ ನಿಲ್ಲಿಸಿದ್ದ ಚಿಕ್ಕ ಲಾರಿಯೊಂದರಲ್ಲಿ ಅಳವಡಿಸಿದ್ದ ಬಾಂಬ್ ಅನ್ನು ದೂರ ಸಂವೇದಿ ಸಾಧನದಿಂದ ಸ್ಫೋಟಿಸಲಾಗಿದೆ ಎಂದು ಶಂಕಿಸಲಾಗಿದೆ. 

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು ಹೇಳಿಕೆಗಳನ್ನು ನೀಡಿ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT