ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ಕಟ್ಟಡಗಳ ಸಮೀಕ್ಷೆಗೆ ಒಪ್ಪಂದ

Last Updated 6 ಜನವರಿ 2014, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಪಾರಂಪರಿಕ, ಸಾಂಸ್ಕೃತಿಕ ಹಿನ್ನೆಲೆ­ಯುಳ್ಳ ಕಟ್ಟಡಗಳ ಸಮೀಕ್ಷೆ ಹಾಗೂ ಅಭಿವೃದ್ಧಿ­ಪಡಿಸುವ ಬಗ್ಗೆ ಯೋಜನೆ ರೂಪಿಸಲು ಭಾರತೀಯ ಪಾರಂಪರಿಕ ನಗರಗಳ ಜಾಲ (ಐಎಚ್‌ಸಿಎನ್‌) ಸಂಸ್ಥೆ­ಯೊಂ­ದಿಗೆ ಸೋಮ­ವಾರ ಒಪ್ಪಂದ ಮಾಡಿ­ಕೊಂಡಿದೆ.

ಪಾರಂಪರಿಕ ಕಟ್ಟಡಗಳ  ಸಮೀಕ್ಷೆ ನಡೆಸಿ ಸಂರಕ್ಷಿಸಲು ತೀರ್ಮಾ­ನಿಸ­ಲಾಗಿದ್ದು, ಐಎಚ್‌ಸಿಎನ್‌ ಜತೆಗೆ ಒಪ್ಪಂದ ಮಾಡಿ­ಕೊಳ್ಳಲಾಗಿದೆ ಎಂದು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ತಿಳಿಸಿದರು.

ಐಎಚ್‌ಸಿಎನ್‌ ಮುಖ್ಯಸ್ಥರಾದ ರಾತಿ ವಿನಯ್ ಝಾ ಮಾತನಾಡಿ, ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಸಂಸ್ಥೆಯನ್ನು ಯುನೆಸ್ಕೊ ಸಂಸ್ಥೆ ಸಹ ಗುರುತಿಸಿದೆ ಎಂದು ಹೇಳಿದರು.

ಬಿಬಿಎಂಪಿ ಪರವಾಗಿ ವಿಶೇಷ ಆಯುಕ್ತ (ಯೋಜನೆ) ವಿ.ಯಶವಂತ್ ಹಾಗೂ ಐಎಚ್‌ಸಿಎನ್‌ ಸಂಸ್ಥೆಯ ಪರವಾಗಿ ರಾತಿ ವಿನಯ್ ಝಾ ಒಪ್ಪಂದಕ್ಕೆ ಸಹಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT