ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಪಡೆಯಲು ಹರಸಾಹಸ

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಸರ್ಕಾರಿ ನೌಕರನ ವಿಧವಾ ಪತ್ನಿ ಬ್ಯಾಂಕಿನಲ್ಲಿ ಪ್ರತಿ ತಿಂಗಳು ಪೆನ್‌ಶನ್ ಪಡೆಯಬೇಕಾದರೆ ಹರಸಾಹಸ ಮಾಡಬೇಕಾಗುತ್ತದೆ.ಅನಕ್ಷರಸ್ಥರಿಗಂತೂ ಯಾರೂ ಸಹಾಯ ಮಾಡುವುದಿಲ್ಲ. ಅವರು ಹಣ ಪಡೆಯಬೇಕಾದರೆ, ಇನ್ನೊಬ್ಬ ಸದರಿ ಬ್ಯಾಂಕಿನ ಗ್ರಾಹಕನ ಸಹಿ ಮಾಡಿಸುವುದು ಕಡ್ಡಾಯ.

ಇಂಥ ಸಂದರ್ಭದಲ್ಲಿ ದೀನರಾಗಿ ಕಂಡ ಕಂಡವರನ್ನೆಲ್ಲಾ ವಿನಂತಿಸಿದರೆ ಯಾವನೋ ಒಬ್ಬ ಅರ್ಥ ಮಾಡಿಕೊಂಡು ಸಹಿ ಮಾಡಿದರೂ, ಕನ್ನಡ ಬಾರದ ಕ್ಯಾಶಿಯರ್ ಮಾಂತ್ರಿಕ ಗೊಂಬೆಯಂತೆ ಏನೊಂದು ಮಾತಾಡದೇ ಕನ್ನಡ ಸೈ ಎಂದು ಸಾಗ ಹಾಕುತ್ತಾನೆ.

ಇನ್ನೊಂದು ವಿಚಿತ್ರವೆಂದರೆ, ಎಪ್ಪತ್ತರ ಮುದುಕಿಯೂ ಸಹ ತಾನು ಮತ್ತೊಂದು ಮದುವೆಯಾಗಿಲ್ಲವೆಂದು, ಕಾನೂನುಬದ್ಧವಾಗಿ ಬ್ಯಾಂಕಿನವರು ಪೂರೈಸುವ ಕಾಗದ ಪತ್ರಗಳಿಗೆ ಪ್ರತಿವರ್ಷ ರುಜು ಮಾಡಿಕೊಡಬೇಕು. ಈ ಮಜುಗರ ಯಾರಿಗೂ ಅರ್ಥವಾಗುವುದಿಲ್ಲವೇ.

ಇಲ್ಲಿ ಇಂಥ ಪೆನ್‌ಶನ್‌ದಾರರು ಅದಾವ ರೀತಿಯಿಂದ ಮೋಸ ಮಾಡಲು ಸಾಧ್ಯ? ಈ ರೀತಿ ನಿಯಮಗಳು ಬ್ಯಾಂಕಿನವರಿಗೆ ಅವಶ್ಯವೇ ಆಗಿದ್ದರೆ ಇದನ್ನೊಂದಿಷ್ಟು ಸರಳಗೊಳಿಸುವುದು ಅಗತ್ಯ. ಅನಕ್ಷರಸ್ಥ ಮಹಿಳೆಯರಿಗೆ ಪಾಸ್‌ಬುಕ್ ಆಧಾರದ ಮೇಲೆಯೇ ಹಣ ನೀಡುವಂತಾಗಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT