ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ: ಜಿಲ್ಲೆಗೆ 3ನೇ ಸ್ಥಾನ

Last Updated 24 ಮೇ 2012, 6:05 IST
ಅಕ್ಷರ ಗಾತ್ರ

ಮಡಿಕೇರಿ: 2011-12ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಶೇ 73.11ರಷ್ಟು ಫಲಿತಾಂಶ ಸಾಧಿಸುವ ಮೂಲಕ ರಾಜ್ಯದ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಶೇ 72.14ರಷ್ಟು ಫಲಿತಾಂಶ ತೋರಿ, 4ನೇ ಸ್ಥಾನ ಪಡೆದಿತ್ತು. ಈ ವರ್ಷ ಫಲಿತಾಂಶವನ್ನು ಉತ್ತಮ ಪಡಿಸಿ ಕೊಂಡಿದಲ್ಲದೇ, ರಾಜ್ಯದ ಪಟ್ಟಿಯಲ್ಲೂ ಏರುಮುಖ ಕಂಡಿದೆ.

ಪರೀಕ್ಷೆ ತೆಗೆದುಕೊಂಡ 5433 ವಿದ್ಯಾರ್ಥಿಗಳ ಪೈಕಿ 3972 ವಿದ್ಯಾರ್ಥಿಗಳು ಪಾಸ್ (ಶೇ 73.11) ಆಗಿದ್ದಾರೆ. ಇದರಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸಂಖ್ಯೆ 4498 ಆಗಿದ್ದು, ಇವರಲ್ಲಿ 3706 ಉತ್ತೀರ್ಣರಾಗಿದ್ದಾರೆ (ಶೇ 82.39). ಇನ್ನುಳಿದಂತೆ ಖಾಸಗಿ ವಿದ್ಯಾರ್ಥಿಗಳು, ಪುನಃ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳು ಸೇರಿ ್ದದಾರೆ.

ಪ್ರತಿ ವರ್ಷದ ಸಂಪ್ರದಾಯದಂತೆ ವಿದ್ಯಾರ್ಥಿನಿಯರು ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದವರ ಪೈಕಿ 2642 ವಿದ್ಯಾರ್ಥಿಗಳು ಹಾಗೂ 2791 ವಿದ್ಯಾರ್ಥಿನಿಯರು ಇದ್ದರು. ಇವರಲ್ಲಿ 1746 (ಶೇ 66.09) ವಿದ್ಯಾರ್ಥಿಗಳು ಹಾಗೂ 2226 (ಶೇ 79.76) ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ ದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಎಸ್‌ಸಿ/ಎಸ್‌ಟಿ ಫಲಿತಾಂಶ:
ಪರೀಕ್ಷೆಯಲ್ಲಿ ಹಾಜರಾಗಿದ್ದ 734 ಎಸ್‌ಸಿ ವಿದ್ಯಾರ್ಥಿಗಳ ಪೈಕಿ 471 ವಿದ್ಯಾರ್ಥಿಗಳು (ಶೇ 64.17) ಪಾಸಾಗಿದ್ದಾರೆ. 216 ಎಸ್‌ಟಿ ವಿದ್ಯಾ ರ್ಥಿಗಳ ಪೈಕಿ 140 ವಿದ್ಯಾರ್ಥಿಗಳು (ಶೇ 64.81) ತೇರ್ಗಡೆ ಹೊಂದಿದ್ದಾರೆ. ಪ್ರವರ್ಗ 1ರ 69 ವಿದ್ಯಾರ್ಥಿಗಳ ಪೈಕಿ 51 ವಿದ್ಯಾರ್ಥಿಗಳು (ಶೇ 73.91) ಪಾಸಾಗಿದ್ದಾರೆ. 2ಎ ವರ್ಗದ 908 ವಿದ್ಯಾರ್ಥಿಗಳ ಪೈಕಿ 683 ವಿದ್ಯಾರ್ಥಿ ಗಳು (ಶೇ 75.22) ಉತ್ತೀರ್ಣ ರಾಗಿದ್ದಾರೆ.

2ಬಿ ವರ್ಗದ 729 ವಿದ್ಯಾರ್ಥಿಗಳ ಪೈಕಿ 515 ವಿದ್ಯಾರ್ಥಿಗಳು (ಶೇ 70.64) ಉತ್ತೀರ್ಣರಾಗಿದ್ದಾರೆ. 3ಎ ವರ್ಗದ 1493 ವಿದ್ಯಾರ್ಥಿಗಳ ಪೈಕಿ 1150 ವಿದ್ಯಾರ್ಥಿಗಳು (ಶೇ 77.03) ಉತ್ತೀರ್ಣರಾಗಿದ್ದಾರೆ. 3ಬಿ ವರ್ಗದ 465 ವಿದ್ಯಾರ್ಥಿಗಳ ಪೈಕಿ 368 ವಿದ್ಯಾರ್ಥಿಗಳು (ಶೇ 79.14) ಉತ್ತೀರ್ಣರಾಗಿದ್ದಾರೆ. ಇತರೆ ವರ್ಗದ 819 ವಿದ್ಯಾರ್ಥಿಗಳ ಪೈಕಿ 594 ವಿದ್ಯಾರ್ಥಿಗಳು (ಶೇ 72.53) ಉತ್ತೀರ್ಣರಾಗಿದ್ದಾರೆ.

ವಿಭಾಗಗಳ ಪೈಕಿ:
ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳ ಪೈಕಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ತಮ (ಶೇ 80.02) ಸಾಧನೆ ತೋರಿದ್ದಾರೆ. 2082 ವಿದ್ಯಾರ್ಥಿಗಳ ಪೈಕಿ 1666 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಇನ್ನುಳಿದಂತೆ ಕಲಾ ವಿಭಾಗದ 2461 ವಿದ್ಯಾರ್ಥಿಗಳ ಪೈಕಿ 1681 ವಿದ್ಯಾರ್ಥಿಗಳು (ಶೇ 68.31) ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 890 ವಿದ್ಯಾರ್ಥಿಗಳ ಪೈಕಿ 625 ವಿದ್ಯಾರ್ಥಿಗಳು (ಶೇ 70.22) ಉತ್ತೀರ್ಣರಾಗಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ: ನಗರ ಪ್ರದೇಶಗಳಿಗೆ ಹೋಲಿಸಿದರೆ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತೋರಿದ್ದಾರೆ. ಗ್ರಾಮೀಣ ಪ್ರದೇಶದ 1893 ವಿದ್ಯಾರ್ಥಿಗಳ ಪೈಕಿ 1453 ವಿದ್ಯಾರ್ಥಿಗಳು (ಶೇ 76.76) ತೇರ್ಗಡೆ ಹೊಂದಿದ್ದಾರೆ. ನಗರ ಪ್ರದೇಶದ 3540 ವಿದ್ಯಾರ್ಥಿಗಳ ಪೈಕಿ 2519 ವಿದ್ಯಾರ್ಥಿಗಳು (ಶೇ 71.16) ಉತ್ತೀರ್ಣರಾಗಿದ್ದಾರೆ.

ಆಂಗ್ಲ ಮಾಧ್ಯಮ:
ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. 2247 ವಿದ್ಯಾರ್ಥಿಗಳ ಪೈಕಿ 1731 ವಿದ್ಯಾರ್ಥಿಗಳು (ಶೇ 77.04) ಪಾಸಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 3186 ವಿದ್ಯಾರ್ಥಿಗಳ ಪೈಕಿ 2241 ವಿದ್ಯಾರ್ಥಿಗಳು (ಶೇ 70.34) ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT